For Quick Alerts
ALLOW NOTIFICATIONS  
For Daily Alerts
 

ಬುಗುರಿ, ಚಿನ್ನಿದಾಂಡು, ಲಗೋರಿ... ಮನಸಿನಂಗಳದಲ್ಲಿ ಸದಾ ಮಾಸದ ಆಟಗಳು!

By ಎನ್.ಜೆ.ಭಾಸ್ಕರ್

ಬುಗುರಿ, ಚಿನ್ನಿದಾಂಡು, ಲಗೋರಿ, ಕುಂಟಬಿಲ್ಲೆ, ಕಪ್ಪೆ ಓಟ, ಮರಕೋತಿ ಆಟಗಳನ್ನು ಆಡೋಣ ಎಂದು ಯಾರಾದರೂ ಕರೆದರೆ ಇದೀಗ ನಿಮ್ಮ ಪ್ರತಿಕ್ರಿಯೆ ಏನಾಗಿರಬಹುದು? ನಿಮಗೆ ಆಶ್ಚರ್ಯವಾಗಬಹುದು.! ಇದಕ್ಕಿಂತಲೂ ಹೆಚ್ಚಾಗಿ ನಿಮ್ಮ ಮನಸಿನಂಗಳದಲ್ಲಿ ಸದಾ ಮಾಸದಂತಹ ಆನಂದದ ಭಾವನೆಯೊಂದು ಖಂಡಿತವಾಗಿಯೂ ಮೂಡುತ್ತದೆ ಅಲ್ಲವೇ?!

ಹೌದು, ಕಾಲಚಕ್ರದ ಜೊತೆಗೆ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು ಇದೀಗ ಅವನತಿಯತ್ತ ತಲುಪಿವೆ. ಕೇವಲ 15 ರಿಂದ 20 ವರ್ಷಗಳ ಹಿಂದೆ ನಾವು ಚಿಕ್ಕವರಿದ್ದಾಗ ಆಡಿದ ಅದೆಷ್ಟೋ ಆಟಗಳು ಇಂದು ಕಣ್ಮರೆಯಾಗಿವೆ. ಇಷ್ಟಾದರೂ ಪರವಾಗಿಲ್ಲ, ನಮ್ಮಲ್ಲಿ ಹಲವರಿಗೆ ಇಂತಹ ಕೆಲವೊಂದು ಆಟಗಳ ಹೆಸರು ಕೂಡ ಮರೆತು ಹೋಗಿದೆ.! ಅದೇನೇ ಇದ್ದರು ಆ ದಿನಗಳ ನೆನಪುಗಳು ನಮ್ಮ ಮನಸಿನಂಗಳದಲ್ಲಿ ಸದಾ ಮಾಸದೆ ನೆಲೆ ನಿಂತಿವೆ.

Why Traditional Rural Games Are Fading out? Unveil the Hidden Treasures of Traditional Games

ಈ ಇಂಟರ್‌ನೆಟ್ ಕಾಲದಲ್ಲಿ ನಮ್ಮ ಜೀವನವು ವೇಗವಾಗಿ ಓಡುತ್ತಿದೆ ನಿಜ. ಆದರೆ, ನಾವೆಷ್ಟೇ ಮರೆತರೂ ನಮ್ಮ ಬಾಲ್ಯವು ಹೆಚ್ಚಾಗಿ ಕಾಡುತ್ತದೆ. ಈ ವೇಗದ ಜೀವನದಲ್ಲಿ ಎಲ್ಲರಿಗೂ ಒಂದು ಕ್ಷಣವಾದರೂ ಮನಸ್ಸಿಗೆ ಮುದನೀಡುವುದು ಅವರೆಲ್ಲರ ಬಾಲ್ಯಜೀವನ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಬೆಳೆದ ಮಕ್ಕಳಿಗಂತೂ ತಾವು ಆಡಿದ ಗೋಲಿ-ಗಜಗ, ಚೌಕಾ-ಬಾರ, ಬುಗುರಿ, ಚಿನ್ನಿದಾಂಡು, ಲಗೋರಿ, ಕುಂಟಬಿಲ್ಲೆ, ಕಪ್ಪೆ ಓಟ, ಕೌಲೆತ್ತು ಮತ್ತು ಮರಕೋತಿಯಂತಹ ಆಟಗಳನ್ನು ನೆನಪಿಸಿಕೊಳ್ಳುವುದರಲ್ಲಿ ಏನೋ ಒಂದು ರೀತಿಯ ಖುಷಿ.

