Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

R Ashwin Retirement: ಆಸ್ಟ್ರೇಲಿಯಾ ಸರಣಿಯ ಮಧ್ಯದಲ್ಲಿ ಅಶ್ವಿನ್ ಏಕಾಏಕಿ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದೇಕೆ?

ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಬೆನ್ನೆಲುಬಾಗಿದ್ದ ಆಟಗಾರ ರವಿಚಂದ್ರನ್ ಅಶ್ವಿನ್ ಎಂದು ಕರೆದರೆ ತಪ್ಪಾಗದು. ಅಶ್ವಿನ್ ತಮ್ಮ ಮ್ಯಾಜಿಕ್ ಸ್ಪಿನ್ ಬೌಲಿಂಗ್ ಮೂಲಕ ಅನೇಕ ಸೋಲುವ ಪಂದ್ಯಗಳನ್ನು ಭಾರತದ ಪರ ತಿರುಗಿಸಿದ್ದರು. ಆದರೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಅವರ ನಿವೃತ್ತಿ ಘೋಷಣೆ ಕೇಳಿ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಭಾರತ ತಂಡದಲ್ಲಿ ಅವರ ಸ್ಥಾನವನ್ನು ತುಂಬುವುದು ಯಾರಿಗಾದರೂ ದೊಡ್ಡ ಸವಾಲಾಗಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸಮಯದಲ್ಲಿ ಅಶ್ವಿನ್ ಏಕೆ ವಿದಾಯ ಹೇಳಿದರು ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿದೆ. ಅಶ್ವಿನ್ ಅವರ ಈ ನಿರ್ಧಾರದ ಹಿಂದಿನ ಸಂಪೂರ್ಣ ಕಥೆ ಇಲ್ಲಿದೆ.

ಅಶ್ವಿನ್ ತಮ್ಮ ನಿವೃತ್ತಿಯ ಬಗ್ಗೆ ಬಹಳ ದಿನಗಳಿಂದ ಯೋಚಿಸುತ್ತಿದ್ದರು. ಕಳೆದ ವರ್ಷವೇ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ ಎಂದು ವರದಿಗಳು ಹೇಳಿದ್ದವು. 2023ರಲ್ಲಿ ತವರಿನಲ್ಲಿ ನಡೆದ ಕೊನೆಯ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಅವರ ನಿವೃತ್ತಿಯ ಸುದ್ದಿ ಭಾರೀ ಸದ್ದು ಮಾಡಿತ್ತು. ಅಶ್ವಿನ್ ಕೂಡ ವಿದಾಯದ ಮನಸಿನಲ್ಲಿದ್ದರು. ಏಕೆಂದರೆ ಆ ಸಮಯದಲ್ಲಿ ಅಶ್ವಿನ್ ಅವರು ಮೊಣಕಾಲು ಗಾಯದಿಂದ ಬಳಲುತ್ತಿದ್ದರು. ಹೀಗಾಗಿ ಅಶ್ವಿನ್ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಆದರೆ ಅಶ್ವಿನ್ ತಮ್ಮ ನಿರ್ಧಾರವನ್ನು ಅಂದು ಹೇಳಿರಲಿಲ್ಲ.

Why did Ravichandran Ashwin suddenly decide to retire

ವರದಿಯ ಪ್ರಕಾರ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುಂಚೆಯೇ, ಅಶ್ವಿನ್ ನಿವೃತ್ತಿಯ ಬಗ್ಗೆ ತಮ್ಮ ಕುಟುಂಬಕ್ಕೆ ತಿಳಿಸಿದ್ದರು. ಆದರೆ, ಕುಟುಂಬಸ್ಥರು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಏಕೆಂದರೆ ಅವರ ಕುಟುಂಬಸ್ಥರು ಈ ಬಗ್ಗೆ ಹೆಚ್ಚು ಯೋಚಿಸುವಂತೆ ಅಶ್ವಿನ್ ಅವರಿಗೆ ಸಲಹೆ ನೀಡಿದ್ದರು. ಇದಾದ ನಂತರು ಅವರು ಮಂಗಳವಾರ ರಾತ್ರಿ, ಡಿಸೆಂಬರ್ 18 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ದಿನ ಎಂದು ತಮ್ಮ ಅಂತಿಮ ನಿರ್ಧಾರದ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದರು.

ಅದರಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಅಶ್ವಿನ್ ತಮ್ಮ ನಿರ್ಧಾರವನ್ನು ತಂಡದ ಎಲ್ಲಾ ಆಟಗಾರರಿಗೆ ತಿಳಿಸಿದ್ದರು. ಇದರಿಂದಾಗಿ ಎಲ್ಲರೂ ಆಶ್ಚರ್ಯಚಕಿತರಾದರು.

ಆಸ್ಟ್ರೇಲಿಯಾದಲ್ಲಿ ಉಳಿದೆರಡು ಟೆಸ್ಟ್ ಪಂದ್ಯ‌ಗಳನ್ನು ಆಡುವ ಅವಕಾಶವೂ ಅಶ್ವಿನ್‌ಗೆ ಇತ್ತು. ಆದರೆ ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಎರಡು ಟೆಸ್ಟ್‌ಗಳಿಗೂ ಮೊದಲು ಅವರು ತಮ್ಮ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ.

ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್?

ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಅಶ್ವಿನ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ಆ ಸಮಯದಲ್ಲೂ ಅಶ್ವಿನ್‌ಗೆ ಇನ್ನೂ ಕನಿಷ್ಠ ಎರಡು ವರ್ಷ ಆಡಲು ಬಾಕಿ ಇತ್ತು. ಆದರೆ, ಅವರನ್ನು ಬದಲಿಸಲು ಟೀಮ್ ಇಂಡಿಯಾ ಮುಂದೆ ಯಾವುದೇ ಪ್ರಬಲ ಆಟಗಾರ ಕಾಣಲಿಲ್ಲ. ಇದರಿಂದಾಗಿ ಅವರು 18 ತಿಂಗಳ ನಂತರ ನಿವೃತ್ತರಾಗಲು ನಿರ್ಧರಿಸಿದರು. ಇದೀಗ ಭಾರತ ತಂಡದ ಪರ ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ಭಾರತದ ಪರ ಆಡಿದ್ದರು. ಈ ವೇಳೆ ವಾಷಿಂಗ್ಟನ್ ಸುಂದರ್ ತಮ್ಮ ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ಎಲ್ಲರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಅಶ್ವಿನ್ ಅವರ ಸ್ಥಾನವನ್ನು ವಾಷಿಂಗ್ಟನ್ ಸುಂದರ್ ತುಂಬುತ್ತಾರಾ? ಎಂಬ ಪ್ರಶ್ನೆ ಎದ್ದಿದೆ.

Story first published: Wednesday, December 18, 2024, 23:09 [IST]
Other articles published on Dec 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+