ಟೀಂ ಇಂಡಿಯಾ ಗ್ರೂಪ್ ಫೋಟೋದಲ್ಲಿ ಅನುಷ್ಕಾ ಏಕೆ? ಟ್ವಿಟ್ಟಿಗರ ಪ್ರಶ್ನೆ


ಲಂಡನ್, ಆಗಸ್ಟ್ 08: ಬರ್ಮಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ವಿರಾಟ್ ಕೊಹ್ಲಿ ಪಡೆ ಈಗ ಲಾರ್ಡ್ಸ್ ಅಂಗಳದಲ್ಲಿ ಗೆಲುವು ಸಾಧಿಸಲು ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ಲಂಡನ್ನಿನಲ್ಲಿರ ಭಾರತದ ರಾಯಭಾರ ಕಚೇರಿಯಲ್ಲಿ ಟೀಂ ಇಂಡಿಯಾ ಸದಸ್ಯರಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಇದಾದ ಬಳಿಕ, ತಂಡದ ಗ್ರೂಪ್ ಫೋಟೋವೊಂದನ್ನು ಬಿಸಿಸಿಐ ಟ್ವೀಟ್ ಮಾಡಿತ್ತು. ಈಗ ಇದು ಚರ್ಚೆಯ ವಿಷಯವಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಅಧಿಕೃತ ಖಾತೆಯಿಂದ ಮಾಡಿರುವ ಟ್ವೀಟ್ ನಲ್ಲಿರುವ ಚಿತ್ರದಲ್ಲಿ ಭಾರತದ ತಂಡದ ಜತೆ ನಟಿ ಅನುಷ್ಕಾ ಶರ್ಮ ಅವರು ಇದ್ದಾರೆ.
ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಎಂಬ ಕಾರಣಕ್ಕೆ ಅನುಷ್ಕಾ ಅವರು ಇದ್ದಾರೆ ಎಂಬ ಸಮರ್ಥನೆ ಸಿಕ್ಕರೂ, ಚಿತ್ರಕ್ಕೆ ಹಾಕಿರುವ ಅಡಿಬರಹ ಸರಿ ಕಾಣುತ್ತಿಲ್ಲ ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಲೋಕದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಲಂಡನ್ನಿನಲ್ಲಿರುವ ಭಾರತ ರಾಯಭಾರ ಕಚೇರಿಯ ಮುಂದೆ ಟೀಂ ಇಂಡಿಯಾ ಸದಸ್ಯರು' ಎಂದು ಟ್ವೀಟ್ ಮಾಡಲಾಗಿದೆ. ಚಿತ್ರದಲ್ಲಿ ಅನುಷ್ಕಾ ಮಾತ್ರ ಇದ್ದು, ಬೇರೆ ಆಟಗಾರರ ಪತ್ನಿಯರಿಲ್ಲ. ಜತೆಗೆ ಉಪ ನಾಯಕ ಕೂಡಾ ಮೊದಲ ಸಾಲಿನಲ್ಲಿಲ್ಲ. ಹೀಗೆ ಚಿತ್ರದ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ.ಚಿತ್ರಕೃಪೆ: ಬಿಸಿಸಿಐ ಟ್ವೀಟ್
ಬಿಸಿಸಿಐ ಕೊಟ್ಟಿರುವ ಅಡಿಬರಹವೇ ಕಾರಣ
ಆಗಸ್ಟ್ 9 ರಿಂದ 13ರ ತನಕ ನಡೆಯಲಿರುವ ಲಾರ್ಡ್ಸ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾಕ್ಕೆ ಗೆಲುವು ಅನಿವಾರ್ಯವಾಗಿದೆ. ಕೊಹ್ಲಿ ಅವರ ನಾಯಕತ್ವದ ಬಗ್ಗೆ ಕೂಡಾ ಪ್ರಶ್ನೆಗಳು ಎದ್ದಿವೆ. ವಿದೇಶಿ ಪ್ರವಾಸದ ಸಮಯದಲ್ಲಿ ಕ್ರಿಕೆಟರ್ ಗಳ ಪತ್ನಿ ಅಥವಾ ಸಂಗಾತಿಯರನ್ನು ಕರೆದುಕೊಂಡು ಹೋಗುವ ಬಗ್ಗೆ ಕಠಿಣ ನಿಲುವು ತಾಳಲು ಬಿಸಿಸಿಐ ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ.
