Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್‌ ಆಟಗಾರನಿಗೆ ಮಣೆ ಹಾಕಿದ ಸನ್‌: ಅಭಿಮಾನಿಗಳ ಆಕ್ರೋಶ

ಐಪಿಎಲ್ 2026 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲ ತಂಡಗಳು ಮೈದಾನದಲ್ಲಿ ತಾಲೀಮು ನಡೆಸಿವೆ. ಆದರೆ ಮಾಜಿ ಐಪಿಎಲ್‌ ಚಾಂಪಿಯನ್ ತಂಡಕ್ಕೆ ಅಭಿಮಾನಿಗಳು ಬಾಯ್‌ಕಾಟ್‌ ಅಭಿಯಾನವನ್ನು ಆರಂಭಿಸಿದ್ದಾರೆ. ಆ ತಂಡ ಯಾವುದು? ಅಭಿಮಾನಿಗಳು ಹೀಗೆ ಹೇಳುತ್ತಿರುವುದು ಏಕೆ ಎಂಬ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ಐಪಿಎಲ್‌ನ ಚಾಂಪಿಯನ್‌ ತಂಡ. ಈ ತಂಡವನ್ನು ಅಭಿಮಾನಿಗಳು ಪ್ರೀತಿಯಿಂದ ಆರೆಂಜ್ ಆರ್ಮಿ ಎಂದು ಕರೆಯುತ್ತಾರೆ. ಈ ತಂಡದ ಪಂದ್ಯಗಳು ಎಲ್ಲಿಯೇ ನಡೆದರೂ ಸಹ ಅಭಿಮಾನಿಗಳು ಅಲ್ಲಿಗೆ ಹಾಜರಾಗುತ್ತಾರೆ. ಆದರೆ ಈ ತಂಡದ ಮಾಲೀಕೆ ತೆಗೆದುಕೊಂಡು ಆ ಒಂದು ನಿರ್ಧಾರ ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

Why Fans are Trending

ದಿ ಹಂಡ್ರೆಡ್‌ ಲೀಗ್‌ ಟೂರ್ನಿಗಾಗಿ ಗುರುವಾರ ಹರಾಜು ಪ್ರಕ್ರಿಯೆ ನಡೆಯಿತು. ಈ ಹರಾಜಿನಲ್ಲಿ ಕಾವ್ಯಾ ಮಾರನ್‌ ಮುಂದಾಳತ್ವದ ಸನ್‌ರೈಸರ್ಸ್‌ ಲೀಡ್ಸ್‌ ತಂಡ ಸಹ ಭಾಗವಹಿಸಿತ್ತು. ಈ ಹರಾಜಿನಲ್ಲಿ ಪಾಕಿಸ್ತಾನ ಆಟಗಾರರು ಸಹ ಭಾಗವಹಿಸಿದ್ದರು. ಪಾಕ್‌ ಆಟಗಾರ ಅಬ್ರಾರ್‌ ಅಹ್ಮದ್‌ಗೆ ಕಾವ್ಯಾ ಮಾರನ್‌ ಬಿಡ್ ಮಾಡಲು ಆರಂಭಿಸಿದರು. ಅಲ್ಲದೆ 2.34 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಬರಮಾಡಿಕೊಂಡರು.

ವಿವಾದ ಹುಟ್ಟಿದ್ದು ಏಕೆ?

ದಿ ಹಂಡ್ರೆಡ್‌ ಲೀಗ್‌ನಲ್ಲಿ ಸನ್‌ರೈಸರ್ಸ್‌ ಸೇರಿದಂತೆ ಐಪಿಎಲ್‌ ಮಾಲೀಕತ್ವದ ನಾಲ್ಕು ಫ್ರಾಂಚೈಸಿಗಳು ಇವೆ. ಎಷ್ಟು ವರ್ಷದ ಬಳಿಕ ಭಾರತದ ಮಾಲೀಕತ್ವ ಹೊಂದಿರುವ ತಂಡವೊಂದು ಪಾಕಿಸ್ತಾನ ಪ್ಲೇಯರ್ ಖರೀದಿ ಮಾಡಿತು. ಅಬ್ರಾರ್‌ ಅಹ್ಮದ್‌ ಅವರು ಈಗಲೂ ಪಾಕಿಸ್ತಾನದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ಆಟಗಾರರನ್ನು ಖರೀದಿಸಿದಕ್ಕೆ ಭಾರತದ ಅಭಿಮಾನಿಗಳು ಕೋಪಗೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಸನ್‌ ನಿರ್ಧಾರ ಪ್ರಶ್ನಿಸಿದ ಅಭಿಮಾನಿಗಳು