ಒಂತರಾ ಮರಳುಗಾಡಿನಲ್ಲಿ ನಿಂತು ಓಯಸಿಸ್ ಒಂದು ದೊರೆತಂತಹ ತಣ್ಣನೆಯ ಅನುಭವ.! ಇಂತಹ ಆಹ್ಲಾದಕರ ಅನುಭವ ನಿಮಗೆ ದೊರೆಯುವಂತೆ ಮಾಡಿರುವ ಗ್ರಾಮೀಣ ಕ್ರೀಡೆಗಳನ್ನು ನಿಮ್ಮ ಮಕ್ಕಳಿಗೂ ತಲುಪಿಸುವ ಜವಬ್ದಾರಿ ಇದೀಗ ನಮ್ಮ ಮೇಲಿದೆ.! ಹೌದು, ಗ್ರಾಮೀಣ ಕ್ರೀಡೆಗಳು ಇಂದು ನಶಿಸುತ್ತಿವೆ. ಮೊಬೈಲ್, ಟಿವಿ, ಕಂಪ್ಯೂಟರ್‌ ಹಾಗೂ ವೀಡಿಯೂ ಗೇಮ್‌ಗಳು ಗ್ರಾಮೀಣ ಕ್ರೀಡೆಗಳನ್ನು ಮರೆಮಾಡುತ್ತಿವೆ. ನಾವು ಮಕ್ಕಳಿದ್ದಾಗ 'ಎಷ್ಟು ಅಂತ ಹೊರಗೆ ಆಟವಾಡುತ್ತೀಯಾ ಸಾಕು ಮನೆಗೆ ಬಾ'.ಎಂದು ಹೇಳುತ್ತಿದ್ದ ಅಮ್ಮಂದಿರು...ಇಂದು 'ಆಡುವುದನ್ನು ಬಿಟ್ಟು ಸ್ವಲ್ಪ ಹೊರಗೆ ಹೋಗು' ಎಂದು ಹೇಳುವಂತಾಗಿದೆ.

ವೀಡಿಯೂ ಗೇಮ್‌ಗಳಿಗೆ ಮಕ್ಕಳು ಅಡಿಕ್ಟ್

ಇದಕ್ಕಿಂತಲೂ ನಮ್ಮ ಮಕ್ಕಳು ಮೊಬೈಲ್, ಟಿವಿ, ಕಂಪ್ಯೂಟರ್‌ ಹಾಗೂ ವೀಡಿಯೂ ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿರುವ ಕುರಿತು ಪೋಷಕರು ಆತಂಕ ಎದುರಿಸುತ್ತಿದ್ದಾರೆ. ಇವೆಲ್ಲವಕ್ಕೂ ಪರಿಹಾರವಾಗಿ ಗ್ರಾಮೀಣ ಕ್ರೀಡೆಗಳು ಕಾಣುತ್ತಿವೆ. ಆದರೂ ಸಹ ಯಾರೂ ಸಹ ಗ್ರಾಮೀಣ ಕ್ರೀಡೆಗಳನ್ನು ಮತ್ತೆ ಪ್ರಚುರಪಡಿಸಲು ಮನಸ್ಸುಮಾಡುತ್ತಿಲ್ಲ. ಮಕ್ಕಳು ಮೊಬೈಲ್ ಮತ್ತು ವೀಡಿಯೊ ಗೇಮ್‌ಗಳಿಗೆ ದಾಸರಾಗುತ್ತಿದ್ದರೂ ಸಹ ಗ್ರಾಮೀಣ ಕ್ರೀಡೆಗಳಲ್ಲಿರುವ ಆಹ್ಲಾದಕರ ಸತ್ವವನ್ನು ಯಾರೂ ತಿಳಿಯುತ್ತಿಲ್ಲ.

