ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲೇ ಬೇಕು ಎಂಬ ದೃಢ ನಿರ್ಧಾರವನ್ನು ಹೊಂದಿ, ದೇಶೀಯ ಟೂರ್ನಿಗಳಲ್ಲಿ ಅಬ್ಬರದ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದ ಆಟಗಾರ ಸರ್ಫರಾಜ್ ಖಾನ್. ದೇಶೀಯ ಟೂರ್ನಿಯಲ್ಲಿ ಇವರ ಆಟ ನೋಡಿದ ಫ್ಯಾನ್ಸ್ ಈ ಬಾರಿ ಇವರಿಗೆ ನಿಶ್ಚಿತವಾಗಿ ಟೀಮ್ ಇಂಡಿಯಾ ಬಾಗಿಲು ಓಪನ್ ಆಗುವುದು ಗ್ಯಾರಂಟಿ ಎಂದೇ ಎಂದು ಕೊಂಡಿದ್ದರು. ಆದರೆ, ಅವರ ಕನಸು ಮರೀಚಿಕೆ ಆಗುತ್ತಿದೆ. ಹಾಗಿದ್ದರೆ ಸರ್ಫರಾಜ್‌ನತ್ತ ಟೀಮ್ ಇಂಡಿಯಾ ಆಯ್ಕೆಗಾರರು ಏಕೆ ನೋಡುತ್ತಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.
ಸರ್ಫರಾಜ್ ಖಾನ್ ಖಾನ್ ದೀರ್ಘಕಾಲದಿಂದ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇದರ ಹೊರತಾಗಿಯೂ ಈ ಯುವ ಬ್ಯಾಟ್ಸ್‌ಮನ್‌ಗೆ ಟೀಂ ಇಂಡಿಯಾ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಸರ್ಫರಾಜ್ ಖಾನ್ ದೇಶಿಯ ಕ್ರಿಕೆಟ್‌ನಲ್ಲಿ ಮುಂಬೈಯನ್ನು ಪ್ರತಿನಿಧಿಸುತ್ತಾರೆ.

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗ. ಇದಕ್ಕೂ ಮುನ್ನ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಅಂಕಿಅಂಶಗಳ ಪ್ರಕಾರ, ಸರ್ಫರಾಜ್ ಖಾನ್ ನಿರಂತರವಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಛಾಪನ್ನು ಬಿಡುತ್ತಿದ್ದಾರೆ, ಆದರೆ ಈ ಬ್ಯಾಟ್ಸ್‌ಮನ್‌ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ.
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ. ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಸರ್ಫರಾಜ್ ಖಾನ್‌ಗೆ ಅವಕಾಶ ಸಿಗಬಹುದು ಎಂದು ನಂಬಲಾಗಿತ್ತು.
ಆದರೆ ಇಂಗ್ಲೆಂಡ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಅವಕಾಶ ಪಡೆಯುವುದು ಖಚಿತವಾಗಿದೆ. ಅಂದರೆ ಮತ್ತೊಮ್ಮೆ ಸರ್ಫರಾಜ್ ಖಾನ್‌ಗೆ ನಿರಾಸೆ ಕಾದಿದೆ. 44 ಪ್ರಥಮ ದರ್ಜೆ ಪಂದ್ಯಗಳನ್ನು ಹೊರತುಪಡಿಸಿ, ಸರ್ಫರಾಜ್ ಖಾನ್ 37 ಲಿಸ್ಟ್-ಎ ಮತ್ತು 96 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೇ ಸರ್ಫರಾಜ್ ಖಾನ್ ಐಪಿಎಲ್ ನ 50 ಪಂದ್ಯಗಳನ್ನು ಆಡಿದ್ದಾರೆ.

ಸರ್ಫರಾಜ್ ಖಾನ್ 44 ಪ್ರಥಮ ದರ್ಜೆ ಪಂದ್ಯಗಳಲ್ಲಿ 68.2 ಸರಾಸರಿ ಮತ್ತು 69.6 ಸ್ಟ್ರೈಕ್ ರೇಟ್‌ನಲ್ಲಿ 3751 ರನ್ ಗಳಿಸಿದ್ದಾರೆ. ಆದರೆ ಈ ಯುವ ಬ್ಯಾಟ್ಸ್‌ಮನ್ 37 ಲಿಸ್ಟ್-ಎ ಪಂದ್ಯಗಳಲ್ಲಿ 34.9 ಸರಾಸರಿ ಮತ್ತು 94.2 ಸ್ಟ್ರೈಕ್ ರೇಟ್‌ನಲ್ಲಿ 629 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 96 ಟಿ20 ಪಂದ್ಯಗಳಲ್ಲಿ 22.4 ಸರಾಸರಿ ಮತ್ತು 128.3 ಸ್ಟ್ರೈಕ್ ರೇಟ್‌ನಲ್ಲಿ 1188 ರನ್ ಗಳಿಸಿದ್ದಾರೆ.
ಅದೇ ಸಮಯದಲ್ಲಿ, ಸರ್ಫರಾಜ್ ಖಾನ್ ಐಪಿಎಲ್‌ನ 50 ಪಂದ್ಯಗಳಲ್ಲಿ 22.5 ಸರಾಸರಿ ಮತ್ತು 130.6 ಸ್ಟ್ರೈಕ್ ರೇಟ್‌ನಲ್ಲಿ 585 ರನ್ ಗಳಿಸಿದ್ದಾರೆ. ಇತ್ತೀಚೆಗೆ, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ 4 ರನ್ ಗಳಿಸಿ ಔಟಾಗಿದ್ದರು, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 67 ಎಸೆತಗಳಲ್ಲಿ 55 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳನ್ನು ಹೊಡೆದರು.
ಸತತ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಸರ್ಫರಾಜ್ ಆಯ್ಕೆಗಾರರ ಚಿತ್ತ ಕದಿಯುವಲ್ಲಿ ವಿಫಲವಾಗಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಇನ್ನು ಮುಂದಾದರೂ ಸರ್ಫರಾಜ್ ಖಾನ್ ಟೀಮ್ ಇಂಡಿಯಾದಲ್ಲಿ ಆಡುವ ಕನಸು ನನಸಾಗಲಿ ಎಂಬುದೇ ಅಭಿಮಾನಿಗಳ ಆಶಯ.