IND vs AUS: ಬಾರ್ಡರ್-ಗವಾಸ್ಕರ್ ಸರಣಿಗೂ ಮುನ್ನ ಕಮ್ಮಿನ್ಸ್ 8 ವಾರಗಳ ವಿರಾಮ ತೆಗೆದುಕೊಂಡಿದ್ದು ಏಕೆ?
ಆಗಸ್ಟ್ 18 ಭಾನುವಾರ, ಈ ವರ್ಷಾಂತ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ನಡೆಯಲಿದೆ. ಈ ಸರಣಿ ಗೆಲ್ಲಲು ಉಭಯ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. 2017 ರಿಂದ ಆಸ್ಟ್ರೇಲಿಯಾ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ಗೆದ್ದಿಲ್ಲ.
ಈ ಸತತ ಸೋಲುಗಳು ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಕುಗ್ಗುವಂತೆ ಮಾಡಿದೆ. ಹೀಗಾಗಿ ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಪ್ಯಾಟ್ ಕಮ್ಮಿನ್ಸ್ 8 ವಾರಗಳ ವಿರಾಮ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ ನಂತರ ಕಮ್ಮಿನ್ಸ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಬಿಡುವಿಲ್ಲದ ಬೇಸಿಗೆ ವೇಳಾಪಟ್ಟಿಯನ್ನು ಪರಿಗಣಿಸಿ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಸೀಮಿತ ಓವರ್‌ಗಳ ಇಂಗ್ಲೆಂಡ್ ಪ್ರವಾಸದ ತಂಡಕ್ಕೆ ಆಯ್ಕೆ ಮಾಡಿಲ್ಲ.
ಆಸ್ಟ್ರೇಲಿಯಾದ 'ಫಾಕ್ಸ್ ಸ್ಪೋರ್ಟ್ಸ್' ಎಂಬ ಮಾಧ್ಯಮ ವಾಹಿನಿಯೊಂದಿಗೆ ಕಮ್ಮಿನ್ಸ್ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಬಗ್ಗೆ ತಿಳಿಸಿದ್ದಾರೆ. 'ವಿರಾಮದ ನಂತರ ಹಿಂತಿರುಗಿದ ನಂತರ ಪ್ರತಿಯೊಬ್ಬ ಆಟಗಾರರೂ ರಿಫ್ರೆಶ್ ಆಗಿರುತ್ತಾರೆ. ನೀವು ಎಂದಿಗೂ ಚಿಂತಿಸುವುದಿಲ್ಲ. ಸುಮಾರು 18 ತಿಂಗಳ ಹಿಂದೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದ ಇಲ್ಲಿಯವರೆಗೂ ನಿರಂತರವಾಗಿ ಬೌಲಿಂಗ್ ಮಾಡುತ್ತಿದ್ದೇನೆ.
ಈ ವಿರಾಮವು ನನಗೆ 7 ಅಥವಾ 8 ವಾರಗಳ ಕಾಲ ವಿಶ್ರಾಂತಿ ಪಡೆಯಲು ಸಮಯವನ್ನು ನೀಡುತ್ತದೆ. ಇದಾದ ನಂತರ ನಾನು ರಿಫ್ರೆಶ್ ಆಗುವು ಮೂಲಕ ಬೇಸಿಗೆಯ ತಯಾರಿಯನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದಾರೆ.
'ನಾಯಕನಾಗಿ ಇಲ್ಲಿಯವರೆಗೆ ಬಾರ್ಡರ್- ಗವಾಸ್ಕರ್ ಟ್ರೋಫಿ ಗೆದ್ದಿಲ್ಲ. ನಮ್ಮ ತಂಡದ ಹಲವು ಆಟಗಾರರು ಇಲ್ಲಿಯವರೆಗೆ ಗೆಲ್ಲಲು ಸಾಧ್ಯವಾಗದ ಟ್ರೋಫಿ ಇದಾಗಿದೆ. ಬೇಸಿಗೆಯಲ್ಲಿ ನಮ್ಮ ಗುರಿ ಬಾರ್ಡರ್- ಗವಾಸ್ಕರ್ ಗೆಲ್ಲುವುದು.
ಭಾರತ ತಂಡ ನಿಜವಾಗಿಯೂ ತುಂಬಾ ಚೆನ್ನಾಗಿದೆ. ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಆದರೆ ಈ ಬಾರಿ ನಾವು ಟ್ರೋಫಿಯನ್ನು ಗೆಲ್ಲಲು ಉತ್ತಮ ಸ್ಥಿತಿಯಲ್ಲಿರುತ್ತೇವೆ' ಎಂಬ ಭರವಸೆಯನ್ನು ಕಮ್ಮಿನ್ಸ್ ವ್ಯಕ್ತಪಡಿಸಿದ್ದಾರೆ.
ಕಮ್ಮಿನ್ಸ್ ಸದ್ಯಕ್ಕೆ ಟಿ20 ವಿಶ್ವಕಪ್ ಸೋಲಿನ ನೋವಿನಿಂದ ಹೊರಬರುವ ಮನಸ್ಥಿತಿಯಲ್ಲಿಲ್ಲ. ಇದರೊಂದಿಗೆ 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಚಿನ್ನದ ಪದಕ ಗೆದ್ದು ಕೊಡಲು ಸಜ್ಜಾಗುತ್ತಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ಸಜ್ಜು
2028ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರಿಸಲಾಗಿದೆ. ವಿಶ್ವದ ಕ್ರಿಕೆಟ್ ತಂಡಗಳು ಒಲಿಂಪಿಕ್ಸ್ ಬಗ್ಗೆ ಉತ್ಸುಕರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮ್ಮಿನ್ಸ್, ನಾನು ಕೂಡ ಒಲಿಂಪಿಕ್ಸ್ ಭಾಗವಾಗಲು ಬಯಸುತ್ತೇನೆ. ಆಗ ನನಗೆ ಸುಮಾರು 35 ವರ್ಷ ವಯಸ್ಸಾಗಿರುತ್ತದೆ. ನಾನು ತಂಡದ ಭಾಗವಾಗಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications