Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಹೆಲ್ಮೆಟ್‌ ಹಾಕಿಕೊಂಡ ಶ್ರೀಲಂಕಾ ಆಟಗಾರ; ಕಾರಣ ತಿಳಿದರೆ ಭಾರತೀಯ ಅಭಿಮಾನಿಗಳು ಫುಲ್ ಖುಷ್‌

ಶ್ರೀಲಂಕಾ ದಿಗ್ಗಜ ಆಟಗಾರ ಕುಮಾರ್ ಸಂಗಾಕ್ಕರ ಈಗ ಭಾರೀ ಸುದ್ದಿಯಲ್ಲಿರುವ ಆಟಗಾರ. ಶ್ರೀಲಂಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 63 ಶತಕ ಬಾರಿಸಿ ಅಬ್ಬರಿಸಿರುವ ಸಂಗಾ, ಭಾರತದ ಹೆಲ್ಮೆಟ್‌ ಹಾಕಿಕೊಂಡು ಬ್ಯಾಟ್ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದಕ್ಕೆ ಕಾರಣ ಏನು? ಎಂಬದನ್ನು ತಿಳಿದರೆ ಭಾರತೀಯ ಅಭಿಮಾನಿಗಳಿಗೆ ಖುಷ್ ಆಗುವುದು ಗ್ಯಾರಂಟಿ.

ಕುಮಾರ್ ಸಂಗಕ್ಕಾರ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳ ಕಳೆದಿವೆ. ಆದರೆ ಇವರು ತಮ್ಮ 48 ನೇ ವಯಸ್ಸಿನಲ್ಲಿ ಅವರು ಇಂಗ್ಲಿಷ್ ಕ್ರಿಕೆಟ್ ಕ್ಲಬ್ ಶಿಲ್ಲಿಂಗ್‌ಸ್ಟೋನ್ ಪರ ಆಡುತ್ತಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಅವರು ಬ್ರಾಡ್‌ಸ್ಟೋನ್ ವಿರುದ್ಧ 168 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಶತಕಕ್ಕಿಂತ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿದ್ದು ಅವರ ಹೆಲ್ಮೆಟ್‌.

Why Lankan Legend

ಶಿಲ್ಲಿಂಗ್‌ಸ್ಟೋನ್ ಪರ ಆಡುವಾಗ ಸಂಗಾ ಭಾರತದ ಹೆಲ್ಮೆಟ್ ಹಾಕಿಕೊಂಡಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ಬ್ರಾಡ್‌ಸ್ಟೋನ್ ವಿರುದ್ಧ 168 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ, ಅವರು 16 ಬೌಂಡರಿಗಳು ಮತ್ತು 11 ಸಿಕ್ಸರ್‌ಗಳನ್ನು ಬಾರಿಸಿದರು. ಒಟ್ಟು 130 ರನ್‌ಗಳನ್ನು ಸಂಗಾ ಬೌಂಡರಿ, ಸಿಕ್ಸರ್‌ಗಳಿಂದಲೇ ಕಲೆ ಹಾಕಿದರು. ಐಪಿಎಲ್ 2026 ರಲ್ಲಿ ತರಬೇತಿ ಪಡೆದ ನಂತರ ಅವರು ಮೈದಾನಕ್ಕೆ ಮರಳಿದ್ದನ್ನು ಅಭಿಮಾನಿಗಳು ಆನಂದಿಸುತ್ತಿದ್ದಾರೆ. ಬಿಸಿಸಿಐ ಲೋಗೋ ಮತ್ತು ತ್ರಿವರ್ಣ ಧ್ವಜವನ್ನು ಒಳಗೊಂಡ ಸಂಗಕ್ಕಾರ ಅವರ ಹೆಲ್ಮೆಟ್ ಧರಿಸಿದ್ದು ಏಕೆ? ಇವರಿಗೆ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತಿಳಿಸಿದ್ದಾರೆ.

ಭಾರತೀಯ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಈ ಹೆಲ್ಮೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾಗಿ ಕುಮಾರ್ ಸಂಗಕ್ಕಾರ ಬಹಿರಂಗಪಡಿಸಿದ್ದಾರೆ. ಸಂಗಕ್ಕಾರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ತರಬೇತಿದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಯಶಸ್ವಿ ಜೈಸ್ವಾಲ್‌ ಅವರ ಐಪಿಎಲ್‌ ಪಯಣದ ಬಗ್ಗೆ ಇದೇ ವೇಳೆ ಮಾತನಾಡಿದ್ದಾರೆ. ಜೈಸ್ವಾಲ್ ಇತರ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗದ ಕೆಲಸವನ್ನು ಮಾಡುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ಮತ್ತು ಯಾವುದೇ ಬೌಲಿಂಗ್ ದಾಳಿಯ ವಿರುದ್ಧ ರನ್ ಗಳಿಸುತ್ತಾರೆ ಎಂದು ಹೇಳಿದ್ದಾರೆ.

ಕುಮಾರ್ ಸಂಗಕ್ಕಾರ ಸಾಧನೆ

ಕುಮಾರ್ ಸಂಗಕ್ಕಾರ ಶ್ರೀಲಂಕಾದ ಸ್ಟಾರ್ ಆಟಗಾರ. ಎಡಗೈ ಆಟಗಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ 134 ಪಂದ್ಯಗಳ 233 ಇನ್ನಿಂಗ್ಸ್‌ಗಳಲ್ಲಿ, ಅವರು 38 ಶತಕಗಳು ಮತ್ತು 52 ಅರ್ಧಶತಕಗಳು ಸೇರಿದಂತೆ 57 ಸರಾಸರಿಯಲ್ಲಿ 12,400 ರನ್ ಗಳಿಸಿದ್ದಾರೆ. ಇವರು 404 ಏಕದಿನ ಪಂದ್ಯಗಳನ್ನು ಆಡಿದ್ದು, 25 ಶತಕ ಒಳಗೊಂಡಂತೆ 14,234 ರನ್ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್

ಮಾಜಿ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ಈ ಬಾರಿಯ ಐಪಿಎಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು, ಪ್ಲೇ ಆಫ್ ಪ್ರವೇಶಿಸಿತು. ಅಲ್ಲದೆ ಎಲಿಮಿನೇಟರ್ ಪಂದ್ಯವನ್ನು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಜಯ ಸಾಧಿಸಿತ್ತು. ಆದರೆ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾರ್‌ತ ವಿರುದ್ಧ ಸೋಲು ಕಂಡಿತು.

Story first published: Friday, June 19, 2026, 12:59 [IST]
Other articles published on Jun 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+