ಉಪ ನಾಯಕ ಕೊನೆ ಸಾಲಿನಲ್ಲಿದ್ದಾರೆ
ಉಪ ನಾಯಕ ಕೊನೆ ಸಾಲಿನಲ್ಲಿದ್ದಾರೆ. ಫಸ್ಟ್ ಲೇಡಿ(ಅನುಷ್ಕಾ ಶರ್ಮ) ಮೊದಲ ಸಾಲಿನಲ್ಲಿದ್ದಾರೆ. ಏನು ನಡೆಯುತ್ತಿದೆ ಇಲ್ಲಿ, ಇದು ಟೀಂ ಇಂಡಿಯಾ ಗ್ರೂಫ್ ಫೋಟೊ ಅಲ್ವ?
ಇದು ಟೀಂ ಇಂಡಿಯಾ ಪ್ರವಾಸದ ಚಿತ್ರವೋ?
ಇದು ಟೀಂ ಇಂಡಿಯಾ ಪ್ರವಾಸದ ಚಿತ್ರವೋ? ಅಥವಾ ನಾಯಕ ವಿರಾಟ್ ಕೊಹ್ಲಿ ಅವರ ಹನಿಮೂನ್ ಚಿತ್ರವೋ? ಎಂದು ಖಾರವಾಗಿ ಪ್ರಶ್ನಿಸಲಾಗಿದೆ.
ದಂಪತಿ ಸಮೇತ ಎಲ್ಲರೂ ಭೇಟಿ ನೀಡಿದ್ದಾರೆ
ರಾಯಭಾರ ಕಚೇರಿಗೆ ದಂಪತಿ ಸಮೇತ ಎಲ್ಲರೂ ಭೇಟಿ ನೀಡಿದ್ದಾರೆ. ಆದರೆ, ಫೋಟೋದಲ್ಲಿ ಅನುಷ್ಕಾ ಮಾತ್ರ ಕಾಣಿಸಿಕೊಂಡಿದ್ದಾರೆ. ಅಥವಾ ಆ ಫೋಟೋ ಮಾತ್ರ ಟ್ವೀಟ್ ಮಾಡಿದ್ದಾರೆ.
ಫ್ಯಾಮಿಟಿ ಫೋಟೋನಾ ಇದು
ಫ್ಯಾಮಿಟಿ ಫೋಟೋಗೂ ಟೀಂ ಇಂಡಿಯಾ ಫೋಟೋಗೂ ವ್ಯತ್ಯಾಸವಿದೆ. ಹೀಗಾಗಿ, ಎಲ್ಲರೂ ಪ್ರಶ್ನಿಸುತ್ತಿದ್ದಾರೆ.
ಗ್ರೂಪ್ ಫೋಟೋದಲ್ಲಿರುವುದು ತಪ್ಪಲ್ಲ
ಅನುಷ್ಕಾ ಅವರು ಗ್ರೂಪ್ ಫೋಟೋದಲ್ಲಿರುವುದು ತಪ್ಪಲ್ಲ. ಆದರೆ, ಚಿತ್ರಕ್ಕೆ ಅಡಿಬರಹ ಹಾಕುವಾಗ ಬಿಸಿಸಿಐನವರು ಇದು ಅಧಿಕೃತ ಖಾತೆ ಎಂಬ ಪರಿಜ್ಞಾನದಿಂದ ವರ್ತಿಸಬೇಕಿದೆ. ಟೀಂ ಇಂಡಿಯಾದ ಗ್ರೂಪ್ ಫೋಟೋ ಎಂದು ಹಾಕಿದರೂ ಜತೆಯಲ್ಲಿ ಅನುಷ್ಕಾ ಅವರು ಯಾರು ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಿತ್ತು.
ಬೇರೆ ಯಾವ ಆಟಗಾರರ ಪತ್ನಿಯರು ಇಲ್ಲಿಲ್ಲ ಯಾಕೆ
ಬೇರೆ ಯಾವ ಆಟಗಾರರ ಪತ್ನಿಯರು ಇಲ್ಲಿಲ್ಲ ಯಾಕೆ? ಅವರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿಲ್ಲವೆ? ತೆರಳಿದ್ದರೂ ರಾಯಭಾರ ಕಚೇರಿಗೆ ಹೋಗಿಲ್ಲವೇ? ಹೋಗಿದ್ದರೂ ಗ್ರೂಪ್ ಫೋಟೋಕೆ ಪೋಸ್ ನೀಡಲಿಲ್ಲವೇ?
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications