Stuart Binny: ಟೀಮ್ ಇಂಡಿಯಾದ ಅತ್ಯಂತ ದುರದೃಷ್ಟಕರ ಕ್ರಿಕೆಟಿಗ; ಒಂದೇ ಓವರ್‌ನಲ್ಲಿ ಎಲ್ಲವೂ ಬದಲಾಯಿತು!
ಆಗಸ್ಟ್ 18 ಭಾನುವಾರ, ಟೀಮ್ ಇಂಡಿಯಾದಲ್ಲಿ ಮಿಂಚಿ ಮರೆಯಾದ ಕ್ರಿಕೆಟಿಗರ ಸಂಖ್ಯೆ ದೊಡ್ಡದಿದೆ. ತಮಗೆ ಸಿಕ್ಕ ಕಡಿಮೆ ಅವಕಾಶಗಳಲ್ಲಿ ಸಾಮರ್ಥ್ಯ ತೋರಿದರೂ, ಒಂದೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ದೂರ ಉಳಿದಿದ್ದಾರೆ. ಉತ್ತಮ ಪ್ರದರ್ಶನದ ನಡುವೆಯೂ ಮತ್ತೊಂದಷ್ಟು ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸಿಲುಕಿ ಭಾರತ ತಂಡದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಮೈದಾನದಿಂದ ಹೊರಗುಳಿದಿದ್ದಾರೆ. ಅವರ ವೃತ್ತಿಜೀವನವು ಒಂದು ಕೆಟ್ಟ ಓವರ್‌ನಿಂದ ಕೊನೆಗೊಂಡಿದೆ. ಈ ಒಂದು ಓವರ್ ನಂತರ ಸ್ಟುವರ್ಟ್ ಬಿನ್ನಿ ಟೀಮ್ ಇಂಡಿಯಾ ಪರ ಯಾವುದೇ ಮಾದರಿ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಅಷ್ಟಕ್ಕೂ ಆ ಒಂದು ಓವರ್ ಏನಾಯಿತು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ vs ವೆಸ್ಟ್ ಇಂಡೀಸ್
27 ಆಗಸ್ಟ್ 2016ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡವೆ ಟಿ20 ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ ಕೂಡ ಪ್ಲೇಯಿಂಗ್-11 ರಲ್ಲಿ ಅವಕಾಶ ಪಡೆದಿದ್ದರು. ಆದರೆ ಹೇಳಿಕೊಳ್ಳವಂತ ಪ್ರದರ್ಶನ ಅವರಿಂದ ಬರಲಿಲ್ಲ.
ವಿಂಡೀಸ್ ಸ್ಪೋಟಕ ಬ್ಯಾಟರ್ ಎವಿನ್ ಲೂಯಿಸ್ ಅವರು ಬಿನ್ನಿ ಬೌಲಿಂಗ್‌ನಲ್ಲಿ ಸತತ 5 ಸಿಕ್ಸರ್ ಬಾರಿಸಿದ್ದರು. ಆದರೆ, ಕೊನೆಯ ಎಸೆತದಲ್ಲಿ ಲೂಯಿಸ್ ಅವರಿಂದ ಸಿಕ್ಸರ್ ಹೊಡೆಯಲು ಸಾಧ್ಯವಾಗಲಿಲ್ಲ. ಬಿನ್ನಿ ಆ ಓವರ್‌ನಲ್ಲಿ 5 ಸಿಕ್ಸರ್, ಒಂದು ವೈಡ್ ಮತ್ತು ಸಿಂಗಲ್ ಸೇರಿಂದತೆ 32 ರನ್ ನೀಡಿದರು.
ಈ ಟಿ20 ಸ್ಟುವರ್ಟ್ ಬಿನ್ನಿ ವೃತ್ತಿಜೀವನದ ಕೊನೆಯ ಪಂದ್ಯವಾಗಿತ್ತು . ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಆಗಮನದೊಂದಿಗೆ ಸ್ಟುವರ್ಟ್ ಬಿನ್ನಿ ಟೀಮ್ ಇಂಡಿಯಾದಿಂದ ಶಾಶ್ವತವಾಗಿ ಹೊರಬಿದ್ದರು. 2021ರಲ್ಲಿ ಸ್ಟುವರ್ಟ್ ಬಿನ್ನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಏಕದಿನ ಬೌಲಿಂಗ್ ದಾಖಲೆ
ಕೆಲವು ಸಂದರ್ಭಗಳಲ್ಲಿ ಟೀಮ್ ಇಂಡಿಯಾ ಪರ ಸ್ಟುವರ್ಟ್ ಬಿನ್ನಿ ಅದ್ಭುತ ಪ್ರದರ್ಶನ ನೀಡಿದ್ದರು. ಜೂನ್ 17, 2014 ರಂದು, ಬಾಂಗ್ಲಾದೇಶ ವಿರುದ್ಧ ಮೀರ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ, ಸ್ಟುವರ್ಟ್ ಬಿನ್ನಿ ಕೇವಲ ನಾಲ್ಕು ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಈವರೆಗಿನ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಸ್ಟುವರ್ಟ್ ಬಿನ್ನಿ ನಂತರ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 2ನೇ ಸ್ಥಾನದಲ್ಲಿದ್ದಾರೆ. 1993ರಲ್ಲಿ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಕುಂಬ್ಳೆ 12 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications