Hardik Pandya: ಮಗ-ಹೆಂಡತಿಯನ್ನು ಹಾರ್ದಿಕ್ ಪಾಂಡ್ಯ ಮತ್ತೆ ಭೇಟಿಯಾಗ್ತಾರಾ?
ಶ್ರೀಲಂಕಾ ಪ್ರವಾಸದ ನಂತರ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ರಜಾದಿನಗಳನ್ನು ಆನಂದಿಸುತ್ತಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಅಶಾಂತತೆ ಮುಂದುವರಿಯುತ್ತಿದೆ.
ಹಾರ್ದಿಕ್ ಪಾಂಡ್ಯ ಕೆಲವು ದಿನಗಳ ಹಿಂದೆ ನತಾಶಾ ಸ್ಟಾಂಕೋವಿಕ್ ಜೊತೆಗಿನ ತಮ್ಮ 4 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದರು. ಇದಾದ ಬಳಿಕ ಪಾಂಡ್ಯ ಅವರು ಜಾಸ್ಮಿನ್ ವಾಲಿಯಾ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ.

ಇದೀಗ ಪಾಂಡ್ಯ ಅವರಿಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ನತಾಶಾ ಸೆರ್ಬಿಯಾದಿಂದ ಮುಂಬೈಗೆ ಮರಳಿದ್ದಾರೆ. ಆದರೆ ಈಗ ಅವರು ತನ್ನ ಮಗ ಅಗಸ್ತ್ಯನನ್ನು ಭೇಟಿಯಾಗುತ್ತಾರೋ? ಇಲ್ಲವೋ? ಎಂಬ ಒಂದೇ ಒಂದು ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ.
ಮಗನ ನೆನಪಿನಲ್ಲಿ ಹಾರ್ದಿಕ್
2024ರ ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಹಾರ್ದಿಕ್ ಮತ್ತು ನತಾಶಾ ನಡುವಿನ ಸಂಬಂಧದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಂದತಿಗಳು ಎಬ್ಬಿದ್ದವು. ಇದಕ್ಕೆ ಪೂರಕವಾಗಿ ನತಾಶಾ ಅವರು ಐಪಿಎಲ್ ವೇಳೆ ಎಲ್ಲಿಯೂ ಪಾಂಡ್ಯ ಜೊತೆಗೆ ಕಾಣಿಸಕೊಂಡಿರಲಿಲ್ಲ.
ಇದಾದ ಬಳಿಕ ಭಾರತ ಟಿ20 ವಿಶ್ವಕಪ್ ಚಾಂಪಿಯನ್ ಆದ ನಂತರವೂ ಹಾರ್ದಿಕ್‌ಗೆ ನತಾಶಾ ಕಡೆಯಿಂದ ಯಾವುದೇ ಅಭಿನಂದನೆಗಳು ಬಂದಿರಲಿಲ್ಲ. ನಂತರ ನನ್ನ ಮತ್ತು ನತಾಶಾ ಅವರ 4 ವರ್ಷಗಳ ಸಂಬಂಧ ಕೊನೆಗೊಂಡಿದೆ ಎಂದು ಪೋಸ್ಟ್ ಮೂಲಕ ಅವರು ಸ್ಪಷ್ಟಪಡಿಸಿದ್ದರು.
ಸ್ವಲ್ಪ ದಿನಗಳ ಬಳಿಕ ನತಾಶಾ ತನ್ನ ಮಗನೊಂದಿಗೆ ಸರ್ಬಿಯಾಕ್ಕೆ ಹೋಗಿದ್ದರು. ಸರ್ಬಿಯಾದಲ್ಲಿ ಅವರು ತಮ್ಮ ಮಗನೊಂದಿಗೆ ಸುತ್ತಾಡುವ ಅನೇಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳಿಗೆ ಹಾರ್ದಿಕ್ ಪಾಂಡ್ಯ ಕಾಮೆಂಟ್ ಮಾಡಿದ್ದರು.
ಇದನ್ನು ಗಮನಿಸಿದ ಅವರ ಅಭಿಮಾನಿಗಳು ಹಾರ್ದಿಕ್ ಅವರಿಗೆ ಮಗ ಅಗಸ್ತ್ಯನ ನೆನಪುಗಳು ಕಾಡುತ್ತಿವೆ ಎಂದು ಪ್ರತಿಕ್ರಿಯಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ನತಾಶಾ ಮುಂಬೈಗೆ ಮರಳಿದ್ದಾರೆ. ಅವರು ವಿಮಾನ ನಿಲ್ದಾಣ ಮತ್ತು ಮುಂಬೈ ಮಳೆಯ ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಆದರೆ, ಅಗಸ್ತ್ಯ ಅವರೊಂದಿಗೆ ಇದ್ದಾರೋ? ಇಲ್ಲವೋ? ಎಂಬುದು ಫೋಟೋದಲ್ಲಿ ಕಾಣಿಸಿಲ್ಲ. ಹಾರ್ದಿಕ್ ಪಾಂಡ್ಯ ಅವರು ತಮ್ಮ ಹೆಂಡತಿ ಮತ್ತು ಮಗನನ್ನು ಭೇಟಿ ಆಗಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications