ಗೆದ್ದ ಮೇಲೆ 'ಹಲ್ಕ್' ಬೊಂಬೆ ಹಿಡಿದು ಮೈದಾನಕ್ಕೆ ಬಂದ ಸ್ಟೋಯ್ನಿಸ್: ಕಾರಣವೇನು?

ಐಪಿಎಲ್ 2020 ಸಮಾಪ್ತಿಯಾಗಲು ಇನ್ನೊಂದು ಪಂದ್ಯ ಬಾಕಿ ಇದೆ. ಫೈನಲ್ ಹಣಾಹಣಿಯು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನವೆಂಬರ್ 10 ರಂದು ನಡೆಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಇದೇ ಮೊದಲ ಬಾರಿಗೆ ಐಪಿಎಲ್ ನ ಫೈನಲ್ ಪ್ರವೇಶಿಸಿದೆ. ಈಗಾಗಲೇ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ಸ್ ಎನಿಸಿಕೊಂಡಿರುವ ದಿಗ್ಗಜ ತಂಡ ಮುಂಬೈ ಅನ್ನು ಎದುರಿಸಲಿದೆ.
ನವೆಂಬರ್ 8 ರಂದು ನಡೆದ ಪಂದ್ಯದಲ್ಲಿ ಫಾರ್ಮ್‌ನಲ್ಲಿದ್ದ ಹೈದರಾಬಾದ್ ಅನ್ನು ಮಣಿಸಿರುವ ಡೆಲ್ಲಿ ಆಟಗಾರರು ವಿಶ್ವಾಸದ ಉತ್ತುಂಗದಲ್ಲಿದ್ದಾರೆ. ಶಿಖರ್ ಧವನ್, ಮಾರ್ಕಸ್ ಸ್ಟೋಯ್ನಿಸ್, ಹೆಟ್‌ಮೈರ್, ರಬಾಡಾ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ ಡೆಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ತಮ್ಮ ಆಲ್‌ರೌಂಡರ್ ಪ್ರದರ್ಶನಕ್ಕಾಗಿ ಸ್ಟೋಯ್‌ನಿಸ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಹ ಲಭಿಸಿತು. ಆದರೆ ಪ್ರಶಸ್ತಿ ಪಡೆಯಲು ಬಂದ ಅವರ ಕೈಯಲ್ಲಿದ್ದ ಬೊಂಬೆ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ.

ಹಲ್ಕ್ ಬೊಂಬೆ ತಂದಿದ್ದ ಸ್ಟೋಯ್ನಿಸ್
ಪ್ರಶಸ್ತಿ ಪಡೆಯಲು ಬಂದಿದ್ದ ಮಾರ್ಕಸ್ ಸ್ಟೋಯ್ನಿಸ್ ಅವರ ಕೈಯಲ್ಲಿ 'ಹಲ್ಕ್' ಪಾತ್ರದ ಬೊಂಬೆ ಇತ್ತು. ಮಾರ್ವೆಲ್ಸ್ ಕಾಮಿಕ್ಸ್‌ನಲ್ಲಿ ದಿವಂಗತ ಸ್ಟ್ಯಾನ್ ಲೀ ಸೃಷ್ಟಿಸಿದ್ದ ಪಾತ್ರ ಅದು ಹಲ್ಕ್. ಭಾರಿ ಗಾತ್ರದ, ಭಾರಿ ಶಕ್ತಿಯ, ಸದಾ ಕೋಪಿಷ್ಟ ಹಸಿರು ಬಣ್ಣದ ವ್ಯಕ್ತಿಯೇ ಹಲ್ಕ್. ಈ ಹಲ್ಕ್ ನ ಬೊಂಬೆ ಹಿಡಿದು ಪ್ರಶಸ್ತಿ ಪಡೆಯಲು ಬಂದಿದ್ದರು ಸ್ಟೋಯ್ನಿಸ್.

ಶ್ರೇಯಸ್ ಐಯರ್ ಬಳಿ ಬಾಯ್ಬಿಟ್ಟ ಸ್ಟೋಯ್ನಿಸ್
ಪ್ರಶಸ್ತಿ ಸಮಾರಂಭ ಮುಗಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ನ ನಾಯಕ ಶ್ರೇಯಸ್ ಐಯರ್ ಸ್ಟೋಯ್ನಿಸ್‌ನ ಸಂದರ್ಶನ ಮಾಡಿದಾಗ, ತಾವು ಹಲ್ಕ್ ಬೊಂಬೆಯನ್ನು ಏಕೆ ತೆಗೆದುಕೊಂಡು ಬಂದಿದ್ದೀನಿ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ, ಸ್ಟೋಯ್ನಿಸ್ ನಡೆಯುವ ರೀತಿಯನ್ನೂ ಐಯ್ಯರ್ ಅಭಿನಯಿಸಿ ತೋರಿಸಿದರು.

ಹಲ್ಕ ಮಾದರಿಯಲ್ಲಿ ಸಂಭ್ರಮಾಚರಣೆ
ನಿನ್ನೆಯ ಪಂದ್ಯದಲ್ಲಿ 27 ಬಾಲಿಗೆ 38 ರನ್ ಭಾರಿಸಿದ್ದ ಸ್ಟೋಯಿನ್ಸ್, ಮೂರು ವಿಕೆಟ್ ಸಹ ಪಡೆದು ಮಿಂಚಿದ್ದರು. ಆದರೆ ಅವರು ವಿಕೆಟ್ ಪಡೆದಾಗೆಲ್ಲಾ, ಹಲ್ಕ್ ಮಾದರಿಯಲ್ಲಿ ತೋಳುಗಳನ್ನು ಮುಂದೆ ಮಾಡಿ, ನರಗಳನ್ನು ಬಿಗಿಗೊಳಿಸಿ ಸಂಭ್ರಮಿಸುತ್ತಿದ್ದರು. ಹಾಗಾಗಿ ಹಲ್ಕ್‌ನ ಬೊಂಬೆ ತಂದಿದ್ದರು ಸ್ಟೋಯಿನ್ಸ್.

ಬಿಗ್‌ಬ್ಯಾಶ್‌ನಲ್ಲೂ ಒಳ್ಳೆಯ ಪ್ರದರ್ಶನ
ಆಸ್ಟ್ರೇಲಿಯಾದ ಆಟಗಾರ ಸ್ಟೋಯ್ನಿಸ್ ಟಿ20 ಯಲ್ಲಿ ಭರ್ಜರಿ ಯಶಸ್ಸನ್ನೇ ಪಡೆದಿದ್ದಾರೆ. ಬಿಗ್‌ಬಾಶ್‌ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದ ಸ್ಟೋಯ್ನಿಸ್, ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ. ನಾಳಿನ (ನವೆಂಬರ್ 10) ರ ಪಂದ್ಯದಲ್ಲಿ ಅವರು ಸಿಡಿದು ನಿಂತರೆ ಮುಂಬೈಗೆ ಗೆಲುವು ಕಷ್ಟವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications