Virat Kohli: ವಿರಾಟ್ ಕೊಹ್ಲಿಯ ಯಶಸ್ಸಿಗೆ ಈ ಮಾಜಿ ಆಟಗಾರ ಪ್ರಮುಖ ಕಾರಣ...
ಐಪಿಎಲ್‌ನಲ್ಲಿ ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಭಾಗವಾಗಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಐಪಿಎಲ್ 2025 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ ಆಡಿದ10 ಪಂದ್ಯಗಳಲ್ಲಿ 443 ರನ್ ಕಲೆ ಹಾಕಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ 2025 ರಲ್ಲಿ ನಡುವೆ ಸಂದರ್ಶನವೊಂದರಲ್ಲಿ ತಮ್ಮ ಮೇಲೆ ಪ್ರಭಾವ ಬೀರಿದ ಆಟಗಾರನ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್ ಆರಂಭಿಕ ಸೀಸನ್‌ನಿಂದಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ, ಇಂದು ವಿಶ್ವದ ದಿಗ್ಗಜ ಬ್ಯಾಟರ್‍ಗಳ ಸಾಲಿಗೆ ನಿಲ್ಲಲು ಈ ಆಟಗಾರರ ಪ್ರಮುಖ ಕಾರಣವಾಗಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಸಂದರ್ಶವೊಂದರಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ಐಪಿಎಲ್ ಆರಂಭಿಕ ಸೀಸನ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಮಾರ್ಕ್ ಬೌಚರ್ ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ನಾನು ಐಪಿಎಲ್ ಆರಂಭಿಕ ಸೀಸನ್ ಆಡುವಾಗ ಮಾತುಕತೆ ನಡೆಸಿದ ಆಟಗಾರರ ಪೈಕಿ ಬೌಚರ್ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದರು. ಅವರ ನನ್ನ ದೌರ್ಬಲ್ಯಗಳು ಏನೆಂದು ತಿಳಿದುಕೊಂಡು ನನಗೆ ಸಲಹೆ ನೀಡಿದರು. ಕ್ರಿಕೆಟ್‌ನಲ್ಲಿ ನನ್ನ ಆಟವನ್ನು ಮುಂದಿನ ಹಂತಕ್ಕೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದುರ ಬಗ್ಗೆ ಅವರು ತಿಳಿಸಿದರು.
ಮುಂದಿನ ಮೂರು-ನಾಲ್ಕು ವರ್ಷಗಳ ನಂತರ ನಾನು ಭಾರತಕ್ಕೆ ಕಾಮೆಂಟೇಟರ್ ಆಗಿ ಬಂದಾಗಿ ನೀನು ಟೀಮ್ ಇಂಡಿಯಾ ಅಡುವುದನ್ನು ನಾನು ನೋಡಬೇಕು. ಇಲ್ಲದಿದ್ದರೆ, ನಿಮ್ಮ ಪ್ರತಿಭೆಗೆ ನೀವೆ ಅಪಚಾರ ಮಾಡಿಕೊಂಡಂತೆ ಎಂದು ನನಗೆ ಬೌಚರ್ ಹೇಳಿದರು. ಹೀಗಾಗಿ, ಅವರು ನನ್ನೊಂದಿಗೆ ನಡೆಸಿದ ಮಾತುಕತೆಗಳು ನನ್ನನ್ನು ನಿಜವಾಗಿಯೂ ದಿಗ್ಭ್ರಮೆಗೊಳಿಸಿತ್ತು. ಇಲ್ಲಿಂದ ನಾನು ನನ್ನ ಆಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡಲು ಹೋಗಲು ಸಾಧ್ಯವಾಯಿತು ಎಂದು ವಿರಾಟ್ ಕೊಹ್ಲಿ ತಮ್ಮ ಯಶಸ್ಸಿಗೆ ಬೌಚರ್ ಕಾರಣ ಎಂಬುದನ್ನು ಬಹಿರಂಗಪಡಿಸಿದರು.
ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಆಡಿದ 10 ಪಂದ್ಯಗಳಲ್ಲಿ 7 ಗೆಲುವು ಮತ್ತು 3 ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ತಂಡ ಬಹುತೇಕ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಬಹುತೇಕ ಇದೆ. ಶನಿವಾರ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications