ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಪ್ರವಾಸಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆಯಾಗದಿರಲು ಬಲವಾದ ಕಾರಣವಿದೆ!

Why Hardik Pandya wasnt picked in India Test squad heres why

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪೈನಲ್ ಪಂದ್ಯಕ್ಕೆ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಇಂದು ತಂಡವನ್ನು ಪ್ರಕಟಿಸಲಾಗಿದೆ. 20 ಸದಸ್ಯರ ಈ ಸ್ಕ್ವಾಡ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಡಲಾಗಿದೆ. ಇದು ಕೆಲವರಿಗೆ ಅಚ್ಚರಿಯನ್ನು ಮೂಡಿಸಿದ್ದರೆ ಇನ್ನೂ ಕೆಲವರಿಗೆ ನಿರೀಕ್ಷಿತವಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವೂ ಇದೆ. ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಈಗ ಬೌಲಿಂಗ್ ಮಾಡಲು ಸಮರ್ಥರಾಗಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿಯೂ ಬರೋಡಾ ಮೂಲದ ಈ ಆಟಗಾರ ಬೌಲಿಂಗ್ ಮಾಡದೆ ಕೇವಲ ಪೂರ್ಣ ಪ್ರಮಾಣದ ಬ್ಯಾಟ್ಸ್‌ಮನ್ ಆಗಿದ್ದರು.

ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್ಐಪಿಎಲ್‌ನಿಂದ ಕೊರೊನಾ ನಿಯಂತ್ರಣ ಕೂಡ ಸಾಧ್ಯ ಎಂದು ತಿಳಿಸಿದ ಪ್ಯಾಟ್ ಕಮಿನ್ಸ್

ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದಲ್ಲಿದ್ದರು. ಆದರೆ ಆಡುವ ಬಳಗದಲ್ಲಿ ಅವರು ಅವಕಾಶವನ್ನು ಪಡೆದಿರಲಿಲ್ಲ. ಯಾಕೆಂದರೆ ಬೌಲಿಂಗ್ ಮಾಡಲು ಸಮರ್ಥರಾಗದಿದ್ದ ಕಾರಣ ಅವರನ್ನು ಪರಿಗಣಿಸಿರಲಿಲ್ಲ. ಸೀಮಿತ ಓವರ್‌ಗಳಲ್ಲಿ ಸ್ಪೆಶಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಪರಿಗಣಿಸಿದರೂ ಟೆಸ್ಟ್‌ ಮಾದರಿಯಲ್ಲಿ ತಂಡ ಆಲ್‌ರೌಂಡರ್‌ಅನ್ನು ಆ ಸ್ಥಾನಕ್ಕೆ ಆಲ್‌ರೌಂಡರ್‌ಅನ್ನು ನಿರೀಕ್ಷಿಸುತ್ತದೆ.

"ಹಾರ್ದಿಕ್ ಪಾಂಡ್ಯ ಅವರು ಇನ್ನು ಕೂಡ ಬೌಲಿಂಗ್ ಮಾಡಲು ಸಮರ್ಥರಾಗಿಲ್ಲ.ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಮಡ್ಯ ಅವರನ್ನು ಬೌಲಿಂಗ್‌ಗೆ ಕಣಕ್ಕಿಳಿಸಲು ಸಿದ್ಧತೆಯನ್ನು ನಡೆಸಲಾಗಿತ್ತು. ಆದರೆ ಅದು ವಿಫಲವಾಯಿತು. ಹಾಗಾಗಿ ಅವರನ್ನು ಟೆಸ್ಟ್ ಮಾದರಿಗೆ ಪರಿಗಣಿಸಲಿಲ್ಲ" ಎಂದು ಬಿಸಿಸಿಐನ ಮೂಲಗಳು ನೀಡಿದ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ.

ಇನ್ನು ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಸರಣಿಯಲ್ಲಿ ಗಾಯದಿಂದಾಗಿ ಹೊರಗುಳಿದಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ, ಬ್ಯಾಟ್ಸ್‌ಮನ್ ಹನುಮ ವಿಹಾರಿ ಮತ್ತು ಹಿರಿಯ ವೇಗಿ ಹನುಮ ವಿಹಾರಿ ತಂಡಕ್ಕೆ ವಾಪಾಸಾಗಿದ್ದಾರೆ.

Story first published: Saturday, May 8, 2021, 11:14 [IST]
Other articles published on May 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X