Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಆಡುವುದು ಶ್ರೇಷ್ಠ ಅನುಭವ ಎಂದ ಕಿವೀಸ್ ನಾಯಕ

Will Be Great To Play In Ipl: Kane Williamson

ಈ ಬಾರಿಯ ವಿಶ್ವಕಪ್ ಟೂರ್ನಿ ಅಧಿಕೃತವಾಗಿ ಮುಂದೂಡಿಕೆಯಾಗಿದೆ. ಹೀಗಾಗಿ ಆ ಸಂದರ್ಭದಲ್ಲಿ ಐಪಿಎಲ್ 13ನೇ ಆವೃತ್ತಿಯನ್ನು ನಡೆಸಲು ಭರ್ಜರಿ ಸಿದ್ಧತೆಗಳು ಅಗಿದೆ. ಐಪಿಎಲ್ ಮುಖ್ಯಸ್ಥ ಬೃಜೇಶ್ ಪಟೇಲ್ ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಯುವ ಬಗ್ಗೆ ಹೇಳಿಕೆಯನ್ನು ನೀಡಿದ್ದು ಅಭಿಮಾನಿಗಳು ಕೂಡ ಸಾಕಷ್ಟು ಉತ್ಸಾಹದಿಂದಿದ್ದಾರೆ.

ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ನ್ಯೂಜಿಲೆಂಡ್ ತಂಡದ ವೇಗಿ ಟ್ರೆಂಟ್ ಬೋಲ್ಡ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧಾರವನ್ನು ಶೀಘ್ರವಾಗಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ "ಐಪಿಎಲ್‌ನಲ್ಲಿ ಆಡುವುದು ಶ್ರೇಷ್ಠ ಅನುಭವ ಎಂದಿದ್ದಾರೆ.

ನ್ಯೂಜಿಲೆಂಡ್ ತಂಡದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಕೇನ್ ವಿಲಿಯಮ್ಸನ್ ಐಪಿಎಲ್ ಬಗ್ಗೆ ಕ್ರಿಕ್ ಇನ್ಫೋ ಜೊತೆಗೆ ಮಾತನಾಡಿದ್ದಾರೆ. ಐಪಿಎಲ್ ಆರಂಭದತ್ತ ಎಲ್ಲರೂ ದೃಷ್ಠಿನೆಟ್ಟಿದ್ದಾರೆ. ಅದೊಂದು ಅದ್ಭುತವಾದ ಪಂದ್ಯಾವಳಿಯಾಗಿದ್ದು ಅದ್ಭುತ ಪ್ರೇಕ್ಷಕರನ್ನು ಹೊಂದಿದೆ ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

"ಈ ಬಾರಿ ಎಲ್ಲಿ ನಡೆಯುತ್ತದೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಮಾಹಿತಿಯೊಂದಿಗೆ ಅದಕ್ಕೆ ಪೂರಕ ಮಾಹಿತಿಗಳು ಹೊರಬೀಳಲಿದೆ. ಈ ಬಳಿಕವೇ ನಾವು ಮುಂದಿನ ನಿರ್ಧಾರವನ್ನು ತೆಗದುಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಕೇನ್ ವಿಲಿಯಮ್ಸನ್ ಕ್ರಿಕ್ ಇನ್ಫೋ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಐಪಿಎಲ್ ಬಗ್ಗೆ ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಲಾಗುತ್ತಿದ್ದು ಜುಲೈ 24 ರಂದು ಬಿಸಿಸಿಐ ಸಭೆ ಸೇರಲಿದೆ. ಐಪಿಎಲ್ ಆರಂಭ, ತರಬೇತಿ ಶಿಬಿರ ವೇಳಾಪಟ್ಟಿ ಹಾಗೂ ಅಂತಿಮ ವೇಳಾಪಟ್ಟಿಯ ಬಗ್ಗೆ ಆ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಸಧ್ಯ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ತರಬೇತಿ ಶಿಬಿರ ಆರಂಭವಾಗಿಲ್ಲ. ಆದರೆ ವೈಯಕ್ತಿಕವಾಗಿ ಕೆಲ ಕ್ರಿಕೆಟಿಗರು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Story first published: Wednesday, July 22, 2020, 16:30 [IST]
Other articles published on Jul 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+