IPL 2025 RCB: ರಜತ್ ಪಾಟಿದಾರ್ ಬದಲು ಬೇತೆಲ್ 3ನೇ ಕ್ರಮಾಂಕದಲ್ಲಿ ಬೆಸ್ಟ್ ಪ್ಲೇಯರ್: ಇಲ್ಲಿದೆ ಕಾರಣ
ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಟ್ರೋಫಿ ಮುಗಿದ ಮೇಲೆ ಎಲ್ಲರ ಚಿತ್ತ ಐಪಿಎಲ್ ಮೇಲೆ ನೆಟ್ಟಿರಲಿದೆ. ಈ ವೇಳೆ ಆರ್‍ಸಿಬಿ ಸಹ ಬಲಿಷ್ಠ ತಂಡವನ್ನು ಕಟ್ಟಿದ್ದು, ಚೊಚ್ಚಲ ಪ್ರಶಸ್ತಿ ಕನಸಿನಲ್ಲಿದೆ. ಈ ವೇಳೆ ಹಲವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿದೆ. ಆರ್‍ಸಿಬಿ ತಂಡ ಸೇರಿರುವ ಆಟಗಾರರು ಈಗಾಗಲೇ ಬೇರೆ ಬೇರೆ ಲೀಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ.
ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಹಾಗೂ ಹೋಬಾರ್ಟ್ ಹರಿಕೇನ್ಸ್ ತಂಡಗಳ ನಡುವೆ ಕಾದಾಟ ನಡೆಯಿತು. ಈ ವೇಳೆ ಮೆಲ್ಬೋರ್ನ್ ರೆನೆಗೇಡ್ಸ್ ಪರ ಮಿಡ್ಲ್ ಆರ್ಡರ್‍ನಲ್ಲಿ ಆಡಿದ ಇಂಗ್ಲೆಂಡ್ ತಂಡದ ಯುವ ಆಟಗಾರ ಜಾಕಬ್ ಬೇತೆಲ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 50 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ 87 ರನ್ ಸಿಡಿಸಿ ಅಬ್ಬರಿಸಿದ್ದರು. ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಸೋತರೂ ಸಹ ಬೇತೆಲ್ ಆಟ ಎಲ್ಲರ ಮನ ಗೆದ್ದಿತು.

ಬಿಗ್ ಬ್ಯಾಷ್ ಲೀಗ್‌ನಲ್ಲಿ ಜಾಕಬ್ ಬೇತೆಲ್ ಆಡಿದ ಧಾಟಿಯನ್ನು ನೋಡಿದ ಅಭಿಮಾನಿಗಳು ಇವರ ಬಗ್ಗೆ ಚರ್ಚೆಗಳನ್ನು ಆರಂಭಿಸಿದ್ದಾರೆ. ಇವರು ಆರ್‍ಸಿಬಿ ಪರ ಮಿಡ್ಲ್ ಆರ್ಡರ್‍ನಲ್ಲಿ ಆಡಿದರೆ ಬೆಸ್ಟ್ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜಾಕಬ್, ರಜತ್ ಪಾಟಿದಾರ್ ಬದಲು ಮೂರನೇ ಕ್ರಮಾಂಕದಲ್ಲಿ ಆಡುವುದರಿಂದ ಏನೆಲ್ಲಾ ಲಾಭ ಎಂಬ ಬಗ್ಗೆ ವರದಿ ಇಲ್ಲಿದೆ.
ಆಂಕರ್ ಇನಿಂಗ್ಸ್
ಜಾಕಬ್ ಒಬ್ಬ ಯುವ ಆಟಗಾರ. ಇವರು ತಮ್ಮಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಈಗಾಗಲೇ ವಿಶ್ವಕ್ಕೆ ಪರಿಚಯಿಸಿದ್ದಾರೆ. ಅಲ್ಲದೆ ಪರಿಸ್ಥಿತಿಗೆ ತಕ್ಕಂತೆ ಆಟವಾಡುವ ಕಲೆ ತಮ್ಮಲ್ಲಿ ಇರುವುದಾಗಿ ಸಾರಿ ಹೇಳಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನ 34ನೇ ಪಂದ್ಯದಲ್ಲಿ ಸಂಕಷ್ಟದಲ್ಲಿ ಮೆಲ್ಬೋರ್ನ್ ತಂಡಕ್ಕೆ ಇವರು ಆಧಾರವಾಗಿದ್ದ ಧಾಟಿ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ಜಾಕಬ್ ಅವರಿಗೆ ಯಾವ ಸಮಯದಲ್ಲಿ ಗೇರ್ ಶಿಫ್ಟ್ ಮಾಡಬೇಕು ಎಂಬ ಬಗ್ಗೆ ಅರಿವು ಇರುವುದರಿಂದ ಇವರು ಮೂರನೇ ಕ್ರಮಾಂಕದಲ್ಲಿ ಆಡಿದರೆ ಬೆಸ್ಟ್.

ರೈಟ್, ಲೆಫ್ಟ್ ಕಾಂಬಿನೇಷನ್
ಒಮ್ಮೆ ಆರ್‍ಸಿಬಿ ಬ್ಯಾಟಿಂಗ್ ಲೈನ್ ಅಪ್ ನೋಡಿದರೆ, ಹೆಚ್ಚಾಗಿ ರೈಟ್ ಹ್ಯಾಂಡ್ ಬ್ಯಾಟರ್‍ಗಳೇ ಇದ್ದಾರೆ. ಇನ್ನು ಟಾಪ್ ಆರ್ಡರ್‍ನಲ್ಲಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ರೈಟ್ ಹ್ಯಾಂಡ್ ಬ್ಯಾಟರ್‍ಗಳು. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಜಾಕಬ್ ಬೇತೆಲ್ ಬ್ಯಾಟ್ ಮಾಡಿದರೆ, ರೈಟ್ ಹಾಗೂ ಲೆಫ್ಟ್ ಕಾಂಬಿನೇಷನ್ ಮಾಡಿದಂತೆ ಆಗುತ್ತದೆ.
ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಪ್ಲೇಯರ್
ಇನ್ನು ರಜತ್ ಪಾಟಿದಾರ್ ಅವರಿಗಿಂತ ಮೊದಲು ಜಾಕಬ್ ಬೇತೆಲ್ ಬ್ಯಾಟಿಂಗ್ ಆಡುವುದುರಿಂದ ತಂಡಕ್ಕೆ ನೆರವಾಗಬಲ್ಲರು. ಇವರು ಮೂರನೇ ಕ್ರಮಾಂಕದಲ್ಲಿ ಆಡಿದರೆ ತಂಡದ ಮೊತ್ತ ಹಿಗ್ಗಿಸುವಲ್ಲಿ ನೆರವಾಗಬಲ್ಲರು. ಇವರು ಸ್ಫೋಟಕ ಆಟದಿಂದ ಈಗಾಗಲೇ ಸದ್ದು ಮಾಡಿದ್ದರಿಂದ ಬೆಂಗಳೂರಿನ ಫ್ಲ್ಯಾಟ್ ಪಿಚ್‌ಗಳಲ್ಲಿ ಅಬ್ಬರಿಸಬಲ್ಲರು. ಹೀಗಾಗಿ ಇವರಿಗೆ ಟಾಪ್ ಆರ್ಡರ್‍ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications