Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಮಗೆ ಸ್ವಲ್ಪ ಹೆಚ್ಚೇ ಮಾನಸಿಕ ಪ್ರಯೋಜನವಿದೆ: ರೋಹಿತ್ ಶರ್ಮಾ

Will have slight psychological advantage but cant think about past games: Rohit Sharma

ದುಬೈ: ನವೆಂಬರ್ 10ರ ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್‌ ಅಪರೂಪದ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡಲಿವೆ.

ಮುಂಬೈ-ಡೆಲ್ಲಿ ನಡುವಿನ ಹಿಂದಿನ ಮೂರು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ವಿರುದ್ಧ ಪಾರಮ್ಯ ಮೆರೆದಿದೆ. ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಮುಂದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಕಂಡಿತ್ತು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 57 ರನ್‌ಗಳ ಜಯಭೇರಿ ಬಾರಿಸಿತ್ತು.

ಫೈನಲ್‌ ಪಂದ್ಯದಲ್ಲಿ ಗೆದ್ದು ಮುಂಬೈ ಐದನೇ ಟ್ರೋಫಿ ಮುಡಿಗೇರಿಸಿಕೊಳ್ಳುವತ್ತ ಕಣ್ಣಿಟ್ಟಿದರೆ, ಡೆಲ್ಲಿ ತಂಡ ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ ಮಾನಸಿಕ ಅನುಕೂಲ ಹೆಚ್ಚಿದೆ ಎಂದು ಎಂಐ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಹಿಂದಿನ ಮೂರು ಪಂದ್ಯಗಳಲ್ಲಿ ಗೆದ್ದಿರುವುದರಿಂದ ಆ ಆತ್ಮವಿಶ್ವಾಸ ತಂಡದ ಆಟಗಾರರಲ್ಲಿದ್ದರೆ, ಸೋತ ಭೀತಿ ಎದುರಾಳಿ ಡೆಲ್ಲಿಯಲ್ಲಿರುತ್ತದೆ ಎಂಬರ್ಥದಲ್ಲಿ ರೋಹಿತ್ ಮಾತನಾಡಿದ್ದಾರೆ. 'ನಮಗೆ ಸ್ವಲ್ಪ ಮಾನಸಿಕ ಅನುಕೂಲವಿದೆ. ಹಾಗಂತ ಐಪಿಎಲ್‌ನಲ್ಲಿ ಪ್ರತಿ ದಿನವೂ ಹೊಸತೇ ಇರುವುದನ್ನು ನಾವು ನೋಡಿದ್ದೇವೆ. ಪ್ರತೀ ಪಂದ್ಯದಲ್ಲಿ ಹೊಸ ಒತ್ತಡ, ಪ್ರತೀ ಪಂದ್ಯವೂ ಹೊಸತು ಇರಲಿದೆ,' ಎಂದು ಶರ್ಮಾ ನುಡಿದಿದ್ದಾರೆ.

Story first published: Monday, November 9, 2020, 23:28 [IST]
Other articles published on Nov 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+