ಭಾರತ ವಿರುದ್ಧ ಆಸ್ಟ್ರೇಲಿಯಾ ತಂಡ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು 3-1 ಅಂತರದಲ್ಲಿ ಗೆದ್ದಿದೆ. ಗೆಲುವಿನ ನಂತರ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಗೆ ಟ್ರೋಫಿಯನ್ನು ನೀಡಲು ಅಲನ್ ಬಾರ್ಡರ್ ಅವರನ್ನು ಮಾತ್ರ ಕರೆಯಲಾಗಿದೆ. ಇದರ ಬಗ್ಗೆ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆ ನೀಡಿದ್ದು, ಟ್ರೋಫಿ ನೀಡಲು ಗವಾಸ್ಕರ್ ಅವರನ್ನು ಏಕೆ ಕರೆಯಲಿಲ್ಲ ಎಂದು ವಿವರಿಸಿದೆ.
ಸಿಡ್ನಿ ಟೆಸ್ಟ್ ಪಂದ್ಯದ ನಂತರ, ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಟ್ರೋಫಿಯನ್ನು ನೀಡಲು ಅಲನ್ ಬಾರ್ಡರ್ ಅವರನ್ನು ಮಾತ್ರ ಕರೆಯಲಾಯಿತು. ಇದರಿಂದಾಗಿ ಗವಾಸ್ಕರ್ ಬೇಸರಗೊಂಡಿದ್ದರು. ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಹೋಗಿದ್ದರೆ ಖುಷಿಯಾಗುತ್ತಿತ್ತು ಎಂದು ಗವಾಸ್ಕರ್ ಹೇಳಿದ್ದರು. ಇದಾದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ನೀಡಲು ಸುನಿಲ್ ಗವಾಸ್ಕರ್ ಅವರನ್ನು ಆಹ್ವಾನಿಸದಿರುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮೌನ ಮುರಿದಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಅಲನ್ ಬಾರ್ಡರ್ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಇಡಲಾಗಿದೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಉಭಯ ತಂಡಗಳ ನಡುವೆ ನಡೆಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾರ್ಡರ್ ಜತೆಗೆ ಗವಾಸ್ಕರ್ ಕೂಡ ಪ್ರಶಸ್ತಿ ಪ್ರಧಾನ ವೇದಿಕೆಯಲ್ಲಿ ಇಲ್ಲದಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ವರದಿಗಳ ಪ್ರಕಾರ, ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ಸುನಿಲ್ ಗವಾಸ್ಕರ್ ಅವರು ಭಾರತ ತಂಡಕ್ಕೆ ಟ್ರೋಫಿ ಹಸ್ತಾಂತರಿಸುತ್ತಿದ್ದರು. ಭಾರತ ಗೆದ್ದಿದ್ದರೆ ಸರಣಿ ಡ್ರಾ ಆಗುತ್ತಿತ್ತು. ಹಾಗಾಗಿ ಟ್ರೋಫಿ ಭಾರತದ ಬಳಿಯೇ ಉಳಿಯುತ್ತಿತ್ತು. ಆದರೆ ಆಸ್ಟ್ರೇಲಿಯಾ 10 ವರ್ಷಗಳ ನಂತರ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಟ್ರೋಫಿಯನ್ನು ನೀಡಲು ಅಲನ್ ಬಾರ್ಡರ್ ಅವರನ್ನು ಕರೆಯಲಾಗಿದೆ. ಈ ಯೋಜನೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮೊದಲೇ ಮಾಡಿಕೊಂಡಿತ್ತು ಎನ್ನಲಾಗುತ್ತಿದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ಈ ಯೋಜನೆ ಬಹುಶಃ ಗವಾಸ್ಕರ್‌ಗೆ ತಿಳಿದಿರಲಿಲ್ಲ ಅನಿಸುತ್ತದೆ. ಹೀಗಾಗಿ ಈ ಘಟನೆ ಸಂಭವಿಸಿದೆ.
ನಾನು ಮೈದಾನದಲ್ಲಿಯೇ ಇದ್ದೆ. ಆಸ್ಟ್ರೇಲಿಯಾಕ್ಕೆ ಟ್ರೋಫಿ ಕೊಟ್ಟಿದ್ದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಉತ್ತಮ ಕ್ರಿಕೆಟ್ ಆಡಿ ಗೆದ್ದರು. 'ನಾನು ಭಾರತೀಯನಾಗಿರುವುದರಿಂದ. ನನ್ನ ಸ್ನೇಹಿತ ಅಲನ್ ಬಾರ್ಡರ್ ಅವರೊಂದಿಗೆ ಟ್ರೋಫಿಯನ್ನು ನೀಡಲ ನಾನು ಸಂತೋಷಪಡುತ್ತೇನೆ. ಆದರೆ ನನ್ನನ್ನು ಕರೆದಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 1996-97 ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡುತ್ತಿವೆ. ಈ ಬಾರಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ವೀಕ್ಷಕರ ದಾಖಲೆಯನ್ನು ಮುರಿದಿದೆ. ಸಿಡ್ನಿ ಟೆಸ್ಟ್‌ನ ಸೋಲಿನೊಂದಿಗೆ ಭಾರತ ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ರೇಸ್‌ನಿಂದ ಹೊರಗುಳಿದದೆ. ಈ ಬಾರಿಯ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.