ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ಟೀಮ್ ಇಂಡಿಯಾದ ಯುವ ಆರಂಭಿಕ ಜೋಡಿ ವಿಫಲವಾಗಿದೆ. ಶುಬ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಆರಂಭಿಕರಾಗಿ ಈ ಸರಣಿಯಲ್ಲಿ ಜವಾಬ್ಧಾರಿ ವಹಿಸಿಕೊಂಡಾಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳು ಮೂಡಿದ್ದವು. ಆದರೆ ಎರಡು ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡುವ ಮೂಲಕ ಆ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಾರೆ ಈ ಜೋಡಿ. ಹೀಗಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.
ಇದೀಗ ಟೀಮ್ ಇಂಡಿಯಾದ ಈ ಯುವ ಜೋಡಿ ಎಲ್ಲಿ ಎಡವುತ್ತಿದೆ ಎಂಬುದರ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ. ಟೀಮ್ ಇಂಡಿಯಾದ ಇಬ್ಬರು ಆಟಗಾರರು ಕೂಡ ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗದಿರುವುದು ಈ ವೈಫಲ್ಯಕ್ಕೆ ಕಾರಣ ಎಂದಿದ್ದಾರೆ ಆಕಾಶ್ ಚೋಪ್ರ.

ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಉತ್ತಮವಾದ ಆರಂಭವನ್ನು ಪಡೆಯಲಿಲ್ಲ ಎಂಬುದನ್ನು ಆಕಾಶ್ ಚೋಪ್ರ ಉಲ್ಲೇಖಿಸಿದ್ದಾರೆ. ಆದರೆ ವೆಸ್ಟ್ ಇಂಡೀಸ್ ತಂಡ ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆಹೋಗಿತ್ತು. ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಸೋಲು ಅನುಭವಿಸಿದ್ದು ಐದು ಪಂದ್ಯಗಳ ಸರಣಿಯಲ್ಲಿ ಭಾರತ 0-2 ಅಂತರದ ಹಿನ್ನಡೆಯಲ್ಲಿದೆ.
"ಮೊದಲ ಆರು ಓವರ್‌ಗಳ ಲಾಭವನ್ನು ಪಡೆಯುವುದು ಬಹಳ ಮುಖ್ಯ. ಆದರೆ ಅದು ಸಾಧ್ಯವಾಗಬೇಕಾದರೆ ವಿಕೆಟ್‌ಗಳು ಕೈಯಲ್ಲಿ ಇರುವುದು ಬಹಳ ಮುಖ್ಯ. ಭಾರತ ವಿಕೆಟನ್ನು ಬೇಗನೆ ಕಳೆದುಕೊಂಡಿದ್ದಕ್ಕೆ ಹಿನ್ನಡೆಯಾಯಿತು ಎಂದು ಅರ್ಥವಲ್ಲ. ಅವರು ಮೊದಲ ಎರಡು ಓವರ್‌ಗಳನ್ನು ಬಹಳ ಎಚ್ಚರಿಯಕೆಯಿಂದ ಆಡಿದ್ದರು" ಎಂದು ಆಕಾಶ್ ಚೋಪ್ರ ಹೇಳಿಕೆ ನೀಡಿದ್ದಾರೆ.
"ಆದರೆ ನೀವು ಪವರ್‌ಪ್ಲೇಯನ್ನು ಎರಡು ಭಾಗವಾಗಿ ವಿಂಗಡಿಸಿದರೆ ದ್ವಿತಿಯಾರ್ಧದಲ್ಲಿ ವೇಗವನ್ನು ಹೆಚ್ಚುಗೊಳಿಸಬೇಕಾಗುತ್ತದೆ. ಓವರ್‌ಗೆ 10 ರನ್‌ನಂತೆ ಗಳಿಸಿದರೆ ತಂಡ 50-1 ರನ್‌ಗಳನ್ನು ಗಳಿಸಿರುತ್ತದೆ. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದ್ದು 36-37 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿರುತ್ತದೆ. ಹಾಗಾಗಿ ಎರಡು ರೀತಿಯಲ್ಲಿಯೂ ಸಮಸ್ಯೆಗಳಿದೆ. ಈಗ ಶುಬ್ಮನ್ ಹಾಗೂ ಇಶಾನ್ ಎರಡು ಪಂದ್ಯಗಳನ್ನು ಆಡಿದ್ದಾರೆ. ಈಗ ಅವರು ತಮ್ಮ ಆಕ್ರಮಣಕಾರಿ ಮಣೋಭಾವ ಪ್ರದರ್ಶಿಸಬೇಕಿದೆ. ಆದರೆ ಈ ಸಂದರ್ಭದಲ್ಲಿ ಅವರು ಉಆವ ಬೌಲರ್‌ನನ್ನು ಗುರಿಯಾಗಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಎಚ್ಚರಿಕೆ ವಹಿಸಿಕೊಳ್ಳಬೇಕು" ಎಂದಿದ್ದಾರೆ ಆಕಾಶ್ ಚೋಪ್ರ.
ಮೊದಲ ಎರಡು ಪಂದ್ಯಗಳಲ್ಲಿಯೂ ಆರಂಭಿಕರಾಗಿ ಶುಬ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಗಮನಸೆಳೆಯುವಲ್ಲಿ ವಿಫಲವಾಗಿದ್ದಾರೆ. ಏಕದಿನ ಮಾದರಿಯಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನಿಡಿದ ಕಾರಣ ಯಶಸ್ವಿ ಜೈಸ್ವಾಲ್ ಬದಲಿಗೆ ಟಿ20 ಸರಣಿಯಲ್ಲಿ ಗಿಲ್ ಹಾಗೂ ಇಶಾನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಗಿಲ್ ಎರಡು ಟಿ20 ಪಂದ್ಯಗಳಲ್ಲಿ ಕೇವಲ 9 ರನ್‌ಗಳನ್ನು ಮಾತ್ರವೇ ಗಳಿಸಿದರೆ ಇಶಾನ್ ಕಿಶನ್ ಎರಡನೇ ಪಂದ್ಯದಲ್ಲಿ 27 ರನ್‌ಗಳಿಸಿದರು. ಆದರೆ ಈ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಅವರು ವಿಫಲವಾದರು.
ವೆಸ್ಟ್ ಇಂಡೀಸ್ ತಂಡ: ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್ (ನಾಯಕ), ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ಶಿಮ್ರಾನ್ ಹೆಟ್ಮೆಯರ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್, ಓಡಿಯನ್ ಸ್ಮಿತ್, ಶಾಯ್ ಹೋಪ್, ಒಶೇನ್ ಥಾಮಸ್, ರೋಸ್ಟನ್ ಚೇಸ್
ಭಾರತ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಉಮ್ರಾನ್ ಮಲಿಕ್, ಅವೇಶ್ ಖಾನ್