Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಜ ಟ್ರೋಫಿ: ಹರಾಜಿನಲ್ಲಿ ಕೆಎಲ್ ರಾಹುಲ್ ಅನ್‌ಸೋಲ್ಡ್ ಆಗಿದ್ದು ಏಕೆ?

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಹರಾಜಿನಲ್ಲಿ ಐಪಿಎಲ್‌ನ ಸ್ಟಾರ್‌ ಆಟಗಾರ ಕರ್ನಾಟಕದ ಕೆಎಲ್ ರಾಹುಲ್‌ ಅನ್‌ಸೋಲ್ಡ್ ಆಗಿದ್ದಾರೆ. ಶುಕ್ರವಾರ ನಡೆದ ಹರಾಜಿನಲ್ಲಿ ಮಾಲೀಕರು ರಾಹುಲ್‌ ಅವರ ಮೂಲ ಬೆಲೆ 2 ಲಕ್ಷ ರೂಪಾಯಿಗೆ ಖರೀದಿಸಲು ಹಿಂದೇಟು ಹಾಕಿದರು. ಕೆಎಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 14 ಕೋಟಿ ರೂ.ಗೆ ಸೇರಿಕೊಂಡಿದ್ದರು. ಭಾರತದ ಪ್ರತಿಭಾನ್ವಿತ ಆಟಗಾರ ಕರ್ನಾಟಕ ರಾಜ್ಯದಲ್ಲಿ ನಡೆಯುವ ಟಿ20 ಲೀಗ್‌ನಲ್ಲಿ ಹರಾಜು ಆಗದೇ ಇರಲು ಕಾರಣ ಏನು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕೆಎಲ್ ರಾಹುಲ್ ಮಹಾರಾಜ ಟ್ರೋಫಿಯಲ್ಲಿ ಅನ್‌ಸೋಲ್ಡ್ ಆದರು ಎಂಬ ಸುದ್ದಿ ನಿಜಕ್ಕೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನು ಹರಾಜಿನಲ್ಲಿ ರಾಹುಲ್ ಅವರನ್ನು ಏಕೆ ಕೊಂಡುಕೊಳ್ಳಲಿಲ್ಲ ಎಂಬ ಬಗ್ಗೆ ಫ್ರಾಂಚೈಸಿಗಳು ತಿಳಿಸಿದ್ದಾರೆ.

IPL Star KL Rahul

ಜೂನ್ 20 ರಿಂದ ಮಹಾರಾಜ ಟ್ರೋಫಿಯ ಮುಂದಿನ ಆವೃತ್ತಿ ಆರಂಭವಾಗಲಿದೆ. ಹರಾಜಿನ ಸಮಯದಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಫ್ರಾಂಚೈಸಿಗಳು ರಾಹುಲ್ ಲಭ್ಯತೆಯ ಬಗ್ಗೆ ಸ್ಪಷ್ಟನೆ ಕೇಳಿದ್ದವು. ಸದ್ಯಕ್ಕೆ ರಾಹುಲ್ ಪಂದ್ಯಾವಳಿಗೆ ಲಭ್ಯವಿಲ್ಲ ಎಂದು ಹರಾಜುದಾರರು ತಂಡಗಳಿಗೆ ತಿಳಿಸಿದ್ದರಿಂದ ಆಸಕ್ತ ಫ್ರಾಂಚೈಸಿಗಳು ಬಿಡ್ಡಿಂಗ್‌ನಿಂದ ಹಿಂದೆ ಸರಿದಿವೆ ಎಂದು ತಿಳಿದು ಬಂದಿದೆ. ತಂಡದ ಬಜೆಟ್ ಸೀಮಿತವಾಗಿದ್ದು, ಆಟಗಾರರ ಲಭ್ಯತೆಯು ತಂಡದ ಯೋಜನೆಯ ಪ್ರಮುಖ ಅಂಶವಾಗಿದೆ. ಹೀಗಾಗಿ ಫ್ರಾಂಚೈಸಿಗಳು ಇಡೀ ಟೂರ್ನಿಗೆ ಅಲಭ್ಯರಿರುವ ಆಟಗಾರನ ಮೇಲೆ ಹಣ ಹೂಡಿಕೆ ಮಾಡಲು ಇಷ್ಟ ಪಡಲಿಲ್ಲ ಎಂದು ತಿಳಿದು ಬಂದಿದೆ.

ಅಫ್ಘಾನ್ ವಿರುದ್ಧ ರಾಹುಲ್ ಕಣಕ್ಕೆ

ರಾಹುಲ್‌ ಅವರು ಸದ್ಯ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದಾರೆ. ಈ ಸರಣಿ ಮುಗಿದ ಬಳಿಕ ಭಾರತ ತಂಡ ಬೇರೆ ದೇಶಗಳಿಗೆ ಪ್ರವಾಸವನ್ನು ಬೆಳೆಸಲಿದೆ. ಇನ್ನು ಮಹಾರಾಜ ಟ್ರೋಫಿ ಆರಂಭಕ್ಕೂ ಮುನ್ನವೇ ರಾಹುಲ್ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಭಾಗವಾಗುವ ಸಾಧ್ಯತೆ ಇದೆ.

ಹರಾಜಿನಲ್ಲಿ ಫ್ರಾಂಚೈಸಿಗಳು ಮಹಾರಾಜ ಟ್ರೋಫಿಯ ಆವೃತ್ತಿಗೆ ಲಭ್ಯ ಇರುವ ಆಟಗಾರರ ಮೇಲೆ ಹಣವನ್ನು ಹೂಡಲು ಮುಂದಾದವು. ಹಲವು ಸ್ಟಾರ್ ಆಟಗಾರರು ಲಭ್ಯತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದರಿಂದ ಮಾಲೀಕರು ಹಣವನ್ನು ಹೂಡಲು ಹಿಂದೇಟು ಹಾಕಿದರು. ಫ್ರಾಂಚೈಸಿಗಳು ಆಟಗಾರರ ಮೇಲೆ ಹಣವನ್ನು ಹೂಡುವ ಮೊದಲು ಅವರ ಲಭ್ಯತೆಯ ಬಗ್ಗೆ ಸ್ಪಷ್ಟತೆಯನ್ನು ಪಡೆದಿವೆ. ಇನ್ನು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬಹುದಾದ ಆಟಗಾರರನ್ನು ಮಾಲೀಕರು ಎಚ್ಚರಿಕೆಯಿಂದ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಭಾರತ

ರಾಹುಲ್‌ ಟೀಮ್ ಇಂಡಿಯಾದ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನ ಅವಿಭಾಜ್ಯ ಅಂಗ. ಇವರು ಸದ್ಯ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಬಳಿಕ ಕೆಎಲ್ ರಾಹುಲ್ ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಇವರಿಗೆ ಮಹಾರಾಜ ಟ್ರೋಫಿ ಲೀಗ್‌ನಲ್ಲಿ ಬಿಕರಿಯಾಗಲಿಲ್ಲ.

Story first published: Friday, June 5, 2026, 23:51 [IST]
Other articles published on Jun 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+