Wiaan Mulder: ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್ ಇತಿಹಾಸ: ಲಾರಾ ದಾಖಲೆ ಸೇಫ್
ದಕ್ಷಿಣ ಆಫ್ರಿಕಾ ಸದ್ಯ ಜಿಂಬಾಬ್ವೆ ಪ್ರವಾಸವನ್ನು ಆರಂಭಿಸಿದೆ. ಈ ವೇಳೆ ಆತಿಥೇಯ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾದ ತಂಡದ ನಾಯಕ ವಿಯಾನ್ ಮುಲ್ಡರ್ ಇತಿಹಾಸವನ್ನು ನಿರ್ಮಿಸಿದ್ದಾರೆ. ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡ ಫೀಲ್ಡಿಂಗ್ ಮಾಡಲು ಮುಂದಾಯಿತು. ಈ ವೇಳೆ ದಕ್ಷಿಣ ಆಫ್ರಿಕಾ ತಂಡದ ನಾಯಕ ವಿಯಾನ್ ಮುಲ್ಡರ್ ಇತಿಹಾಸವನ್ನು ನಿರ್ಮಿಸಿದ್ದಾರೆ.
ಮೊದಲ ದಿನದಾಟಕ್ಕೆ 4 ವಿಕೆಟ್ ನಷ್ಟಕ್ಕೆ 465 ರನ್ ಕಲೆ ಹಾಕಿದ್ದ ದಕ್ಷಿಣ ಆಫ್ರಿಕಾ, ಸೋಮವಾರ ಎರಡನೇ ದಿನದಾಟವನ್ನು ಆರಂಭಿಸಿತು. ಈ ವೇಳೆ ಪ್ರವಾಸಿ ತಂಡ 5 ವಿಕೆಟ್ ನಷ್ಟಕ್ಕೆ 626 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಪರ ನಾಯಕ ವಿಯಾನ್ ಮುಲ್ಡರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ ಪರ ಎರಡನೇ ದ್ವಿಶತಕ ಬಾರಿಸಿದ್ದಾರೆ.

ಸೋಮವಾರ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ವಿಯಾನ್ ಮುಲ್ಡರ್ 297 ಎಸೆತಗಳಲ್ಲಿ ತ್ರಿಶತಕ ಬಾರಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ತ್ರಿಶತಕ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಅಲ್ಲದೆ ದಕ್ಷಿಣ ಆಫ್ರಿಕಾ ಪರ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆಗೂ ವಿಯಾನ್ ಮುಲ್ಡರ್ ಪಾತ್ರರಾಗಿದ್ದಾರೆ. ಇವರು 334 ಎಸೆತಗಳಲ್ಲಿ 49 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 367 ರನ್ ಸಿಡಿಸಿದರು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಸ್ಟಾರ್ ಪ್ಲೇಯರ್ ಹಾಶೀಮ್ ಆಮ್ಲಾ ಹೆಸರಿನಲ್ಲಿತ್ತು. ಇವರು 2012ರಲ್ಲಿ 311 ರನ್ ಬಾರಿಸಿದ್ದರು.
ಟೆಸ್ಟ್‌ನಲ್ಲಿ ವೇಗವಾಗಿ 300 ರನ್ ಬಾರಿಸಿದ ಬ್ಯಾಟರ್ಸ್
ವೀರೇಂದ್ರ ಸೆಹ್ವಾಗ್, ದಕ್ಷಿಣ ಆಫ್ರಿಕಾ ವಿರುದ್ಧ, 278 ಎಸೆತ
ವಿಯಾನ್ ಮುಲ್ಡರ್, ಜಿಂಬಾಬ್ವೆ ವಿರುದ್ಧ, 297 ಎಸೆತ
ಹ್ಯಾರಿ ಬ್ರೂಕ್, ಪಾಕಿಸ್ತಾನ ವಿರುದ್ಧ, 310 ಎಸೆತ
ಮ್ಯಾಥ್ಯೂ ಹೆಡನ್, ಜಿಂಬಾಬ್ವೆ ವಿರುದ್ಧ, 362 ಎಸೆತ
ವೀರೇಂದ್ರ ಸೆಹ್ವಾಗ್, ಪಾಕಿಸ್ತಾನ ವಿರುದ್ಧ, 364 ಎಸೆತ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವೇಳೆ ಗಾಯಕ್ಕೆ ತುತ್ತಾಗಿದ್ದ ತೆಂಬು ಬವುಮಾ ಅವರ ಅನುಪಸ್ಥಿತಿಯಲ್ಲಿ ವಿಯಾನ್ ಮುಲ್ಡರ್ ತಂಡವನ್ನು ಮುನ್ನಡೆಸಿದರು. ಇದೇ ವೇಳೆ ನಾಯಕನಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಹಿರಿಮೆಗೂ ವಿಯಾನ್ ಮುಲ್ಡರ್ ಪಾತ್ರರಾದರು. ಈ ಮೂಲಕ ಇವರು ವಿಶ್ವ ದಾಖಲೆಯನ್ನು ಸಹ ಬರೆದರು.
ಐದನೇ ಆಟಗಾರ
ಟೆಸ್ಟ್ ಕ್ರಿಕೆಟ್‌ನ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆಗೂ ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್ ಪಾತ್ರರಾದರು. ಟೆಸ್ಟ್ ಕ್ರಿಕೆಟ್‌ನ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಪ್ಲೇಯರ್ ಬ್ರಿಯಾನ್ ಲಾರ್ ಅವರದ್ದಾಗಿದೆ. ಇವರು ಇಂಗ್ಲೆಂಡ್ ವಿರುದ್ಧ 2004ರಲ್ಲಿ 400 ರನ್‌ಗಳ ಅಜೇಯ ಇನಿಂಗ್ಸ್ ಕಟ್ಟಿದ್ದರು.
ಇನಿಂಗ್ಸ್‌ನಲ್ಲಿ ಗರಿಷ್ಠ ರನ್ ಸಾಧಕರು
ಬ್ರಿಯಾನ್ ಲಾರಾ, ವೆಸ್ಟ್ ಇಂಡೀಸ್, ಅಜೇಯ 400 ರನ್
ಮ್ಯಾಥ್ಯೂ ಹೆಡನ್, ಆಸ್ಟ್ರೇಲಿಯಾ, 380 ರನ್
ಬ್ರಿಯಾನ್ ಲಾರಾ, ವೆಸ್ಟ್ ಇಂಡೀಸ್, 375 ರನ್
ಮಹೇಲ್ ಜಯವರ್ಧನೆ, ಶ್ರೀಲಂಕಾ, 374 ರನ್
ವಿಯಾನ್ ಮುಲ್ಡರ್, ದಕ್ಷಿಣ ಆಫ್ರಿಕಾ, ಅಜೇಯ 367 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications