For Quick Alerts
ALLOW NOTIFICATIONS  
For Daily Alerts
 

ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲೇ ಶತಕ: ಯಶಸ್ವಿ ಜೈಸ್ವಾಲ್ ಮುರಿದ ದಾಖಲೆಗಳು ಎಷ್ಟು ಗೊತ್ತಾ!

ವೆಸ್ಟ್ ಇಂಡೀಸ್ ವಿರುದ್ಧ ಡೊಮೆನಿಕಾದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅಮೋಘ ದಾಖಲೆಯೊಂದು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಜೈಸ್ವಾಲ್ ಶತಕ ಸಿಡಿಸಿ ಅಬ್ಬರಿಸುವ ಮೂಲಕ ಈ ಸಾಧನೆ ಮಾಡಿದ ಅಪರೂಪಸ ಸಾಧನೆ ಸಾಲಿಗೆ ಸೇರಿಕೊಂಡಿದ್ದಾರೆ.

ಜೈಸ್ವಾಳ್ ಅವರ ಈ ಅಮೋಘ ಪ್ರದರ್ಶನದ ಜೊತೆಗೆ ನಾಯಕ ರೋಹಿತ್ ಶರ್ಮಾ ಜೊತೆಗೆ ಸೇರಿಕೊಂಡು ಮೊದಲ ವಿಕೆಟ್‌ಗೆ ಭರ್ಜರಿ 229 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ರೋಹಿತ್ ಶರ್ಮಾ ಕುಡ ತಮ್ಮ ಶತಕವನ್ನು ಪೂರ್ಣಗೊಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಎರಡನೇ ದಿನದಾಟದ ಅಂತ್ಯದಲ್ಲಿ ಜೈಸ್ವಾಲ್ 350 ಎಸೆತಗಳನ್ನು ಎದುರಿಸಿ 143 ರನ್ ಬಾರಿಸಿದ್ದು ಅಜೇಯವಾಗುಳಿಸಿದ್ದಾರೆ. ಈ ಅವಧಿಯಲ್ಲಿ ಯುವ ಆಟಗಾರ ಮುರಿದಿರುವ ದಾಖಲೆಗಳು ಹಾಗೂ ಮೈಲಿಗಲ್ಲುಗಳು ಯಾವುದು ಎನ್ನುವುದನ್ನು ನೋಡೋಣ.. ಮುಂದೆ ಓದಿ..

Yashasvi Jaiswal maiden century on Test debu

1. ಜೈಸ್ವಾಲ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ 17ನೇ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಈಗ ಲಾಲಾ ಅಮರನಾಥ್ (118), ದೀಪಕ್ ಶೋಧನ್ (110), ಎಜಿ ಕೃಪಾಲ್ ಸಿಂಗ್ (100*), ಅಬ್ಬಾಸ್ ಅಲಿ ಬೇಗ್ (112), ಹನುಮಂತ್ ಸಿಂಗ್ (105), ಗುಂಡಪ್ಪ ವಿಶ್ವನಾಥ್ (137), ಸುರೀಂದರ್ ಅಮರನಾಥ್ (124), ಮೊಹಮ್ಮದ್ ಅಜರುದ್ದೀನ್ (110), ಪ್ರವೀಣ್ ಆಮ್ರೆ (103), ಸೌರವ್ ಗಂಗೂಲಿ (131), ವೀರೇಂದ್ರ ಸೆಹ್ವಾಗ್ (105), ಸುರೇಶ್ ರೈನಾ (120), ಶಿಖರ್ ಧವನ್ (187), ರೋಹಿತ್ ಶರ್ಮಾ (177), ಪೃಥ್ವಿ ಶಾ (134), ಮತ್ತು ಶ್ರೇಯಸ್ ಅಯ್ಯರ್ (105) ಅವರ ಸಾಲಿನಲ್ಲಿ ನಿಂತಿದ್ದಾರೆ.

2. ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ವಿದೇಶದಲ್ಲಿ ಶತಕ ಬಾರಿಸಿದ ಏಳನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರು ಅಬ್ಬಾಸ್ ಅಲಿ ಬೇಗ್ (ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 11 ರನ್), ಸುರಿಂದರ್ ಅಮರನಾಥ್ ( ನ್ಯೂಜಿಲೆಂಡ್ ವಿರುದ್ಧ ಆಕ್ಲಂಡ್‌ನಲ್ಲಿ 124 ರನ್), ಪ್ರವೀನ್ ಆಮ್ರೆ (ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 103 ರನ್), ಸೌರವ್ ಗಂಗೂಲಿ (ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 131 ರನ್) ವೀರೇಂದ್ರ ಸೆಹ್ವಾಗ್ (ಬ್ಲೋಮ್‌ಫಾಂಟೈನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 105 ಮತ್ತು ಸುರೇಶ್ ರೈನಾ (ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ 120 ರನ್) ನಂತರ ಈ ಸಾಧನೆ ಮಾಡಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

3. ಜೈಸ್ವಾಲ್ ಅವರು ವಿದೇಶದಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಭಾರತದ ಪರವಾಗಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಅಜೇಯ 143 ರನ್ ಬಾರಿಸಿರುವ ಜೈಸ್ವಾಲ್ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೌರವ್ ಗಂಗೂಲಿ 131 ರನ್‌ಗಳಿಸಿರುವ 27 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

4. ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಮೂರನೇ ಆರಂಭಿಕ ಆಟಗಾರನಾಗಿದ್ದಾರೆ. ಶಿಖರ್ ಧವನ್ ಮತ್ತು ಪೃಥ್ವಿ ಶಾ ಉಳಿದ ಇಬ್ಬರು ಆರಂಭಿಕರು. ಧವನ್ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 187 ರನ್ ಗಳಿಸಿ ಈ ಸಾಧನೆ ಮಾಡಿದ್ದರೆ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶಾ 134 ರನ್ ಗಳಿಸಿದ್ದರು.

5. ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ (177) ಮತ್ತು ಪೃಥ್ವಿ ಶಾ (134) ಕೂಡ ವಿಂಡೀಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದರು.

6. ಚೊಚ್ಚಲ ಟೆಸ್ಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತೀಯ ಎಂಬ ಹೊಸ ದಾಖಲೆಯನ್ನು ಜೈಸ್ವಾಲ್ ನಿರ್ಮಿಸಿದ್ದಾರೆ. 350 ಎಸೆತಗಳನ್ನು ಎದುರಿಸಿ ಈ ದಾಖಲೆ ಬರೆದಿದ್ದಾರೆ ಭಾರತದ ಯುವ ಆಟಗಾರ. ಇದಕ್ಕೂ ಮುನ್ನ ಮೊಹಮ್ಮದ್ ಅಜರುದ್ದೀನ್ 1984ರಲ್ಲಿ ಇಂಗ್ಲೆಂಡ್ ವಿರುದ್ಧ 322 ಎಸೆತಗಳನ್ನು ಎದುರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

Story first published: Friday, July 14, 2023, 10:58 [IST]
Other articles published on Jul 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+