ಅನುಭವಿಗಳನ್ನು ಕಡೆಗಣಿಸಿದ ಟೀಮ್ ಮ್ಯಾನೇಜ್ಮೆಂಟ್, ಯುವಕರಿಗೆ ಹೆಚ್ಚು ಅವಕಾಶ ನೀಡುತ್ತಿರುವುದೇಕೆ?
ಟೀಮ್ ಇಂಡಿಯಾ ಮ್ಯನೇಜ್ಮೆಂಟ್ ಮುಖದಲ್ಲಿ ಯುವ ಪ್ಲೇಯರ್ ಚಿಂತೆಯ ಗೆರೆಯನ್ನು ಮೂಡಿಸಿದ್ದಾರೆ. ಸತತ ಅವಕಾಶಗಳನ್ನು ನೀಡಿದರೂ ಶುಭಮನ್ ಗಿಲ್ ಟೀಮ್ ಇಂಡಿಯಾ ಪರ ಬಿಗ್ ಇನಿಂಗ್ಸ್ ಆಡುವಲ್ಲಿ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಇವರ ಆಟವನ್ನು ಕಂಡು ಅಭಿಮಾನಿಗಳು ಇನ್ನು ಈ ಪ್ಲೇಯರ್‌ಗೆ ಎಷ್ಟು ಅವಕಾಶ ಎಂಬ ಪ್ರಶ್ನೆಗಳು ಮಾಡುತ್ತಾ ಇದ್ದಾರೆ.
ಶುಭಮನ್ ಗಿಲ್ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಗಿಲ್ ಕೊನೆಯ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕವನ್ನು 328 ದಿನಗಳ ಹಿಂದೆ ಬಾರಿಸಿದ್ದರು. ಆಸ್ಟ್ರೇಲಿಯಾ ವಿರುದ್ದ ಮಾರ್ಚ 9 ಶುಭಮನ್ ಗಿಲ್ ಕೊನೆಯ ಬಾರಿಗೆ ಶತಕವನ್ನು ಸಿಡಿಸಿದ್ದರು. ಶುಭಮನ್ ಗಿಲ್ 235 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ 128 ರನ್ ಬಾರಿಸಿ ಅಬ್ಬರಿಸಿದ್ದರು.

ಗಿಲ್ ಅಪ್ಪಿಕೊಂಡಿರುವ ವೈಫಲ್ಯ
ಈ ಶತಕ ಬಾರಿಸಿದ ಬಳಿಕ ಶುಭಮನ್ ಗಿಲ್ ಏಳು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಕಣಕ್ಕೆ ಇಳಿದಿದ್ದಾರೆ. ಇದರಲ್ಲಿ ಒಮ್ಮೆಯೂ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಶುಭಮನ್ ಗಿಲ್ 12 ಇನ್ನಿಂಗ್ಸ್‌ಗಳಲ್ಲಿ ರನ್ ಬರವನ್ನು ಅನುಭಿಸಿದ್ದಾರೆ. ಈ ವೇಳೆ ಗಿಲ್ ಮೂರು ಬಾರಿ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಸಿಟಿವ್ ಇಂಟೆಟ್‌ನೊಂದಿಗೆ ಬ್ಯಾಟ್ ಮಾಡಿ ಭರವಸೆ ಮೂಡಿಸಿದರು. ಆದರೆ ಈ ಇನಿಂಗ್ಸ್‌ನಲ್ಲಿ 36 ರನ್ ಬಾರಿಸುತ್ತಿದ್ದಂತೆ ಗಿಲ್ ಔಟ್ ಆದರು. ಪದೇ ಪದೇ ಗಿಲ್ ವೈಫಲ್ಯ ಅನುಭವಿಸುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಎರಡನೇ ಟೆಸ್ಟ್‌ನಲ್ಲಿ ಔಟ್ ಆಗಿದ್ದು ಹೇಗೆ?
ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡಿತು. ಈ ವೇಳೆ ರೋಹಿತ್ ಶರ್ಮಾ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಈ ವೇಳೆ ಕ್ರೀಸ್ಗೆ ಬಂದ ಗಿಲ್, ಬಿಗ್ ಇನ್ನಿಂಗ್ಸ್ ಆಡುವ ಸೂಚನೆ ನೀಡಿದರು. ಅಲ್ಲದೆ ಭರ್ಜರಿ ಫುಟ್‌ವರ್ಕ್ ಮೂಲಕ ಭರವಸೆ ಮೂಡಿಸಿದ್ದರು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಗಿಲ್ ಭರವಸೆ ಮೂಡಿಸಿದ್ದರು.
ಜೇಮ್ಸ್ ಆಂಡರ್ಸನ್ ಮೊದಲ ಓವರ್‌ನಲ್ಲಿ ಎಚ್ಚರಿಕೆ ಆಟ ಆಡಿದರು. ಆದರೆ ಎರಡನೇ ಓವರ್‌ನಲ್ಲಿ ತಾಳ್ಮೆ ಕಳೆದುಕೊಂಡರು. ಈ ವೇಳೆ ಏಳನೇ ಸ್ಟಂಪ್ ಮೇಲೆ ಬಿದ್ದ ಚೆಂಡನ್ನು ಕೆಣಕಿದ ಗಿಲ್, ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿದರು.
210 ದಿನಗಳಿಂದ ಟೀಮ್ ಇಂಡಿಯಾದಿಂದ ದೂರ
210 ದಿನಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಅನುಭವಿ ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಕೈ ಬಿಟ್ಟ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಶುಭಮನ್ ಗಿಲ್ ಅವರ ಫಾರ್ಮ್ ಅವರನ್ನು ನೋಡಿದ ಮೇಲೆ ಪೂಜಾರ ರನ್‌ಗಳಿಕೆ ಸ್ಥಿರವಾಗಿದೆ.
ಚೇತೇಶ್ವರ್ ಪೂಜಾರ 2022ರ ಡಿಸೆಂಬರ್‌ನ್ಲಿ ಬಾಂಗ್ಲಾ ಪ್ರವಾಸದಲ್ಲಿ ಚೇತೇಶ್ವರ್ ಪೂಜಾರ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಬಿಗ್ ಇನ್ನಿಂಗ್ಸ್ ಆಡಿ ಸೈ ಎನಿಸಿಕೊಂಡಿದ್ದರು. ಇದಾದ ಬಳಿಕ ಅವರಿಗೆ ಆರು ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಲಾಯಿತು.
ಚೇತೇಶ್ವರ್ ಆರು ಟೆಸ್ಟ್ ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ ಮೂರು ಬಾರಿ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದ್ದಾರೆ. ಇನ್ನು ಒಂದು ಬಾರಿ ಐವತ್ತಕ್ಕೂ ಹೆಚ್ಚು ರನ್ ಬಾರಿಸಿ ಭರವಸೆಯನ್ನು ಮೂಡಿಸಿದ್ದರು.
ರಣಜಿಯಲ್ಲಿ ಸ್ಥಿರ ಪ್ರದರ್ಶನ
ಚೇತೇಶ್ವರ್ ಪೂಜಾರ ರಣಜಿಯಲ್ಲಿ ಸೌರಾಷ್ಟ್ರ ಪರ ಬ್ಯಾಟ್ ಮಾಡಿ ಸ್ಥಿರ ಪ್ರದರ್ಶನ ನೀಡಿ ರನ್‌ಗಳನ್ನು ಕಲೆ ಹಾಕುತ್ತಿದ್ದಾರೆ. ಈ ಪ್ಲೇಯರ್ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಆಯ್ಕೆದಾರರು ಇವರತ್ತ ಇನ್ನು ಚಿತ್ತವನ್ನು ನೆಟ್ಟಿಲ್ಲ. ಮೂರನೇ ಟೆಸ್ಟ್‌ನಲ್ಲಾದ್ರೂ ಇವರಿಗೆ ಸ್ಥಾನ ಲಭಿಸುತ್ತದಾ ಎಂಬ ಪ್ರಶ್ನೆ ಉದ್ಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications