For Quick Alerts
ALLOW NOTIFICATIONS  
For Daily Alerts
 

ಮುಂದಿನ ವಾರ ಮತ್ತೆ ಕಣಕ್ಕಿಳಿಯಲಿದ್ದೇನೆ: ಡೇವಿಡ್ ವಾರ್ನರ್

Will be back in action from next week, says David Warner

ಸಿಡ್ನಿ: ಆಸ್ಟ್ರೇಲಿಯಾದ ಡೈನಮಿಕ್ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ತಾನು ಕಳೆದ 6-9 ತಿಂಗಳಿನಿಂದಲೂ ತೊಡೆ ಸಂದು ಬೇನೆ (ಗ್ರೋಯಿನ್ ಇಂಜುರಿ) ಅನುಭವಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಆದರೆ ತಾನೀಗ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ವಾರ ಕಣಕ್ಕಿಳಿಯುವುದಾಗಿ ಮಾಹಿತಿ ನೀಡಿದ್ದಾರೆ.

34 ಹರೆಯದ ಡೇವಿಡ್ ವಾರ್ನರ್ ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಸರಣಿಯ ವೇಳೆ ಗಾಯಕ್ಕೀಡಾಗಿದ್ದರು. ಆ ಬಳಿಕ ವಾರ್ನರ್ ತಂಡದಿಂದ ಹೊರ ಬಿದ್ದಿದ್ದರು. ಮೂರು ಪಂದ್ಯಗಳ ಟಿ20ಐ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ವಾರ್ನರ್ ಆಡಿರಲಿಲ್ಲ.

ಈಗ ನ್ಯೂಜಿಲೆಂಡ್‌ಗೆ ಪ್ರವಾಸ ಹೋಗಿರುವ ಆಸ್ಟ್ರೇಲಿಯಾ ತಂಡ ಅಲ್ಲಿ ಐದು ಪಂದ್ಯಗಳ ಟಿ20ಐ ಸರಣಿ ಆಡುತ್ತಿದೆ. ಈ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ವಾರ್ನರ್ ಹೆಸರಿಸಲ್ಪಟ್ಟಿಲ್ಲ. ಆದರೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವಾರ್ನರ್ ತಾನು ಮುಂದಿನ ವಾರ ಮೈದಾನಕ್ಕೆ ಮರಳುವುದಾಗಿ ಹೇಳಿದ್ದಾರೆ.

'ನನಗೆ ತೊಡೆಸಂದಿ ನೋವು ಕಳೆದ 6-9 ತಿಂಗಳಿನಿಂದ ಕಾಡುತ್ತಿದೆ. ಸದ್ಯ ನಡೆಯುತ್ತಿರುವ ಉಪಚಾರದಿಂದ ಗಾಯ ಸುಧಾರಿಸುತ್ತಿದೆ. ಮಾರ್ಚ್ 4ರಂದು ನ್ಯೂಜಿಲೆಂಡ್ ವಿರುದ್ಧದ ಸರಣಿ ಆಡಲು ಬರುತ್ತಿದ್ದೇನೆ,' ಎಂದು ವಾರ್ನರ್ ತನ್ನ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Tuesday, February 23, 2021, 14:51 [IST]
Other articles published on Feb 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+