ದಿ ಹಂಡ್ರೆಡ್‌ ಲೀಗ್‌ನಲ್ಲಿ ತಂಡವನ್ನು ಹೊಂದಿರುವ ಭಾರತೀಯ ಮೂಲದ ಫ್ರಾಂಚೈಸಿ ಸನ್‌ರೈಸರ್ಸ್‌ ಲೀಡ್ಸ್‌ ಹರಾಜಿನಲ್ಲಿ ಪಾಕ್ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ದೀರ್ಘಕಾಲದ ರಾಜಕೀಯ ಉದ್ವಿಗ್ನತೆಯಿಂದಾಗಿ, ಐಪಿಎಲ್ ಫ್ರಾಂಚೈಸಿಗಳು ಪಾಕ್ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಂಡಿರಲಿಲ್ಲ. ಈ ಕಾರಣದಿಂದಾಗಿ, ಪಾಕಿಸ್ತಾನಿ ಆಟಗಾರರಿಗೆ ಭಾರತೀಯ ಒಡೆತನದ ತಂಡಗಳಲ್ಲಿ ಅವಕಾಶಗಳು ಸಿಗುವುದಿಲ್ಲ ಎಂದು ನಂಬಲಾಗಿತ್ತು. ಆದರೆ ಈ ಹರಾಜಿನಲ್ಲಿ ಈ ಊಹೆ ಆಗಿದೆ. ಸನ್ ಗ್ರೂಪ್ ತಂಡವು ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಅಭಿಮಾನಿಗಳು ಈ ನಿರ್ಧಾರವನ್ನು ಪ್ರಶ್ನಿಸಿದರು. ಸದ್ಯ ಸಾಮಾಜಿಕ ತಾಣದಲ್ಲಿ #BoycottSunrisers ಟ್ರೆಂಡ್ ಆಗಿದೆ.

ಬಿಸಿಸಿಐ ನಿಯಮ ಏನು ಹೇಳುತ್ತದೆ?

ಬಿಸಿಸಿಐ ವಿದೇಶಿ ಲೀಗ್‌ಗಳಲ್ಲಿ ಪಾಕಿಸ್ತಾನದ ಆಟಗಾರರನ್ನು ಖರೀದಿಸಬಾರದು ಎಂದು ಲಿಖಿತ ನಿಯಮವನ್ನು ಹೊರಡಿಸಿಲ್ಲ. ಆದರೆ ಭಾರತೀಯ ಮಾಲೀಕತ್ವದ ತಂಡಗಳು ವಿದೇಶಿ ಲೀಗ್‌ಗಳಾದ ಎಸ್‌ಎ20, ಯುಎಇಯ ಐಎಲ್‌ಟಿ20, ಅಮೆರಿಕದ ಎಂಎಲ್‌ಸಿ ಲೀಗ್‌ಗಳಲ್ಲಿ ಇದುವರೆಗೂ ಪಾಕ್‌ ಆಟಗಾರರನ್ನು ಖರೀದಿಸಿಲ್ಲ. ಭಾರತ, ಪಾಕ್‌ ನಡುವಿನ ರಾಜಕೀಯ ಉದ್ವಿಗ್ನತೆ ಮತ್ತು ಭಾರತೀಯ ಅಭಿಮಾನಿಗಳ ಭಾವನೆಗೆ ಧಕ್ಕೆ ಬರಬಾರದು ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನು ವಿದೇಶಿ ಲೀಗ್‌ಗಳಲ್ಲಿ ಆಯಾ ದೇಶದ ಕ್ರಿಕೆಟ್‌ ಮಂಡಳಿಗಳ ಅಡಿಯಲ್ಲಿ ಬರುತ್ತವೆ. ಅಲ್ಲಿ ಆಟಗಾರರ ಆಯ್ಕೆಯಲ್ಲಿ ಬಿಸಿಸಿಐ ನೇರ ಹಸ್ತಕ್ಷೇಪ ಮಾಡುವಂತಿಲ್ಲ.

ಇಸಿಬಿ ಹೇಳಿದ್ದೇನು?

'ದಿ ಹಂಡ್ರೆಡ್' ಟೂರ್ನಿಯ ವೇಳೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಎಲ್ಲಾ ಎಂಟು ತಂಡಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಇದರಂತೆ ತಮ್ಮ ದೇಶದಲ್ಲಿ ತಾರತಮ್ಯ ವಿರೋಧಿ ಕಾನೂನುಗಳು ಕಟ್ಟುನಿಟ್ಟಾಗಿದ್ದು, ಆಟಗಾರನ ರಾಷ್ಟ್ರೀಯತೆಯನ್ನು ಆಧರಿಸಿ ಹರಾಜಿನಿಂದ ಹೊರಗಿಟ್ಟರೆ ಅದು ಕಾನೂನು ಬಾಹಿರ ಎಂದು ಎಚ್ಚರಿಸಿತ್ತು.

Story first published: Friday, March 13, 2026, 10:22 [IST]
Other articles published on Mar 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+