Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul ಸಾಮಾಜಿಕ ತಾಣದಲ್ಲಿ ಬೆಂಗಳೂರು ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ್ದು ಏಕೆ?

ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ದುಲೀಪ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ಭಾರತ ಎ ತಂಡದ ಪರ ಬ್ಯಾಟ್ ಮಾಡಿದರು. ಈ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಿತು. ಈ ವೇಳೆ ಅಭಿಮಾನಿಗಳು ಕೆ.ಎಲ್ ರಾಹುಲ್ ಅವರಿಗೆ ಬೆಂಬಲವನ್ನು ಸೂಚಿಸಿದರು.

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯಲು ಕನ್ನಡಿಗ ಕೆಎಲ್‌ ರಾಹುಲ್ ದುಲೀಪ್ ಟ್ರೋಫಿಯಲ್ಲಿ ರನ್‌ ಕಲೆ ಹಾಕುವುದು ಅನಿವಾರ್ಯವಾಗಿತ್ತು. ಭಾರತ ಬಿ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ರಾಹುಲ್‌ 37 ರನ್‌ ಮಾಡಿ ನಿರಾಸೆ ಅನುಭವಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ 57 ರನ್‌ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಈ ಪಂದ್ಯ ಮುಗಿದ ಬಳಿಕ ರಾಹುಲ್‌ ಹಾಕಿರುವ ಒಂದು ಪೋಸ್ಟ್‌ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಭಾರತ ಎ ಸೋಲು ಕಂಡಿದೆ.

Why Did KL Rahul Express Gratitude to Bengaluru Fans on Social Media

ರಾಹುಲ್‌ ಪರ ಘೋಷಣೆ

ಇದೇ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಮೈದಾನಕ್ಕೆ ಇಳಿದಾಗ ಫ್ಯಾನ್ಸ್‌ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಫ್ಯಾನ್ಸ್‌ ಆರ್‌ಸಿಬಿ ನಾಯಕ ಹೇಗಿರಬೇಕು, ಕೆ.ಎಲ್‌ ರಾಹುಲ್‌ ನಂತಿರಬೇಕು ಎಂದು ಸಹ ಘೋಷಣೆ ಕೂಗಿದ್ದರು. ಈ ಘೋಷಣೆ ಸಖತ್ ವೈರಲ್ ಆಗಿತ್ತು. ಕೆಎಲ್‌ ರಾಹುಲ್‌ ಆರ್‌ಸಿಬಿ ತಂಡದ ಪರ ಆಡಬೇಕು ಎಂದು ಅಭಿಮಾನಿಗಳ ಬೇಡಿಕೆ ಹೆಚ್ಚಾಗುತ್ತಿದೆ.

ಧನ್ಯವಾದ ತಿಳಿಸಿದ್ದು ಏಕೆ?

ದುಲೀಪ್ ಟ್ರೋಫಿ ಪಂದ್ಯದ ಬಳಿಕ ಕೆಎಲ್ ರಾಹುಲ್ ಅವರು ಬೆಂಬಲಿಸಿದ್ದಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಈ ಪೋಸ್ಟ್ ಸಹ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ಈ ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಸಲಿಗೆ ಕೆ.ಎಲ್‌ ರಾಹುಲ್‌ ಈ ರೀತಿ ಪೋಸ್ಟ್‌ ಹಾಕಿದ್ದು ಏಕೆ ಎಂಬ ಸಂಶಯ ಈಗ ಮೂಡುತ್ತಿದೆ.

Why Did KL Rahul Express Gratitude to Bengaluru Fans on Social Media

1- ಕೆಎಲ್‌ ರಾಹುಲ್‌ ಕರ್ನಾಟಕದ ಸ್ಟಾರ್ ಆಟಗಾರ. ಇವರು ಎಂ.ಚಿನ್ನಸ್ವಾಮಿ ಅಂಗಳದಲ್ಲೇ ಆಡಿ ಬೆಳೆದ ಪ್ರತಿಭೆ. ತವರಿನಲ್ಲಿ ಅಭಿಮಾನಿಗಳ ಬೆಂಬಲವನ್ನು ಕಂಡು ಅವರು ಮನಸ್ಸು ಕರಗಿ ಇವರು ಈ ರೀತಿ ಪೋಸ್ಟ್ ಮಾಡಿರಬಹುದು.

2- ಕೆಎಲ್‌ ರಾಹುಲ್‌ ಅವರು ಲಕ್ನೋ ಸೂಪರ್‌ ಜೈಂಟ್ಸ್ ತಂಡದಲ್ಲಿದ್ದಾರೆ. ಆದರೆ ಅವರಿಂದ ನಾಯಕತ್ವವನ್ನು ಕಸಿದುಕೊಂಡು ಬೇರೆಯವರಿಗೆ ನೀಡಲಾಗುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ. ಈ ಬೆನ್ನಲ್ಲೆ ರಾಹುಲ್‌, ಆರ್‌ಸಿಬಿ ತಂಡದ ಚುಕ್ಕಾಣಿ ಹಿಡಿಯಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿದ್ದವು. ಇದಕ್ಕೆ ಪೂರಕವಾಗಿ ನೋಡಿದರೆ, ದುಲೀಪ್‌ ಟ್ರೋಫಿ ಪಂದ್ಯದ ಬಳಿಕ ರಾಹುಲ್‌ ಹಾಕಿರುವ ಪೋಸ್ಟ್‌ಗೆ ಹಲವು ಬಣ್ಣಗಳು ಹತ್ತಿಕೊಳ್ಳುತ್ತವೆ.

3- ಇನ್ನೊಂದು ಅರ್ಥದಲ್ಲಿ ನೋಡುವುದಾದರೆ ರಾಹುಲ್‌ ನಿಮ್ಮ ಪ್ರೀತಿಗೆ ಸದಾ ಚಿರ ಋಣಿ. ನಾನು
ಲಕ್ನೋ ಸೂಪರ್‌ ಜೈಂಟ್ಸ್‌ ಪರವೇ ಕಾಣಿಸಿಕೊಳ್ಳುವೆ. ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದಗಳು ಎಂಬ ರೀತಿಯು ಈ ಪೋಸ್ಟ್ ಕಾಣಿಸಿಕೊಳ್ಳುತ್ತಿದೆ.

4-ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾಗಲೂ ಬೆಂಬಲಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕಿದಾಗಲೂ ಬೆಂಬಲಿಸಿದ್ದೀರಿ ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂಬ ರೀತಿ ಪೋಸ್ಟ್‌ ಇದಾಗಿದೆ.

5- ಬೆಂಗಳೂರು ತಂಡದ ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ರಾಹುಲ್‌ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಪೋಸ್ಟ್ ಮೂಲಕ ತಿಳಿಸಿದ್ದಾರೆ.

Story first published: Monday, September 9, 2024, 8:15 [IST]
Other articles published on Sep 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+