For Quick Alerts
ALLOW NOTIFICATIONS  
For Daily Alerts
 

ಅರ್ಧಕ್ಕೆ ಗಡ್ಡ, ಮೀಸೆ ಬೋಳಿಸಿದ ದ.ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಕ್ ಕ್ಯಾಲೀಸ್!

Why Jacques Kallis shaved exactly half of his beard and moustache

ಕೇಪ್ ಟೌನ್, ನವೆಂಬರ್ 29: ತನ್ನ ಮೀಸೆ, ಗಡ್ಡವನ್ನು ಅರ್ಧಕ್ಕೆ ಬೋಳಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ದಕ್ಷಿಣ ಆಫ್ರಿಕಾ ಮಾಜಿ ಆಲ್ ರೌಂಡರ್ ಜಾಕ್ ಕ್ಯಾಲೀಸ್ ಅಚ್ಚರಿ ಮೂಡಿಸಿದ್ದಾರೆ. ವಿಚಿತ್ರವಾಗಿ ಕಾಣಿಸಿಕೊಂಡಿರುವ ಕ್ಯಾಲೀಸ್ ಅವರ ಈ ಹೊಸ ಅವತಾರದ ಗುಟ್ಟು ಆರಂಭದಲ್ಲಿ ಅಭಿಮಾನಿಗಳಿಗೂ ಅರ್ಥವಾಗಿರಲಿಲ್ಲ.

'ಕೆಲ ಆಸಕ್ತಿದಾಯಕ ದಿನಗಳತ್ತ ಹೋಗುತ್ತಿದ್ದೇನೆ. ರೈನೋಸ್ ಮತ್ತು ಗಾಲ್ಫ್ ಅಭಿವೃದ್ಧಿಯ ಒಳ್ಳೆಯ ಉದ್ದೇಶ ಇದರ ಹಿಂದಿದೆ,' ಎಂದು ಕ್ಯಾಲೀಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಸಲಿಗೆ ಘೇಂಡಾಮೃಗಗಳ ಉಳಿವಿಕೆ ಕುರಿತು ಅಭಿಯಾನದಲ್ಲಿ ಕ್ಯಾಲೀಸ್ ಪಾಲ್ಗೊಂಡಿರುವುದು ಅವರ ಈ ಹೊಸ ಅವತಾರಕ್ಕೆ ಕಾರಣ.

44ರ ಹರೆಯದ ಜಾಕ್ ಕ್ಯಾಲೀಸ್, ದಕ್ಷಿಣ ಆಫ್ರಿಕಾದಲ್ಲಿ 'ಘೇಂಡಾಮೃಗಗಳನ್ನು ಉಳಿಸಿ' ಚಾಲೆಂಜ್ ಸ್ವೀಕರಿಸಿದ್ದಾರೆ. ಈ ಸವಾಲು ಸ್ವೀಕರಿಸಿದರು ತನ್ನ ಮುಖ ಮತ್ತು ಎದೆಯ ಅರ್ಧ ಭಾಗದಷ್ಟು ಕೂದಲನ್ನು ತೆಗೆಯಬೇಕು. ಈ ಮೂಲಕ ದೇಶದಲ್ಲಿ ರೈನೊಗಳ ಉಳಿವಿನ ಜಾಗೃತಿ ಮೂಡಿಸಬೇಕು.

ವಿಶ್ವದ ಆಕರ್ಷಣೀಯ ಕ್ರಿಕೆಟ್‌ ಆಟಗಾರರಲ್ಲಿ ಗುರುತಿಸಿಕೊಂಡಿದ್ದವರು ಜಾಕ್ ಕ್ಯಾಲೀಸ್, ದಕ್ಷಿಣ ಆಫ್ರಿಕಾ ಪರ 166 ಟೆಸ್ಟ್‌, 328 ಏಕದಿನ ಮತ್ತು 25 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಮತ್ತು ಏಕದಿನದಲ್ಲಿ 10,000 ರನ್‌, 250 ವಿಕೆಟ್ ವಿಕೆಟ್ ಪಡೆದ ವಿಶ್ವದ ಏಕಮಾತ್ರ ಆಲ್ ರೌಂಡರ್ ಕ್ಯಾಲೀಸ್.

ಟೆಸ್ಟ್, ಏಕದಿನ, ಟಿ20 ಮಾದರಿಗಳಲ್ಲಿ ಕ್ರಮವಾಗಿ 13,289, 11,579 ಮತ್ತು 666 ರನ್, 292, 273 ಮತ್ತು 12 ವಿಕೆಟ್ ದಾಖಲೆ ಕ್ಯಾಲೀಸ್ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ಯಾಲೀಸ್ ಒಟ್ಟು 45 ಶತಕಗಳನ್ನು ಬಾರಿಸಿದ್ದಾರೆ. ಇದು ಸಚಿನ್ ತೆಂಡೂಲ್ಕರ್ ಅವರ 51 ಟೆಸ್ಟ್ ಶತಕಗಳ ದಾಖಲೆ ಬಳಿಕ ಎರಡನೇ ಅತ್ಯಧಿಕ ಟೆಸ್ಟ್ ಶತಕಗಳ ದಾಖಲೆಯಾಗಿದೆ.

Story first published: Friday, November 29, 2019, 16:40 [IST]
Other articles published on Nov 29, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+