Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat kohli: ಇತ್ತೀಚೆಗೆ ಲಂಡನ್‌ ಬೀದಿಗಳಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಿರುವುದು ಏಕೆ?

ಆಗಸ್ಟ್ 16 ಶುಕ್ರವಾರ, ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್‌ಗೆ ಶಾಶ್ವತವಾಗಿ ಶಿಫ್ಟ್ ಆಗುತ್ತಿದ್ದಾರೆ ಎಂಬ ವದಂತಿಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಇದೀಗ ಈ ವದಂತಿಗಳು ಇನ್ನಷ್ಟು ವೇಗ ಪಡೆದುಕೊಂಡಿವೆ.

ಏಕೆಂದರೆ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಲಂಡನ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡಿದ್ದರು. ಸರಣಿ ಮುಗಿಸಿ ಮತ್ತೆ ಅವರು ಲಂಡನ್‌ಗೆ ಮರಳಿದ್ದು, ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Why is Virat Kohli appearing on London streets

ಈ ವಿಡಿಯೋದಲ್ಲಿ ಕಿಂಗ್ ಕೊಹ್ಲಿ ಲಂಡನ್‌ನ ರಸ್ತೆಯೊಂದರ ಮಧ್ಯೆ ಭಾಗದಲ್ಲಿ ನಿಂತುಕೊಂಡಿದ್ದಾರೆ.
ಈ ವೇಳೆ ಕೆಲವು ಕಾರುಗಳು ಅವರ ಮುಂದೆ ಹೋಗುತ್ತಿವೆ. ಇದಲ್ಲದೆ ಅವರು ರಸ್ತೆಯ ಇನ್ನೊಂದು ಬದಿಯಲ್ಲಿರುವ ಯಾರನ್ನೊ ತೋರಿಸುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.

ವಿರಾಟ್ ಮನೆ ಕಟ್ಟುತ್ತಿದ್ದಾರಾ?

ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳೊಂದಿಗೆ ಲಂಡನ್‌ನಲ್ಲಿ ರಜಾದಿನಗಳನ್ನು ಕಳೆಯಲು ಆಗಾಗ್ಗೆ ಹೋಗುತ್ತಿರುತ್ತಾರೆ. ಲಂಡನ್‌ಗೆ ಹೋಗುವುದು ಅವರಿಗೆ ಬಹಳ ದಿನಗಳಿಂದ ಇಷ್ಟವಂತೆ. 2023 ರಿಂದ ಕೊಹ್ಲಿ ಲಂಡನ್‌ನಲ್ಲಿ ಹೆಚ್ಚಾಗಿ ತಿರುಗಾಡುತ್ತಿದ್ದಾತರೆ.

ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ಪರೇಡ್ ಮುಗಿದ ಬಳಿಕ ತಕ್ಷಣವೇ ಕೊಹ್ಲಿ ಲಂಡನ್‌ಗೆ ತೆರಳಿದರು. ಇದೀಗ ಮತ್ತೊಮ್ಮೆ ಅವರು ಶ್ರೀಲಂಕಾ ಸರಣಿ ಬಳಿಕ ಲಂಡನ್ ತಲುಪಿದ್ದಾರೆ. ಹೀಗಾಗಿ ಕೊಹ್ಲಿ ಲಂಡನ್‌ನಲ್ಲಿ ಮನೆ ಕಟ್ಟುತ್ತಿದ್ದಾರೆ ಎಂಬ ಚರ್ಚೆ ತೀವ್ರಗೊಂಡಿದೆ. ಆದರೆ ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೂಲತಃ ವಿರಾಟ್ ಕೊಹ್ಲಿ ನವದೆಹಲಿಯವರಾಗಿದ್ದು, ಅಲ್ಲಿಯೂ ಮನೆಯನ್ನು ಹೊಂದಿದ್ದಾರೆ. ಅವರ ತಾಯಿ, ಸಹೋದರ ಮತ್ತು ಕುಟುಂಬಸ್ಥರು ದೆಹಲಿಯಲ್ಲೇ ವಾಸಿಸುತ್ತಿದ್ದಾರೆ. ಇದಲ್ಲದೇ ವಿರಾಟ್ ಮತ್ತು ಅನುಷ್ಕಾ ಕೂಡ ಮುಂಬೈನಲ್ಲಿ ಮನೆ ಹೊಂದಿದ್ದಾರೆ.

ಲಂಡನ್‌ನಲ್ಲಿ ಕ್ರಿಕೆಟ್ ಆಡುವುದು ಕಡಿಮೆ. ಆದ್ದರಿಂದ ಕೊಹ್ಲಿ ಸಾಮಾನ್ಯರಂತೆ ಬೀದಿಗಳಲ್ಲಿ ಸುಲಭವಾಗಿ ತಿರುಗಾಡಬಹುದು. ಈ ಹಿಂದೆ ಸಂದರ್ಶನವೊಂದರಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಆರಾಮವಾಗಿ ಲಂಡನ್‌ನಲ್ಲಿ ಓಡಾಡಬಹುದು ಎಂದು ಹೇಳಿದ್ದರು.

Story first published: Friday, August 16, 2024, 12:04 [IST]
Other articles published on Aug 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+