Why Traditional Rural Games Are Fading out? Unveil the Hidden Treasures of Traditional Games

ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು

ಇದಕ್ಕೆಲ್ಲ ಕಾರಣ ಆಧುನಿಕ ಜಗತ್ತು. ನಮ್ಮ ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು. ಇತರ ಮಕ್ಕಳಂತೆ ನಮ್ಮ ಮಕ್ಕಳು ಸಹ ಮೊಬೈಲ್, ಕಂಪ್ಯೂಟರ್‌ಗಳನ್ನು ಅರೆದು ಕುಡಿದಿರಬೇಕು ಎಂದು ಬಹುತೇಕ ಪೋಷಕರು ಎದುರುನೋಡುತ್ತಿದ್ದಾರೆ. ಈ ಕಾಲದಲ್ಲಿ ಇಂಗ್ಲೀಷ್ ಮತ್ತು ಕಂಪ್ಯೂಟರ್ ತಿಳಿದಿದ್ದರೆ ಮಾತ್ರವಷ್ಟೇ ನಮ್ಮ ಮಕ್ಕಳು ಬದುಕಲು ಸಾಧ್ಯ ಎಂಬುದು ಪೋಷಕರ ಆಂಬೋಣ.

ಕಂಪ್ಯೂಟರ್‌ನಲ್ಲಿ ಮುಳುಗಿರುವ ಮಗು

ಆದರೆ, ಇದು ಸಂಪೂರ್ಣ ಸತ್ಯವಲ್ಲ. ಮಕ್ಕಳ ಮನಸ್ಸು ಕಂಪ್ಯೂಟರ್‌ನಿಂದ ಉಲ್ಲಾಸವಾಗಿರಲು ಸಾಧ್ಯವಿಲ್ಲ. ಕಂಪ್ಯೂಟರ್‌ನಲ್ಲಿ ಮುಳುಗಿರುವ ಮಗು ಇಂಜಿನಿಯರ್ ಆಗಬಹುದು. ಆದರೆ, ಸಂಶೋಧಕನಾಗಲು ಸಾಧ್ಯವಿಲ್ಲ. ಬಾಲ್ಯವನ್ನು ಆಟಪಾಟಗಳಿಂದ ಸಂಪೂರ್ಣವಾಗಿ ಅನುಭವಿಸುವ ಮಕ್ಕಳಷ್ಟೇ ವಿಶ್ಲೇಶಕರಾಗಲು ಸಾಧ್ಯ ಎನ್ನುತ್ತವೆ ಹಲವಾರು ವರದಿಗಳು. ಮಕ್ಕಳ ಮನಸ್ಸನ್ನು ಹೊರಜಗತ್ತಿಗೆ ಎಳೆಯುವುದಲ್ಲಿ ಗ್ರಾಮೀಣ ಕ್ರೀಡೆಗಳ ಪಾತ್ರ ದೊಡ್ಡದಿದೆ. ಹಾಗಾಗಿ, ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳ ಅವಶ್ಯಕತೆ ಇದೆ.

ಕನ್ನಡ ಮಣ್ಣಿನಲ್ಲೇ ಹುಟ್ಟಿರುವ ಲಗೋರಿ

ಉದಾಹರಣೆಗೆ ಕನ್ನಡ ಮಣ್ಣಿನಲ್ಲೇ ಹುಟ್ಟಿರುವ ಲಗೋರಿ ಹಳ್ಳಿಯ ಮಕ್ಕಳಿಗೆ ಅಚ್ಚುಮೆಚ್ಚು ಎನ್ನಬಹುದು. 7 ಕಲ್ಲುಗಳನ್ನು ಒಂದರಮೇಲೊಂದು ಜೋಡಿಸಿ ಚೆಂಡನ್ನು ಕಲ್ಲಿಗೆ ಗುರಿಯಿಟ್ಟು ಹೊಡೆಯುವ ಆಟ ಇದು. ಎರಡು ಗುಂಪುಗಳು ಎದುರಾಳಿಗಾಳಾಗಿ ಆಡುವ ಈ ಆಟದಲ್ಲಿ ಒಂದು ಗುಂಪಿನ ಆಟಗಾರರು ಚೆಂಡಿನ ಮೂಲಕ ಜೋಡಿಸಿಟ್ಟಿರುವ ಕಲ್ಲುಗಳನ್ನು ಬೀಳಿಸಬೇಕು. ಈ ವೇಳೆ ಮತ್ತೊಂದು ಗುಂಪಿನ ಸದಸ್ಯರು ಆ ಕಲ್ಲುಗಳನ್ನು ಪುನಃ ಒಂದರ ಮೆಲೊಂದನ್ನು ಜೋಡಿಸಬೇಕು.

