Rohit Sharma: ರೋಹಿತ್ ಬದಲು ಗಿಲ್ ಕ್ಯಾಪ್ಟನ್ ಏಕೆ? ಏನಿದು ಪ್ಲ್ಯಾನ್? ಇಲ್ಲಿದೆ ಕಾರಣ
ಟೀಮ್ ಇಂಡಿಯಾದ ಸ್ಟಾರ್ ನಾಯಕರ ಪಟ್ಟಿಯಲ್ಲಿ ಸ್ಥಾಣ ಪಡೆಯುವ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಹೇಳದೇ ಕೆಳದೇ ನಾಯಕತ್ವದಿಂದ ಕೆಳಗೆ ಇಳಿಸಿದೆ. ಈಗಾಗಲೇ ಇವರು ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಬರೀ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಆದರೆ ಇನ್ನು ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪರ ನಾಯಕರಾಗಿ ಕಣಕ್ಕೆ ಇಳಿಯುತ್ತಿಲ್ಲ ಬದಲಿಗೆ ಒಬ್ಬ ಆಟಗಾರನಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಏಕೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಲಾಗಿದೆ. ಈ ವೇಳೆ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಒಬ್ಬ ನುರಿತ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಆಡಲಿದ್ದಾರೆ. ಆದರೆ ಬಿಸಿಸಿಐ ಹಠಾತನೆ ಈ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎಂಬ ಪ್ರಶ್ನೆ ಮೂಡುತ್ತದೆ.

ರೋಹಿತ್ ಶರ್ಮಾ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ವಿಶ್ವಾಸವನ್ನು ಹೊಂದಿದ್ದಾರೆ. ಇದಕ್ಕಾಗಿ ಇವರು ತಮ್ಮ ದೇಹದ ತೂಕವನ್ನು ಸಹ ಕಡಿಮೆ ಮಾಡಿಕೊಂಡಿದ್ದು ತಂಡದ ಪರ ಅಬ್ಬರಿಸಲು ಪ್ಲ್ಯಾನ್ ಮಾಡಿದ್ದಾರೆ. ಇವರು ಮುಂದಿನ ವಿಶ್ವಕಪ್ ವರೆಗೂ ತಂಡದ ಭಾಗವಾಗಿರುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಹೀಗಾಗಿ ನಾಯಕನಿಗೆ ಸಾಕಷ್ಟು ಸಮಯವನ್ನು ನೀಡುವ ಉದ್ದೇಶದಿಂದ ಬಿಸಿಸಿಐ ಈ ಹೊಸ ಪ್ಲ್ಯಾನ್ ಮಾಡಿಕೊಂಡಿದೆ.
ಅನುಭವದ ಕೊರತೆ ತಪ್ಪಿಸಲು ಪ್ಲ್ಯಾನ್
ಒಂದು ವೇಳೆ ರೋಹಿತ್ ಏಕದಿನ ವಿಶ್ವಕಪ್ 2027ರಲ್ಲಿ ಆಡುವಲ್ಲಿ ವಿಫಲವಾದರೆ, ತಂಡಕ್ಕೆ ಅನುಭವಿ ನಾಯಕನ ಕೊರತೆ ಎದ್ದು ಕಾಣುತ್ತದೆ. ಇದನ್ನು ತಪ್ಪಿಸಲು ಬಿಸಿಸಿಐ ಮಾಸ್ಟರ್ ಸ್ಟ್ರೋಕ್ ಸಿದ್ದ ಪಡಿಸಿದೆ. ಶುಭಮನ್ ಗಿಲ್ ಅವರನ್ನು ಹೊಸ ಏಕದಿನ ನಾಯಕರನ್ನಾಗಿ ನೇಮಿಸಿ, ಅವರಿಗೆ ತಮ್ಮ ಜವಾಬ್ದಾರಿ ಅರಿಯಲು ಬಿಸಿಸಿಐ ಟೈಮ್ ನೀಡಲಿದೆ.

ರೋಹಿತ್ ಶರ್ಮಾ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಏಕದಿನ ಫಾರ್ಮೆಟ್‌ನಲ್ಲಿ ಇನ್ನು ಇವರು ಒಬ್ಬರ ನುರಿತ ಬ್ಯಾಟರ್ ರೀತಿ ಆಡಲಿದ್ದಾರೆ. ಇವರ ಬ್ಯಾಟಿಂಗ್‌ನ ಸಂಪೂರ್ಣ ಲಾಭವನ್ನು ಪಡೆಯಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications