Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಷಭ್‌ ಪಂತ್‌ಗೆ ಅಪಘಾತವಾದಗ ಈ ವಿಷಯದ ಬಗ್ಗೆನೇ ಹೆಚ್ಚಿನ ಹೆದರಿಕೆ ಇತ್ತು: 13 ತಿಂಗಳ ಬಳಿಕ ಸತ್ಯ ಬಯಲು

ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ರಿಷಬ್ ಪಂತ್ ಯಾವಾಗ ಕ್ರಿಕೆಟ್ ಮೈದಾನಕ್ಕೆ ಮರಳುತ್ತಾರೆ ಎಂಬುದರ ಕುರಿತು ಕುತೂಹಲ ಮನೆ ಮಾಡಿದೆ. ಘಟನೆಯ ಹದಿಮೂರು ತಿಂಗಳ ನಂತರ, ಅಪಘಾತದಲ್ಲಿ ತನ್ನ ದೊಡ್ಡ ಕಾಳಜಿ ತನ್ನ ಬಲಗಾಲಿನ ಬಗ್ಗೆ ಎಂದು ಪಂತ್ ಹೇಳಿದ್ದಾರೆ. ಬಲಗಾಲು ಕಳೆದುಕೊಳ್ಳುವ ಭಯ ಕಾಡುತ್ತಿತ್ತು ಎಂದು ತಿಳಿಸಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಪಂತ್ 13 ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಪಂತ್ ಡಿಸೆಂಬರ್ 2022 ರಲ್ಲಿ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ರೂರ್ಕಿಗೆ ಹೋಗುತ್ತಿದ್ದರು. ಆಗ ಅವರ ಎಸ್‌ಯುವಿ ಕಾರು ನಡುರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

wicketkeeper Rishabh Pant makes fresh revelation on life threatening car accident

ಬಾಂಗ್ಲಾದೇಶದ ಮಿರ್‌ಪುರ ಟೆಸ್ಟ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ರಿಷಬ್ ಪಂತ್ ನಂತರ ಭಾರತಕ್ಕೆ ಮರಳಿದರು. ಪಂತ್ ಸದ್ಯ ಕ್ರಿಕೆಟ್‌ಗೆ ಮರಳಲು ಕಾತರದಿಂದ ಕಾಯುತ್ತಿದ್ದಾರೆ. 26 ವರ್ಷದ ರಿಷಭ್ ಪಂತ್ ಸ್ಟಾರ್ ಸ್ಪೋರ್ಟ್ಸ್ ಸರಣಿ 'ಬಿಲೀವ್ ಇಪಿ 3: ಟು ಡೆತ್ & ಬ್ಯಾಕ್' ನಲ್ಲಿ, 'ಮಾತನಾಡಿದ ಅವರು ನನಗೆ ಕಾಲು ಕಳೆದುಕೊಳ್ಳುವ ಭಯವಿತ್ತು. ಆ ಸಮಯದಲ್ಲಿ ನನಗೆ ಭಯವಾಯಿತು ಎಂದಿದ್ದಾರೆ.

ಭೀಕರ ಅಪಘಾತವನ್ನು ನೆನಪಿಸಿಕೊಂಡ ರಿಷಭ್ ಪಂತ್, ತಮ್ಮ ಬಲ ಮೊಣಕಾಲಿನ ಮೂಳೆ ಸರಿದು ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ. ರಿಷಬ್ ಪಂತ್ ಪ್ರಕಾರ, 'ಸುತ್ತಮುತ್ತಲಿನಲ್ಲಿ ಯಾರಾದರೂ ಇದ್ದರೆ, ಕಾಲನ್ನು ಎತ್ತಲು ನನಗೆ ಸಹಾಯ ಮಾಡಬಹುದೇ ಎಂದು ನಾನು ಕೇಳಿದೆ. ಅಲ್ಲಿದ್ದ ಕೆಲಸ ಜನ ಓಡಿ ಬಂದು ನನಗೆ ಸಹಾಯ ಮಾಡಿದರು. ಅಪಘಾತದ ಸಮಯದಲ್ಲಿ ನನಗೆ ಗಾಯದ ಬಗ್ಗೆ ತಿಳಿದಿತ್ತು ಎಂದು ತಿಳಿಸಿದ್ದಾರೆ.

wicketkeeper Rishabh Pant makes fresh revelation on life threatening car accident

ಕಾರ್‌ ಡಿವೈಡರ್‌ಗೆ ಡಿಕ್ಕಿ ಹೊಡೆದಾಗ ರಜತ್ ಕುಮಾರ್ ಮತ್ತು ನಿಶು ಕುಮಾರ್ ಎಂಬ ಇಬ್ಬರು ವ್ಯಕ್ತಿಗಳು ಪಂತ್ ಅವರನ್ನು ಅವರ ಎಸ್‌ಯುವಿಯಿಂದ ಎಳೆದರು, ಅದು ನಂತರ ಕಾರ್‌ ಬೆಂಕಿಗೆ ಆಹುತಿ ಆಯಿತು.