ಆಲೋಚನಾ ಶಕ್ತಿಯನ್ನು ಹೆಚ್ಚಿಸುವ ಕ್ರೀಡೆ

ಹೀಗೆ ಜೋಡಿಸುವಾಗ ಮೊದಲಿನ ಗುಂಪಿನವರು ಚಂಡಿನಿಂದ ಎದುರಾಳಿಯ ಆಟಗಾರರಿಗೆ ಹೊಡೆಯುತ್ತಾರೆ, ಹೀಗೆ ಹೊಡೆಯುವ ಮೊದಲೇ ಎಲ್ಲಾ ಕಲ್ಲುಗಳನ್ನ ಜೋಡಿಸಿದಲ್ಲಿ ಆ ಗುಂಪಿಗೆ ಜಯ! ಈ ಆಟವು ಮಕ್ಕಳಿಗೆ ದೈಹಿಕ ವ್ಯಾಯಾಮ, ನಾಯಕತ್ವ ರೂಡಿ, ಗುರಿಗಾರಿಕೆ. ಪರಸ್ಪರ ಹೊಂದಾಣಿಕೆ, ಚಾಕಚಕ್ಯತೆ ಮತ್ತು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮಕ್ಕಳು ಮಾನಸಿಕವಾಗಿ ಹೆಚ್ಚು ಶಕ್ತಿಯುತವಾಗುತ್ತಾರೆ.

ಮೊಬೈಲ್, ಟಿವಿ, ಕಂಪ್ಯೂಟರ್‌ ಹಾಗೂ ವೀಡಿಯೂ ಗೇಮ್‌

ಇಂದು ನಾವು ಗ್ರಾಮೀಣ ಕ್ರೀಡೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ನಮ್ಮ ಮಕ್ಕಳಿಗೆ ಚಿತ್ರ ತೋರಿಸಬೇಕಾಗುತ್ತದೆ. ಇದನ್ನಾದರೂ ನಾವು ಒಪ್ಪಬಹುದು. ಆದರೆ, ಮೊಬೈಲ್, ಟಿವಿ, ಕಂಪ್ಯೂಟರ್‌ ಹಾಗೂ ವೀಡಿಯೂ ಗೇಮ್‌ಗಳಿಗೆ ಅಡಿಕ್ಟ್ ಆಗಿರುವ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸಲು ಸಾಧ್ಯವಾಗದಿದ್ದರೆ ಅವರ ಮುಂದಿನ ಜೀವನವನ್ನು ಊಹಿಸುವುದು ಸಹ ಕಷ್ಟವಾಗುತ್ತದೆ.

ಹೊರಾಂಗಣ ಮತ್ತು ಒಳಾಂಗಣ ಗ್ರಾಮೀಣ ಕ್ರೀಡೆ

ಹಾಗಾಗಿ, ನಿಮ್ಮ ಮಕ್ಕಳಿಗೆ ಹೊರಾಂಗಣ ಮತ್ತು ಒಳಾಂಗಣದಲ್ಲಿ ಆಡಬಹುದಾದ ಗ್ರಾಮೀಣ ಕ್ರೀಡೆಗಳ ಕುರಿತು ಹೆಚ್ಚೆಚ್ಚು ತಿಳಿಸಿಕೊಡಿ. ಮೊಬೈಲ್, ಟಿವಿ, ಕಂಪ್ಯೂಟರ್‌ ಹಾಗೂ ವೀಡಿಯೂ ಗೇಮ್‌ಗಳಿಗೆ ಅಡಿಕ್ಟ್ ಆಗಿರುವ ಮಕ್ಕಳನ್ನು ನಿಯಂತ್ರಿಸಲು ಗ್ರಾಮೀಣ ಕ್ರೀಡೆಗಳನ್ನು ಆಡಲು ಪ್ರೇರೇಪಿಸಿ. ಗ್ರಾಮೀಣ ಕ್ರೀಡೆಗಳ ಆಹ್ಲಾದಕರ ಅನುಭವ ನಿಮಗೆ ಮಾತ್ರ ದೊರೆತರಷ್ಟೇ ಸಾಕೆ?, ದಯವಿಟ್ಟು ನಿಮ್ಮ ಮಕ್ಕಳಿಗೂ ಸ್ವಲ್ಪ ಧಾರೆ ಎರೆಯಿರಿ.!

Story first published: Friday, August 18, 2023, 14:40 [IST]
Other articles published on Aug 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+