Boxing Day Test: ಬಾಕ್ಸಿಂಗ್ ಡೇ ಟೆಸ್ಟ್ ಮಹತ್ವ ಏನು? ಇದನ್ನು ಹೀಗೆ ಕರೆಯಲು ಕಾರಣ ಏನು?
- ಭಾರತ, ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್‌ನಲ್ಲಿ ನಾಲ್ಕನೇ ಟೆಸ್ಟ್
- ತಲಾ ಒಂದೊಂದು ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುರವ ಉಭಯ ತಂಡಗಳು
- ಬಾಕ್ಸಿಂಗ್ ಡೇ ಟೆಸ್ಟ್ ಎಂದರೇನು? ಇದರ ಮಹತ್ವ ಏನು?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಗುರುವಾರ ಮೆಲ್ಬೋರ್ನ್‌ನ ಐತಿಹಾಸಿಕ ಅಂಗಳದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಎಂಸಿಜೆ ಮೈದಾನ ಸಿದ್ಧವಾಗಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಕೊಂಡಿವೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಅಂಗಳದಲ್ಲಿ 86 ಸಾವಿರ ಅಭಿಮಾನಿಗಳು ಬಲಿಷ್ಠ ತಂಡಗಳ ನಡುವಣ ಪಂದ್ಯ ನೋಡಲು ಕಾತುರರಾಗಿದ್ದಾರೆ. ಭಾರತ ಈ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವುದುರಿಂದ ಕುತೂಹಲ ಮನೆ ಮಾಡಿದೆ.
ಈ ಮಹತ್ವದ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಗುರಿ ಉಭಯ ತಂಡಗಳದ್ದಾಗಿದೆ. ಈ ಮೈದಾನದಲ್ಲಿ ಭಾರತ ಕಳೆದ 10 ವರ್ಷಗಳಿಂದ ಸೋತೆ ಇಲ್ಲ ಎಂಬುದು ಭಾರತ ತಂಡದ ಮನೋಬಲ ಹೆಚ್ಚಿಸಿದೆ. ಈ ಪಿಚ್ ಕೊಂಚ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದ್ದು, ಟೀಮ್ ಇಂಡಿಯಾ ಮುಖದಲ್ಲಿ ಮಂದಹಾಸ ಮೂಡಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತಿದೆ. ಹೀಗೆ ಈ ಟೆಸ್ಟ್ ಪಂದ್ಯವನ್ನು ಕರೆಯಲು ಕಾರಣ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬಾಕ್ಸಿಂಗ್ ಡೇ ಎಂದರೇನು?
ಸ್ಮಸ್ ದಿನದ ನಂತರದ ದಿನವನ್ನು (ಡಿಸೆಂಬರ್ 26) ಅನೇಕ ದೇಶಗಳಲ್ಲಿ ಬಾಕ್ಸಿಂಗ್ ದಿನ ಎಂದು ಕರೆಯಲಾಗುತ್ತದೆ. ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾ ಸೇರಿದಂತೆ ಅನೇಕ ಕಾಮನ್‌ವೆಲ್ತ್ ದೇಶಗಳಲ್ಲಿ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಬಾಕ್ಸಿಂಗ್ ಡೇ ಎಂದು ಆಚರಿಸಲಾಗುತ್ತದೆ. ಈ ದಿನಕ್ಕೆ ಬೇರೆ ಬೇರೆ ನಂಬಿಕೆಗಳು ಇವೆ. ಇದನ್ನು ಸರಳೀಕರಿಸಿದರೆ, ಕ್ರಿಸ್ಮಸ್ ಹಬ್ಬದಂದು ಬಂಧು ಬಾಂಧವರು ತಮಗೆ ನೀಡಿರುವ ಉಡುಗೆಗಳನ್ನು ತೆರೆದು ನೋಡುವ ದಿನ ಎಂಬ ಅರ್ಥ ಬರುತ್ತದೆ.
ಬಾಕ್ಸಿಂಗ್ ಡೇ ಟೆಸ್ಟ್ ಮೊದಲು ಆರಂಭಾಗಿದ್ದು ಯಾವಾಗ?
ಕ್ರಿಕೆಟ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ 1892 ರಲ್ಲಿ ಮೆಲ್ಬೋರ್ನ್‌ನಲ್ಲಿ ಆರಂಭವಾಯಿತು. ಹೀಗಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ಬಾಕ್ಸಿಂಗ್ ಡೇ ಟೆಸ್ಟ್‌ನ ತವರು ಎಂದು ಕರೆಯುತ್ತಾರೆ. 1892 ಆಸ್ಟ್ರೇಲಿಯಾ ದೇಶೀಯ ಟೂರ್ನಿ ಶೆಫೀಲ್ಡ್ ಶೀಲ್ಡ್ ಪಂದ್ಯ ನಡೆಯಿತು.
ನಿರ್ದಿಷ್ಟವಾಗಿ ಆಸ್ಟ್ರೇಲಿಯಾದಲ್ಲಿ ನೋಡು ನೋಡುತ್ತಿದ್ದಂತೆ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್‌ನಲ್ಲಿ ಟ್ರೆಂಡ್ ಆಯಿತು. ಈ ಪಂದ್ಯವನ್ನು ಮೆಲ್ಬೋರ್ನ್‌ನಲ್ಲಿ ಐತಿಹಾಸಿಕ ಪಂದ್ಯದಲ್ಲಿ ನಡೆಸಲಾಗುತ್ತದೆ. ಆಸೀಸ್ ದೇಶೀಯ ಟೂರ್ನಿಗಳು ಇದೇ ದಿನ ನಡೆದ ಬಹು ವರ್ಷಗಳ ಬಳಿಕ ಇದಕ್ಕೆ ಅಂತಾರಾಷ್ಟ್ರೀಯ ಹೊಳಪು ಸಿಕ್ಕಿತು. 1950 ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ನಡೆಯಿತು. ಸಾಮಾನ್ಯವಾಗಿ ಈ ಪಂದ್ಯವನ್ನು ಆಸ್ಟ್ರೇಲಿಯಾ ಪ್ರವಾಸಿ ತಂಡದೊಂದಿಗೆ ಆಡಲಾಗುತ್ತದೆ.
ಬಾಕ್ಸಿಂಗ್ ಡೇ ಟ್ರೆಡಿಷನ್
ಬಾಕ್ಸಿಂಗ್ ಡೇ ಟೆಸ್ಟ್ ಇಷ್ಟು ಪ್ರಾಮುಖ್ಯತೆ ಪಡೆಯಲು ಇನ್ನೊಂದು ಕಾರಣ ರಜೆ. ಕ್ರಿಸ್ಮಸ್ ನಿಮಿತ್ಯ ರಜೆ ಇರುವ ಕಾರಣ, ಸ್ನೇಹಿತರು ಹಾಗೂ ಕುಟುಂಬಸ್ಥರು ಬಂದು ಕ್ರಿಕೆಟ್ ನೋಡಿ ಎಂಜಾಯ್ ಮಾಡಬಹುದು. ಇನ್ನು ಕ್ರಿಕೆಟ್ ಪ್ರೇಮಿಗಳಿಗೆ ಇದು ಹಬ್ಬ ಇದ್ದಂತೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications