RCB ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿದ ವೇಗಿ ಕಿಕ್ ಔಟ್ ಕಾರಣವೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು 18ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ವೇಳೆ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಮುಖ ವೇಗಿಯೊಬ್ಬರು ಮುಂದಿನ ಆವೃತ್ತಿ ಐಪಿಎಲ್‌ನಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಹಾಗಿದ್ದರೆ ಆ ವೇಗಿ ಮಾಡಿದ ತಪ್ಪಾದರೂ ಏನು? ಅವರನ್ನು ತಂಡ ಕೈ ಬಿಟ್ಟಿದ್ದು ಏಕೆ ಎಂಬ ಬಗ್ಗೆ ವಿವರಣೆ ಇಲ್ಲಿದೆ.
ಆರ್‌ಸಿಬಿ ತಂಡದ ಕಳೆದ ಕೆಲವು ಆವೃತ್ತಿಗಳಲ್ಲಿ ಎದುರಿಸಿದ್ದ ಬೌಲಿಂಗ್ ಸಮಸ್ಯೆ 18ನೇ ಆವೃತ್ತಿಯಲ್ಲಿ ಕಾಣಲಿಲ್ಲ. ಇದಕ್ಕೆ ಕಾರಣ ತಂಡದಲ್ಲಿ ಹೆಸರಾಂತ ಬೌಲರ್‌ಗಳ ದಂಡೇ ಇತ್ತು. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ತಂಡಕ್ಕೆ ಆಧಾರವಾಗಿದ್ದ ಬೌಲರ್ಸ್, ಎದುರಾಳಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿತ್ತು. ಈ ವೇಳೆ ಡೆತ್ ಓವರ್‌ಗಳಲ್ಲಿ ತಮ್ಮ ಸ್ಲೋವರ್ ಒನ್ ಎಸೆತಗಳ ಮೂಲಕ ರನ್‌ಗಳಿಗೆ ಕಡಿವಾಣ ಹಾಕಿ, ವಿಕೆಟ್ ಬೇಟೆ ನಡೆಸುತ್ತಿದ್ದ ಬೌಲರ್ ಸೇವೆ ಆರ್‌ಸಿಬಿಗೆ ಮುಂದಿನ ಆವೃತ್ತಿಯಲ್ಲಿ ಸಿಗುವುದು ಡೌಟ್.

ಆರ್‌ಸಿಬಿ ತಂಡದ ಸ್ಟಾರ್ ಎಡಗೈ ವೇಗಿ ಯಶ್ ದಯಾಳ್. ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವಲ್ಲಿ ಇವರು ದೊಡ್ಡ ಪಾತ್ರವನ್ನು ವಹಿಸಿದ್ದರು. ಆದರೆ ಐಪಿಎಲ್ ಮುಗಿಯುತ್ತಿದ್ದಂತೆ ಇವರ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಯಶ್ ದಯಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರಿಂದ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ಯಶ್ ವಿರುದ್ಧ ಎಫ್‌ಐಆರ್
ಯಶ್ ದಯಾಳ್ ತಮ್ಮನ್ನು ಲೈಗಿಂಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ. ಇದಕ್ಕೂ ಮೊದಲು ಯಶ್ ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಯುವತಿಯೊಬ್ಬಳು ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿಗೆ ಪತ್ರ ಬರೆದಿದ್ದಾಗಿ ಯುವತಿ ತಿಳಿಸಿದ್ದಾರೆ.
ಇನ್ನು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಯಶ್ ದಯಾಳ್ ಅವರ ಮೇಲೆ ನಿಷೇಧ ಹೇರಿರುವ ಕಾರಣ ಅವರು ಮುಂಬರು ಐಪಿಎಲ್‌ನಲ್ಲಿ ಕಣಕ್ಕೆ ಇಳಿಯುವುದಿಲ್ಲ. ಹೀಗಾಗಿ ಐಪಿಎಲ್ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಎಡಗೈ ವೇಗದ ಬೌಲರ್ ಅವರನ್ನು ಕೈ ಬಿಡುವುದು ಖಚಿತವಾಗಿದೆ.

ಆರ್‌ಸಿಬಿ ಈಗಾಗಲೇ ತಾನು ಉಳಿಸಿಕೊಳ್ಳಬೇಕಿದ್ದ ಹಾಗೂ ರಿಲೀಸ್ ಮಾಡಲಿರುವ ಪ್ಲೇಯರ್‌ಗಳ ಶಾರ್ಟ್ ಲೀಸ್ಟ್ ರೆಡಿ ಮಾಡಿದೆ. ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಯಶ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದರಿಂದ ಆರ್‌ಸಿಬಿ ಸಹ ಇವರನ್ನು ಕೈ ಬಿಡಲಿದೆ. ಇವರ ಬದಲಿಗೆ ಆರ್‌ಸಿಬಿ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲ ಮೂಡಿಸಿದೆ. ಯಶ್ ದಯಾಳ್ ತಮ್ಮ ಬಿಗುವಿನ ದಾಳಿಯ ಮೂಲಕ ನಿಶ್ಚಿತವಾಗಿ ಎದುರಾಳಿಗಳನ್ನು ಕಾಡಿದ್ದರು. ಆದರೆ ಇವರ ಸೇವೆ ಆರ್‌ಸಿಬಿ ತಂಡಕ್ಕೆ ಮುಂದಿನ ಆವೃತ್ತಿಯಲ್ಲಿ ಸಿಗುವುದಿಲ್ಲ. ಈ ಸುದ್ದಿ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications