For Quick Alerts
ALLOW NOTIFICATIONS  
For Daily Alerts
 

IND vs ENG T20: ಮೊದಲ ಟಿ20 ಪಂದ್ಯದಲ್ಲಿ ಹೇಗಿರಲಿದೆ ಈಡನ್‌ ಗಾರ್ಡನ್ ಪಿಚ್?

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಬುಧವಾರದಿಂದ ಟಿ20 ಕ್ರಿಕೆಟ್‌ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿದೆ. ಈ ಟೂರ್ನಿಯ ಮೊದಲ ಪಂದ್ಯಕ್ಕೆ ಕೋಲ್ಕತ್ತಾದ ಈಡನ್‌ ಗಾರ್ಡನ್‌ ಅಂಗಳ ಆತಿಥ್ಯ ವಹಿಸಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಟೀಮ್ ಇಂಡಿಯಾದ್ದಾಗಿದೆ. ಅಭಿಮಾನಿಗಳು ಸಹ ಈ ಪಂದ್ಯವನ್ನು ಕಾತುರದಿಂದ ಕಾಯುತ್ತಿದ್ದಾರೆ.

ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಈಡನ್‌ ಗಾರ್ಡನ್‌ ಅಂಗಳದಲ್ಲಿ ಈಗಾಗಲೇ ಒಟ್ಟು 11 ಟಿ20 ಪಂದ್ಯಗಳು ನಡೆದಿವೆ. ಟೀಮ್ ಇಂಡಿಯಾ ಈ ಮೈದಾನದಲ್ಲಿ ಸುಮಾರು 13 ವರ್ಷಗಳಿಂದ ಸೋಲನ್ನು ಕಂಡಿಲ್ಲ. ಈ ಅಂಗಳದಲ್ಲಿ ಭಾರತ ಕೊನೆಯದಾಗಿ ಅಕ್ಟೋಬರ್‌ 29, 2011ರಲ್ಲಿ ಸೋಲು ಕಂಡಿತ್ತು. ಆಗ ಎದುರಾಳಿಯಾಗಿದ್ದ ಇಂಗ್ಲೆಂಡ್‌ 6 ವಿಕೆಟ್ ಜಯ ಸಾಧಿಸಿತ್ತು. ಈಗ ಮತ್ತೊಮ್ಮೆ ಈ ಅಂಗಳದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಆಡಿದ ಏಳು ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದೆ.

Will Eden Gardens Pitch Favor Batsmen or Bowlers in India vs England T20 Clash

ಹೇಗಿದೆ ಈಡನ್ ಗಾರ್ಡನ್‌ ಪಿಚ್?

ಹಾಲಿ ಟಿ20 ವಿಶ್ವ ಚಾಂಪಿಯನ್‌ ಭಾರತ ಹಾಗೂ ಮಾಜಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ನಡುವಿನ ಕಾದಾಟ ರೋಚಕತೆ ಹೆಚ್ಚಿಸಿದೆ. ಈ ಮೈದಾನದಲ್ಲಿನ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ ಆಗಿರಲಿದೆ. ಇದೇ ಪಿಚ್‌ ಮೇಲೆ 2024ರಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 262 ರನ್‌ಗಳನ್ನು ಪಂಜಾಬ್‌ ಕಲೆ ಹಾಕಿತ್ತು. ಇದನ್ನು ನೋಡಿದಾಗ ಈ ಬಾರಿಯೂ ಈ ಪಿಚ್‌ನಲ್ಲಿ ಬ್ಯಾಟರ್‌ಗಳು ಆರ್ಭಟ ನಡೆಸಬಹುದು. ಇಬ್ಬನಿಯಿಂದಾಗಿ ಬೌಲರ್‌ಗಳಿಗೆ ಹೆಚ್ಚಿನ ತೊಂದರೆಯಾಗಬಹುದು.

ಈ ಮೈದಾನದಲ್ಲಿ ಚೇಸ್ ಮಾಡುವ ತಂಡವೇ ಹೆಚ್ಚು ಬಾರಿ ಪಂದ್ಯವನ್ನು ಗೆದ್ದಿದೆ. ಈಡನ್‌ ಗಾರ್ಡನ್‌ ಅಂಗಳದಲ್ಲಿ ಮೊದಲ ಬ್ಯಾಟ್ ಮಾಡಿದ ತಂಡ ಕನಿಷ್ಠ 155 ರನ್‌ ಕಲೆ ಹಾಕಿದೆ. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ 201 ಆಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಿದ್ದವು. ಇನ್ನು ಇದೇ ಬಾಂಗ್ಲಾದೇಶ ತಂಡವನ್ನು 70 ರನ್‌ಗೆ ನ್ಯೂಜಿಲೆಂಡ್ ಕಟ್ಟಿ ಹಾಕಿ ಸಾಧನೆ ಮಾಡಿತ್ತು.

ಈಡನ್‌ ಗಾರ್ಡನ್ ಪಿಚ್‌ ಸ್ಪಿನ್‌ ಬೌಲರ್‌ಗಳಿಗೆ ನೆರವು ನೀಡಲಿದೆ. ಅಲ್ಲದೆ ಸ್ವಿಂಗ್ ಬೌಲರ್‌ಗಳಿಗೂ ವರವಾಗಲಿದೆ. ಈ ಪಂದ್ಯದಲ್ಲಿ ಮೊದಲು ಬೌಲ್ ಮಾಡುವ ಬ್ಯಾಟರ್‌ಗಳಿಗೆ ಕಾಡಬಲ್ಲರು.

Will Eden Gardens Pitch Favor Batsmen or Bowlers in India vs England T20 Clash

ಭಾರತ ಹೊಸ ವರ್ಷದ ಮೊದಲ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಲು ತಯಾರಿ ಮಾಡಿಕೊಂಡಿದೆ. ಇನ್ನು ಒಂದು ವರ್ಷದ ಬಳಿಕ ಟೀಮ್ ಇಂಡಿಯಾಕ್ಕೆ ಕಂಬ ಬ್ಯಾಕ್ ಮಾಡಿರುವ ಸ್ಟಾರ್ ಸ್ವಿಂಗ್‌ ಬೌಲರ್‌ ಮೊಹಮ್ಮದ್ ಶಮಿ ಸಹ ತಮ್ಮ ತವರು ನೆಲದಲ್ಲಿ ಪಂದ್ಯವನ್ನು ಆಡಲು ಉತ್ಸಕರಾಗಿದ್ದಾರೆ.

Story first published: Tuesday, January 21, 2025, 9:01 [IST]
Other articles published on Jan 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+