ರಿಷಬ್ ಪಂತ್ ಅವರ ಆರಂಭಿಕ ಚಿಕಿತ್ಸೆಯನ್ನು ಡೆಹ್ರಾಡೂನ್‌ನಲ್ಲಿ ಮಾಡಲಾಯಿತು, ನಂತರ ಅವರನ್ನು ವಿಮಾನದ ಮೂಲಕ ಮುಂಬೈಗೆ ಕರೆದೊಯ್ಯಲಾಯಿತು. ಅಲ್ಲಿ ಬಿಸಿಸಿಐ ಅವರಿಗೆ ತಜ್ಞರಿಂದ ಚಿಕಿತ್ಸೆ ನೀಡಿಸಿತು. ಅವರ ಬಲ ಮೊಣಕಾಲಿನಲ್ಲಿ ಮೂರು ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆ ಕಂಡರು. ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಪ್ರಾರಂಭಿಸಿದರು.

ಸಂಭಾಷಣೆಯ ಮುಖ್ಯಾಂಶ

- ನಾನು ರಜತ್ ಮತ್ತು ನಿಶು ಕುಮಾರ್ ಅವರಿಂದ ಬದುಕಿದ್ದೇನೆ. ಅಪಘಾತದ ನಂತರ ಇಬ್ಬರೂ ಪಂತ್ ಅವರನ್ನು ಕಾರಿನಿಂದ ಹೊರಕ್ಕೆ ಕರೆದೊಯ್ದಿದ್ದರು. ಪಂತ್ ಹೊರ ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಪಂತ ಹೇಳಿದರು- ನನ್ನ ಜೀವನದುದ್ದಕ್ಕೂ ಈ ಇಬ್ಬರು ಹುಡುಗರಿಗೆ ನಾನು ಕೃತಜ್ಞರಾಗಿರುತ್ತೇನೆ ಎಂದು ತಿಳಿಸಿದರು.

- ನನ್ನ ಬಲ ಮೊಣಕಾಲು ಸಂಪೂರ್ಣವಾಗಿ 180 ಡಿಗ್ರಿ ತಿರುಗಿದೆ. ಮೊಣಕಾಲನ್ನು ಅದರ ಸ್ಥಾನಕ್ಕೆ ತರಲು ನಾನು ಹತ್ತಿರದಲ್ಲಿ ನಿಂತಿರುವ ಜನರ ಸಹಾಯವನ್ನು ಕೇಳಿದೆ ಎಂದು ತಿಳಿಸಿದರು.

- ನೋವಿನಿಂದ ನರಳುತ್ತಿದ್ದ ಪಂತ್, ಅಪಘಾತದ ವೇಳೆ ಕಾಲು ಕಳೆದುಕೊಳ್ಳದಿರುವುದು ಅದೃಷ್ಟ ಎಂದು ಈಗ ಭಾವಿಸಿದ್ದಾರೆ. ಮೂಳೆಯ ಹೊರತಾಗಿ ಬೇರೆ ಯಾವುದೇ ನರಕ್ಕೆ ಹಾನಿಯಾಗಿದ್ದರೆ, ಅವರು ದೇಹದಿಂದ ನನ್ನ ಕಾಲನ್ನು ಬೇರ್ಪಡಿಸುವ ಸಾಧ್ಯತೆಯಿತ್ತು ಎಂದು ಪಂತ್ ತಿಳಿಸಿದ್ದಾರೆ.

ಪಂತ್ 33 ಟೆಸ್ಟ್, 30 ಏಕದಿನ ಮತ್ತು 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ, ಪಂತ್ 5 ಶತಕ ಮತ್ತು 11 ಅರ್ಧ ಶತಕಗಳೊಂದಿಗೆ 2271 ರನ್ ಗಳಿಸಿದ್ದಾರೆ, ಆದರೆ ಏಕದಿನದಲ್ಲಿ ಅವರು ಒಂದು ಶತಕ ಮತ್ತು 5 ಅರ್ಧ ಶತಕಗಳನ್ನು ಒಳಗೊಂಡಂತೆ 865 ರನ್ ಗಳಿಸಿದ್ದಾರೆ. ಪಂತ್ ಅಂತಾರಾಷ್ಟ್ರೀಯ ಟಿ20ಯಲ್ಲಿ 3 ಅರ್ಧಶತಕಗಳೊಂದಿಗೆ 987 ರನ್ ಗಳಿಸಿದ್ದಾರೆ.

Story first published: Friday, February 2, 2024, 8:04 [IST]
Other articles published on Feb 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+