Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯಾವ ಕ್ಷಣದಲ್ಲೂ ಆತ ಆತಂಕಗೊಳ್ಳಲೇ ಇಲ್ಲ: ಯಶಸ್ವಿ ಆಟಕ್ಕೆ ನಾಯಕನಿಂದ ಫುಲ್‌ಮಾರ್ಕ್ಸ್‌

ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಯಶಸ್ವಿ ಜೈಸ್ವಾಲ್ ತಮ್ಮ ಫಾರ್ಮ್‌ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಮುಂದುವರಿಸಿದ್ದು ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಮೊದಲ ಪಂದ್ಯದಲ್ಲಿಯೇ ಯಶಸ್ವಿ 171 ರನ್‌ಗಳನ್ನು ಗಳಿಸುವ ಮೂಲಕ ಕ್ರಿಕೆಟ್ ಲೋಕದ ಗಮನಸೆಳೆದಿದ್ದಾರೆ. ಈ ಯುವ ಆಟಗಾರನ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ನೆಲದಲ್ಲಿ ಪದಾರ್ಪಣೆ ಮಾಡಿ ಈ ಬೃಹತ್ ಶತಕ ಸಿಡಿಸುವ ಮೂಲಕ ವಿದೇಶಿ ನೆಲದಲ್ಲಿ ಪದಾರ್ಪಣಾ ಪಂದ್ಯದಲ್ಲಿ 150ಕ್ಕೂ ಅಧಿಕ ರನ್ ಪೇರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಜೊತೆಗೆ 229 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ಜೈಸ್ವಾಲ್ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆಲ್ಲುವ ಪ್ರದರ್ಶನ ನೀಡಿದ್ದಾರೆ.

WI vs IND: Rohit Sharma praises Yashasvi Jaiswal said he wasnt panicking at any stage

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಸಂತಸ ಹಂಚಿಕೊಂಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಪ್ರದರ್ಶನವನ್ನು ಹೊಗಳಿದ ನಾಯಕ ಯುವ ಆಟಗಾರನ ಆಟಕ್ಕೆ ವಿಶೇಷ ಮೆಚ್ಚಿಗೆ ಸೂಚಿಸಿದ್ದಾರೆ. "ದೇಶಕ್ಕಾಗಿ ಬಾರಿಸುವ ಪ್ರತಿ ರನ್ ಕೂಡ ಒಲ್ಲಿ ಬಹಳ ಮುಖ್ಯವಾಗುತ್ತದೆ. ಬೌಲಿಂಗ್‌ನಲ್ಲಿ ನಮ್ಮ ಪ್ರದರ್ಶನ ಅತ್ಯುದ್ಭುತವಾಗಿತ್ತು ಎಂದು ಹೇಳಲು ನಾನು ಬಯಸುತ್ತೇನೆ. 150ರ ಮೊತ್ತಕ್ಕೆ ಅವರನ್ನು ಕಟ್ಟಿ ಹಾಕಿದ್ದು ನಾವು ಮೊದಲ ಯಶಸ್ಸು ಪಡೆಯಲು ಸಾಧ್ಯವಾಯಿತು"

"ಇಲ್ಲಿ ಬ್ಯಾಟಿಂಗ್ ಕಠಿಣ ಎಂಬುದು ತಿಳಿದಿತ್ತು, ರನ್ ಗಳಿಸುವುದು ಸುಲಭವಾಗಿರಲಿಲ್ಲ. ಇಲ್ಲಿ ನಾವು ಒಂದೇ ಬಾರಿ ಬ್ಯಾಟಿಂಗ್ ನಡೆಸಬೇಕು ಎಂದು ನಿರ್ಧರಿಸಿದ್ದು ಸುದೀರ್ಘ ಇನ್ನಿಂಗ್ಸ್ ಆಡುವ ನಿರ್ಧಾರ ಮಾಡಿದ್ದೆವು. 400ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ ನಂತರ ಬೌಲಿಂಗ್‌ನಲ್ಲಿಯೂ ಉತ್ತಮವಾದ ಪ್ರದರ್ಶನ ನೀಡಿದ್ದೇವೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.

ಈ ಸಂದರ್ಭದಲಿ ನಾಯಕ ರೋಹಿತ್ ಶರ್ಮಾ ಯುವ ಆಟಗಾರ ಜೈಸ್ವಾಲ್ ಪ್ರದರ್ಶನವನ್ನು ಹೊಗಳಿದ್ದಾರೆ. ಚೊಚ್ಚಲ ಪಂದ್ಯದಲ್ಲಿ ಯಶಸ್ವಿ ಸಂವೇದನಾಶೀಲವಾಗಿ ಬ್ಯಾಟ್ ಮಾಡಿದ್ದು ಆತನ ತಾಳ್ಮೆ, ಮನೋಬಲ ಪರೀಕ್ಷೆಗೆ ಒಳಗಾದಾಗೆಲ್ಲಾ ಆತ ಆತಂಕಕ್ಕೆ ಒಳಗಾಗದೆ ದಿಟ್ಟವಾಗಿ ಎದುರಿಸಿದ ಎಂದ ರೋಹಿತ್ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಅವಕಾಶ ದೊರೆತ ಈ ಸಂದರ್ಭವನ್ನು ಆನಂದಿಸಲು ಹೇಳುತ್ತಿದ್ದೆ ಎಂಬುದಾಗಿ ತಿಳಿಸಿದ್ದಾರೆ.

"ಆತನಲ್ಲಿ ಪ್ರತಿಭೆಯಿದೆ. ಆತ ತಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಸಿದ್ಧ ಎಂಬುದನ್ನು ಈಗಾಗಲೇ ತಿಳಿಸಿದ್ದ. ಇಲ್ಲಿ ಬಂದು ಬಹಳ ಜವಾಬ್ಧಾರಿಯುತವಾದ ಪ್ರದರ್ಶನ ನೀಡಿದ್ದಾರೆ. ಅಂಗಳದಲ್ಲಿ ಸಾಕಷ್ಟು ಅಗ್ನಿಪರೀಕ್ಷೆಗಳು ಎದುರಾದರು ಕೂಡ ಎಲ್ಲೂ ಆತ ಆತಂಕಕ್ಕೆ ಒಳಗಾಗಲಿಲ್ಲ" ಎಂದು ನಾಯಕ ರೋಹಿತ್ ಶರ್ಮಾ ಜೈಸ್ವಾಲ್ ಬ್ಯಾಟಿಂಗ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ರೇಮನ್ ರೈಫರ್, ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕನ್

ಬೆಂಚ್: ಕಿರ್ಕ್ ಮೆಕೆಂಜಿ, ಶಾನನ್ ಗೇಬ್ರಿಯಲ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್
ಬೆಂಚ್: ಋತುರಾಜ್ ಗಾಯಕ್ವಾಡ್, ಶ್ರೀಕರ್ ಭರತ್, ಅಕ್ಷರ್ ಪಟೇಲ್, ನವದೀಪ್ ಸೈನಿ, ಮುಖೇಶ್ ಕುಮಾರ್

Story first published: Saturday, July 15, 2023, 14:47 [IST]
Other articles published on Jul 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+