For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ ಪ್ರವಾಸದಲ್ಲಿ ಮಿಂಚಿದ್ರೂ ಸಿಗದ ಚಾನ್ಸ್‌

ಇಂಗ್ಲೆಂಡ್‌ ವಿರದ್ಧದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಈ ಆಟಗಾರರು ವರ್ಷದ ಬಳಿಕ ಟಿ20 ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡುವ ಆಸೆಯನ್ನು ಹೊಂದಿದ್ದರು. ಆದರೆ ಇವರ ಆಸೆಗೆ ಬಿಸಿಸಿಐ ಆಯ್ಕೆ ಸಮಿತಿ ಸೊಪ್ಪು ಹಾಕಲಿಲ್ಲ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಉತ್ತರ ಇಲ್ಲಿದೆ.

ಭಾರತ ಇತ್ತೀಚಿಗೆ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಆಂಡರ್ಸನ್, ತೆಂಡೂಲ್ಕರ್‌ ಸರಣಿಯನ್ನು ಆಡಿತು. ಈ ಸರಣಿಯಲ್ಲಿ ಟೀಮ್ ಇಂಡಿಯಾ 2-2 ರಿಂದ ಸಮಬಲ ಸಾಧಿಸಿತು. ಈ ವೇಳೆ ಟೀಮ್ ಇಂಡಿಯಾದ ಯುವ ಆಟಗಾರರು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ತಂಡ ಟೆಸ್ಟ್‌ ಸರಣಿಯಲ್ಲಿ ಡ್ರಾ ಸಾಧಿಸುವಲ್ಲಿ ಶ್ರಮಿಸಿದರು. ಅಲ್ಲದೆ ಹಲವು ದಾಖಲೆಗಳನ್ನು ಸಹ ಬರೆದಿದ್ದರು. ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ಶುಭಮನ್‌ ಗಿಲ್‌ ಮಾತ್ರ ಏಷ್ಯಾಕಪ್‌ ತಂಡದಲ್ಲಿ ಪಡೆದಿದ್ದು, ಉಪನಾಯಕನ ಪಟ್ಟವನ್ನು ಕಟ್ಟಲಾಗಿದೆ.

Why Indian players from the England Test series were dropped from the Asia Cup squad

ಇಂಗ್ಲೆಂಡ್‌ ಪ್ರವಾಸದಲ್ಲಿ ಆರಂಭಿಕರಾಗಿ ಕಾಣಿಸಿಕೊಂಡು ಯಶಸ್ವಿ ಜೈಸ್ವಾಲ್‌ ಹಾಗೂ ಪ್ರಸಿದ್ಧ್ ಕೃಷ್ಣಾ, ಮೊಹಮ್ಮದ್ ಸಿರಾಜ್‌ ಕನ್ನಡಿಗ ಕೆಎಲ್ ರಾಹುಲ್ ಅವರು ಅವಕಾಶವನ್ನು ವಂಚಿತರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಮಿಂಚಿದ ಗಿಲ್‌ ಅವರನ್ನು ಹೊರತು ಪಡಿಸಿದರೆ ಉಳಿದ ಯಾವ ಪ್ಲೇಯರ್‌ಗೂ ಅವಕಾಶವನ್ನು ನೀಡಲಾಗಿಲ್ಲ.

ಸಿಗದ ಅವಕಾಶ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಾಣಿಸಿಕೊಂಡ ಕನ್ನಡಿಗ ಕೆಎಲ್ ರಾಹುಲ್ ಸಹ ಟಿ20 ತಂಡಕ್ಕೆ ಎಂಟ್ರಿ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಇವರಿಗೆ ಹೊಂದುವ ಎಲ್ಲ ಸ್ಥಾನಗಳು ತುಂಬಿಕೊಂಡಿದ್ದವು. ಹೀಗಾಗಿ ರಾಹುಲ್‌ ಅವರಿರೂ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅವಕಾಶಗಳು ಮಿಸ್ ಆದವು. ಇವರು ಸಹ ಕಳೆದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿಲ್ಲ.

Why Indian players from the England Test series were dropped from the Asia Cup squad

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಮೊಹಮ್ಮದ್ ಸಿರಾಜ್‌ ಅವರಿಗೂ ತಂಡದಲ್ಲಿ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಈ ಆಸೆ ಸಹ ನುಚ್ಚುನೂರಾಗಿದೆ. ಇವರು ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಇವರು ಓವಲ್‌ನಲ್ಲಿ ನಡೆದ ಐದನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಅವಕಾಶ ಇಲ್ಲ ಏಕೆ?

ಸೆಪ್ಟಂಬರ್‌ 28 ರಂದು ಏಷ್ಯಾ ಕಪ್ ಟಿ20 ಫೈನಲ್ ಪಂದ್ಯ ನಡೆಯಲಿದೆ. ಈ ಸರಣಿ ಮುಗಿಯುತ್ತಿದ್ದಂತೆ ಭಾರತ ತವರಿನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ದೃಷ್ಟಿಯಿಂದ ಮಹತ್ವದಾಗಿದೆ. ಹೀಗಾಗಿ ಭಾರತದ ಟೆಸ್ಟ್‌ ತಂಡದ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.

Story first published: Tuesday, August 19, 2025, 15:18 [IST]
Other articles published on Aug 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+