Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಯೋ ಯೋ' ಪರೀಕ್ಷೆಯಲ್ಲಿ ಫೇಲಾದ ಯುವಿ, ರೈನಾ

ಬೆಂಗಳೂರು, ಆಗಸ್ಟ್ 17: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಯುವರಾಜ್ ಸಿಂಗ್‌ ಹಾಗೂ ಸುರೇಶ್ ರೈನಾ ಏಕೆ ಆಯ್ಕೆ ಮಾಡಲಿಲ್ಲ? ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಇದಕ್ಕೆ ಫಿಟ್ನೆಸ್ ಕಾರಣ ಎಂಬ ಉತ್ತರವೂ ಈಗಾಗಲೇ ಸಿಕ್ಕಿದೆ. ಇಬ್ಬರನ್ನು ತಂಡದಿಂದ ಹೊರಗುಳಿಯುವಂತೆ ಮಾಡಿದ 'ಯೋ ಯೋ' ಟೆಸ್ಟ್ ಹೇಗೆ ಮಾಡಲಾಗುತ್ತದೆ ಎಂಬುದಾ ಪ್ರಾತ್ಯಕ್ಷಿಕೆ ವಿಡಿಯೋ ಇಲ್ಲಿದೆ.

ಈ ಇಬ್ಬರು ಆಟಗಾರರು ಆಯ್ಕೆಯಾಗದಿರುವುದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಕಾರಣ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

Revealed! Why Yuvraj Singh and Suresh Raina failed to book a ticket to Sri Lanka

ಆದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಸಲಾದ ಯೋ ಯೋ ಟೆಸ್ಟ್ ನಲ್ಲಿ ಫೇಲಾದ ಕಾರಣ ಇಬ್ಬರೂ ಆಯ್ಕೆಯಾಗಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ರಗ್ಬಿ ಆಟಗಾರರ ದೈಹಿಕ ಸಾಮರ್ಥ್ಯ ಅಳೆದು ತಂಡಕ್ಕೆ ಆಯ್ಕೆ ಮಾಡಲು ಮೊದಲಿಗೆ ಬಳಸಲಾದ 'ಯೋ ಯೋ ' ಟೆಸ್ಟ್ ಈಗ ಎಲ್ಲಾ ಕ್ರೀಡೆಗಳಲ್ಲೂ ಜನಪ್ರಿಯತೆ ಗಳಿಸುತ್ತಿದೆ. ನೋಡಲು ತುಂಬಾ ಸುಲಭದ ಪರೀಕ್ಷೆ ಎನಿಸಿದರೂ, ಉಸಿರಾಟದ ಮೇಲಿನ ನಿಯಂತ್ರಣ, ದೈಹಿಕ ಸಾಮರ್ಥ್ಯದ ಬಗ್ಗೆ ಖಚಿತ ಮಾಹಿತಿ ನೀಡುತ್ತದೆ. ವಿಡಿಯೋ ನೋಡಿ


ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ 21 ಅಂಕ ಗಳಿಸಬೇಕು. ಯುವಿ, ರೈನಾ 16 ಅಂಕ ಗಳಿಸಲು ಶಕ್ತರಾಗಿದ್ದರಷ್ಟೇ. ಅಶ್ವಿನ್, ಜಡೇಜಾ, ಮನೀಶ್ ಪಾಂಡೆ ಹಾಗೂ ನಾಯಕ ಕೊಹ್ಲಿ 21 ಅಂಕ ಗಳಿಸಿದ್ದರು. ಉಳಿದ ಆಟಗಾರರು 19.5 ಅಂಕ ಗಳಿಸಿದ್ದರು. ಹೀಗಾಗಿ ಇವರಿಬ್ಬರಿಗೂ ತಂಡದಿಂದ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+