Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಆರ್‌ಸಿಬಿ ಸ್ಟಾರ್ ಆಟಗಾರರನ್ನೇ ಬ್ಲಾಕ್ ಮಾಡಿದ್ದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಾಂತರ ಜನ ವಿರಾಟ್ ಕೊಹ್ಲಿಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಇದೀಗ ವಿರಾಟ್ ಕೊಹ್ಲಿ ಬಗ್ಗೆ ಹೊಸ ವಿಚಾರವೊಂದು ಹೊರ ಬಿದ್ದಿದೆ.

ವಿರಾಟ್ ಕೊಹ್ಲಿ ತನ್ನ ಸಹ ಆಟಗಾರನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಬ್ಲಾಕ್ ಮಾಡಿರುವ ಬಗ್ಗೆ ಸ್ಟಾರ್ ಆಟಗಾರರ ಮಾತಾನಾಡಿದ್ದು, ಬ್ಲಾಕ್ ಮಾಡುವುದಕ್ಕೆ ಕೊಟ್ಟಿರುವ ಕಾರಣವನ್ನು ಎಲ್ಲೆಡೆ ವೈರಲ್ ಆಗಿದೆ. ಈ ಸ್ಟಾರ್ ಅಟಗಾರ ಬೇರೆ ಯಾರು ಅಲ್ಲ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಲ್‌ರೌಂಡರ್‌ ಗ್ಲೆನ್ ಮ್ಯಾಕ್ಸ್‌ವೆಲ್.

Why did Virat Kohli block RCB star player

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಜೊತೆ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ್ದರೂ ಸಹ. ಆದರೆ ಇಬ್ಬರೂ ಆಟಗಾರರು ತಮ್ಮ ದೇಶಕ್ಕಾಗಿ ಆಡಲು ಬಂದಾಗ, ಸ್ನೇಹಕ್ಕೆ ಆದ್ಯತೆ ನೀಡುವುದಿಲ್ಲ. ವಿರಾಟ್ ಅವರ ಸ್ನೇಹ ಎಲ್ಲರಿಗೂ ತಿಳಿದಿದ್ದರೂ, ಅವರ ಅಸಮಾಧಾನ ಎಷ್ಟರಮಟ್ಟಿಗಿದೆ ಎಂದರೆ ಕೊಹ್ಲಿ ತಮ್ಮ ತಂಡದ ಆಟಗಾರರನ್ನು ಸಹ ಬಿಡುವುದಿಲ್ಲ. ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಯನ್ನು ಸ್ಲೆಡ್ಜ್ ಮಾಡಲು ಯತ್ನಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆ ವಿರಾಟ್ ಟಕ್ಕರ್ ಕೊಟ್ಟಿದ್ದರು.

ನಡೆದಿದ್ದೇನು?

2017ರಲ್ಲಿ ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಭುಜದ ಗಾಯಕ್ಕೆ ತುತ್ತಾಗಿದ್ದರಿಂದ ತಾತ್ಕಾಲಿಕವಾಗಿ ಹೊರಗುಳಿದಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಗಾಯಗೊಂಡಿದನ್ನು ಮ್ಯಾಕ್ಸ್‌ವೆಲ್ ಗೇಲಿ ಮಾಡಿದ್ದರು.

ಮ್ಯಾಕ್ಸ್‌ವೆಲ್ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಗ್ಲೆನ್ ಮ್ಯಾಕ್ಸ್‌ವೆಲ್ ಮಾತಾನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಆರ್‌ಸಿಬಿ ಕುರಿತು ಮಾತನಾಡುವಾಗ, 'ನಾನು ಆರ್‌ಸಿಬಿಗೆ ಬಂದಾಗ, ನನಗೆ ಮೆಸೇಜ್ ಕಳುಹಿಸಿದ ಮೊದಲ ವ್ಯಕ್ತಿ ವಿರಾಟ್. ಐಪಿಎಲ್‌ನಲ್ಲಿ ಪ್ರಿ-ಸೀಸನ್ ತರಬೇತಿ ಶಿಬಿರಕ್ಕೆ ಬಂದಾಗ ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿಗಾಗಿ ಹುಡುಕಾಡಿದರೂ ಸಿಗಲಿಲ್ಲ. ನಾನು ದಿಗ್ಭ್ರಮೆಗೊಂಡೆ, ಆಗ ಯಾರೋ ನನಗೆ ಮಾಹಿತಿ ನೀಡಿದರು. ಸರ್ಚ್‌ನಲ್ಲಿ ಕೊಹ್ಲಿ ನಿಮಗೆ ಸಿಗುತ್ತಿಲ್ಲ ಎಂದರೆ ಅವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ಹೇಳಿದ್ದರು.

ಇದಾದ ನಂತರ ನಾನು ಕೊಹ್ಲಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೀವು ನನ್ನನ್ನು ಬ್ಲಾಕ್ ಮಾಡಿದ್ದೀರಾ ಎಂದು ಕೇಳಿದೆ. ಹೌದು ಟೆಸ್ಟ್ ಪಂದ್ಯದಲ್ಲಿ ನೀವು ನನ್ನನ್ನು ಗೇಲಿ ಮಾಡಿದ್ದರಿಂದ ಬ್ಲಾಕ್ ಮಾಡಿದ್ದೆ ಎಂದು ಕೊಹ್ಲಿ ಹೇಳಿದರು. ಆಗ ನಾನು ಓಕೆ ಈಗ ಅನ್‌ಬ್ಲಾಕ್ ಮಾಡಿ ಎಂದು ಹೇಳಿದೆ. ಈ ಘಟನೆಯ ನಂತರ ನಾವು ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂದು ವಿರಾಟ್ ಕೊಹ್ಲಿ ಬ್ಲಾಕ್ ಮಾಡಿದರ ಹಿಂದಿನ ಕಥೆಯನ್ನು ಮ್ಯಾಕ್ಸ್‌ವೆಲ್ ಹಂಚಿಕೊಂಡಿದ್ದಾರೆ.

Story first published: Tuesday, October 29, 2024, 19:27 [IST]
Other articles published on Oct 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+