For Quick Alerts
ALLOW NOTIFICATIONS  
For Daily Alerts
 

Ind vs WI: 2ನೇ ಟೆಸ್ಟ್ ಪಂದ್ಯದಲ್ಲಿ ಈತನಿಗೆ ಅವಕಾಶ ನೀಡಬೇಕು ಎಂದ ಆಕಾಶ್ ಚೋಪ್ರ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ಇಂದು ಆರಂಭವಾಗುತ್ತಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಟೀಮ್ ಇಂಡಿಯಾ ಪರವಾಗಿ ಈ ಪಂದ್ಯದಲ್ಲಿ ಓರ್ವ ಯುವ ಆಟಗಾರನಿಗೆ ಅವಕಾಶ ನೀಡಲೇಬೇಕು ಎಂದಿದ್ದಾರೆ. ಅದು ಬೇರೆ ಯಾರಿಗೂ ಅಲ್ಲ ಆಲ್‌ರೌಂಡರ್ ಅಕ್ಷರ್ ಪಟೇಲ್.

ಡೊಮಿನಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾರ ಭರ್ಜರಿ ಶತಕ ಹಾಗೂ ಬೌಲಿಂಗ್‌ನಲ್ಲಿ ಆರ್ ಅಶ್ವಿನ್ ಅವರ 12 ವಿಕೆಟ್‌ಗಳ ಗೊಂಚಲಿನ ನೆರವಿನಿಂದ ಭಾರತ ಇನ್ನಿಂಗ್ಸ್ ಹಾಗೂ 141 ರನ್‌ಗಳ ಅಂತರದ ಗೆಲುವು ಸಾಧಿಸಿತು. ಹೀಗಾಗಿ ಕೊನೆಯ ಪಂದ್ಯದಲ್ಲಿ ಭಾರತ ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ ಆಕಾಶ್ ಚೋಪ್ರ.

WI vs IND: Aakash Chopra expectes Axar Patel to get a chance in playing XI in 2nd Test

"ಡೊಮೆನಿಕಾದಲ್ಲಿ ರೀತಿಯಲ್ಲಿಯೇ ಪಿಚ್ ಇದ್ದರೆ ಓರ್ವ ವೇಗಿಗೆ ವಿಶ್ರಾಂತಿ ನೀಡಿ ಅಕ್ಷರ್ ಪಟೇಲ್‌ಗೆ ಅವಕಾಶ ನೀಡಬೇಕು ಎಂದು ನಾನು ಬಯಸುತ್ತೇನೆ" ಎಂದು ಆಕಾಶ್ ಚೋಪ್ರ ಹೇಳಿಕೆ ನೀಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅವರು ಎರಡನೇ ಟೆಸ್ಟ್ ಪಂದ್ಯ ನಡೆಯಲಿರುವ ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಹೆಚ್ಚು ಹುಲ್ಲಿನಿಂದ ಕೂಡ ಪಿಚ್ ಹೊಂದಿದ್ದು ಅಲ್ಲಿ ಆಡುವ ಬಳಗದಲ್ಲಿ ಯಾವುದೇ ಬದಲಾವನೆ ಮಾಡುವ ಸಾಧ್ಯತೆಯಿಲ್ಲ ಎಂದು ಕೂಡ ಹೇಳಿಕೆ ನೀಡಿದ್ದಾರೆ.

ಪಿಚ್ ರಿಪೋರ್ಟ್: ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿರುವ ಈ ಪಂದ್ಯ ಕೆರಿಬಿಯನ್‌ನ ಟೆಸ್ಟ್ ಪಿಚ್‌ಗಳ ಗುಣಗಳನ್ನು ಹೊಂದಿದ್ದು ವೇಗದ ಬೌಲಿಂಗ್‌ಗೆ ನೆರವು ನೀಡುವ ನಿರೀಕ್ಷೆಯಿದೆ. ಬೌಲರ್‌ಗಳಿಗೆ ನೆರವು ನೀಡಿದರೂ ಮೊದ ಎರಡು ಇನ್ನಿಂಗ್ಸ್‌ನಲ್ಲಿ ಬ್ಯಾಟರ್‌ಗಳಿಗೆ ರನ್‌ಗಳಿಸಲು ಕೂಡ ಉತ್ತಮ ನೆರವು ದೊರೆಯಲಿದೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಇಲ್ಲಿ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಮೊದಲ ಪಂದ್ಯದಲ್ಲಿ ಮೊದಲ ದಿನದಿಂದಲೇ ಹೆಚ್ಚು ತಿರುವು ಪಡೆಯುವ ಮೂಲಕ ಸ್ಪಿನ್ನರ್‌ಗಳಿಗೆ ನೆರವು ನೀಡಿದ್ದರೆ ಈ ಪಂದ್ಯ ಅದಕ್ಕೆ ತದ್ವಿರುದ್ದವಾಗಿರಲಿದ್ದು ವೇಗಿಗಳಿಗೆ ನೆರವು ನೀಡುವ ನಿರೀಕ್ಷೆಯಿದೆ.

ಹವಾಮಾನ ವರದಿ: ಇನ್ನು ಈ ಪಂದ್ಯದ ಆರಂಭದ ದಿನದಿಂದಲೂ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಹೀಗಾಗಿ ಮಳೆ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ 30-34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ.

ಟೀಮ್ ಇಂಡಿಯಾ ಸಂಭಾವ್ಯ XI: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್

ವೆಸ್ಟ್ ಇಂಡೀಸ್ ಸಂಭಾವ್ಯ XI: ಕ್ರೈಗ್ ಬ್ರಾಥ್‌ವೈಟ್(ನಾಯಕ), ಜೆರ್ಮೈನ್ ಬ್ಲಾಕ್‌ವುಡ್, ಟಿ ಚಂದ್ರಪಾಲ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ರೇಮನ್ ರೀಫರ್,
ಜೆ ಡಾ ಸಿಲ್ವಾ(ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಜಿ ಮೋತಿ-ಕನ್ಹೈ, ಕೆಮರ್ ರೋಚ್

Story first published: Thursday, July 20, 2023, 18:14 [IST]
Other articles published on Jul 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+