ಕರ್ನಾಟಕದ ಸ್ವತ್ತು ಆಗುತ್ತಾ ಕನ್ನಡಿಗರ ಹೆಮ್ಮೆ RCB?
ಬಹುದಿನಗಳಿಂದ ಬಹಳ ಚರ್ಚೆಯಾಗುತ್ತಿರುವ ವಿಷಯ ಆರ್‌ಸಿಬಿ (RCB) ಮಾಲೀಕತ್ವ ಬದಲಾವಣೆ. ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಮಾಲೀಕತ್ವ ಬದಲಾವಣೆ ಆಗುವುದು ಕನ್ಫರ್ಮ್ ಆಗಿದೆ. ಆದರೆ ವಿಶ್ವದ ಖ್ಯಾತ ತಂಡವನ್ನು ಖರೀದಿ ಮಾಡುವುದು ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ. ಈ ತಂಡವನ್ನು ಖರೀದಿಸಿದಲು ಖ್ಯಾತ ಉದ್ಯಮಿಗಳು ಸಹ ಒಂದು ಕೈ ನೋಡುತ್ತಿದ್ದಾರೆ. ಆದರೆ ಈ ತಂಡದ ವ್ಯಾಲ್ಯೂ ಹಲವರ ನಿದ್ದೆ ಗೆಡಿಸಿದೆ. ಈಗ ಆರ್‌ಸಿಬಿ ಮಾಲೀಕತ್ವದ ರೇಸ್‌ಗೆ ಮತ್ತೊಬ್ಬರು ಎಂಟ್ರಿ ನೀಡಿದ್ದಾರೆ. ಒಂದು ವೇಳೆ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಿದರೆ, ತಂಡ ನಿಶ್ಚಿತವಾಗಿಯೂ ಕನ್ನಡಿಗರದ್ದೇ ಸ್ವತ್ತು ಆಗಲಿದೆ.
ಆರ್‌ಸಿಬಿ ತಂಡ 18ನೇ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ, 17 ವರ್ಷದ ವನವಾಸವನ್ನು ಕೊನೆಗೊಳಿಸಿತು. ಈ ಸಂಭ್ರಮ ವಿಶ್ವದಲ್ಲೆಡೆ ಹಬ್ಬಿತ್ತು. ಆದರೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ನಡೆದ ಘಟನೆ, ಮ್ಯಾನೇಜ್ಮೆಂಟ್‌ಗೆ ಕಪ್ಪು ಚುಕ್ಕೆಯಂತೆ ಅಂಟಿದೆ. ಆರ್‌ಸಿಬಿ ವಿಕ್ಟರಿ ಪೆರೆಡ್ ವೇಳೆ ಕಾಲ್ತುಳಿತ ಸಂಭವಿಸಿ, 11 ಜನರು ಸಾವನ್ನಪ್ಪಿದ್ದರು. ಇದರಿಂದ ಆರ್‌ಸಿಬಿ ಮ್ಯಾನೇಜ್ಮೆಂಟ್ ಪೇಚೆಗೆ ಸಿಲುಕಿಕೊಂಡಂತೆ ಕಂಡಿತು. ಅಲ್ಲದೆ ತಂಡವನ್ನು ಮಾರಾಟ ಮಾಡುವ ಬಗ್ಗೆಯೂ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಆರ್‌ಸಿಬಿ ಐಪಿಎಲ್ 2026ರಲ್ಲಿ ಹೊಸ ಮಾಲೀಕತ್ವದಲ್ಲಿ ಕಣಕ್ಕೆ ಇಳಿಯಲಿದೆ. ಆರ್‌ಸಿಬಿ ಮಾಲೀಕತ್ವ ವಹಿಸಿಕೊಂಡಿದ್ದ ಡಿಯಾಜಿಯೊ ಇಂಡಿಯಾ ಮಾಲೀಕತ್ವದ ಹಸ್ತಾಂತರಕ್ಕೆ ಮುಂದಾಗಿದೆ.

ಆರ್‌ಸಿಬಿ ಮಾರಾಟಕ್ಕೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಹಲವು ಉದ್ಯಮಿಗಳು ವಿಶ್ವದಲ್ಲೇ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ತಂಡವನ್ನು ಖರೀದಿಸಲು ಮುಂದಾದವು. ಈಗಲೂ ಈ ತಂಡವನ್ನು ಖರೀದಿಸುವರ ಪಟ್ಟಿಯಲ್ಲಿ ಜೀರೊಧಾದ ನಿಖಿಲ್ ಕಾಮತ್, ಅದಾನಿ ಗ್ರೂಪ್, ಜೆಎಸ್‌ಡಬ್ಲ್ಯೂ ಗ್ರೂಪ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಅದಾರ್ ಪೂನಾವಾಲಾ ಮುಂತಾದವರು ಎದ್ದು ಕಾಣಿಸುತ್ತಾರೆ. ಆದರೆ ಈ ಸಾಲಿಗೆ ಈಗ ಮತ್ತೊಂದು ಕರ್ನಾಟಕದ ಸಂಸ್ಥೆ ಎಂಟ್ರಿ ಆಗಿದೆ.
RCB ಬ್ರ್ಯಾಂಡ್ ವ್ಯಾಲ್ಯೂ ಎಷ್ಟು?
ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಗಗನಕ್ಕೆ ಏರಿದೆ. ಈ ತಂಡ ಸುಮಾರು 2 ಬಿಲಿಯನ್ ಯುಎಸ್ ಡಾಲರ್ ಮೌಲ್ಯವನ್ನು ಹೊಂದಿದೆ. ಇದನ್ನು ಖರೀದಿಸುವ ಆಸಕ್ತರು ಇದಕ್ಕಿಂತ ಹೆಚ್ಚು ಹಣ ನೀಡಬೇಕಾಗುತ್ತದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 17,732.30 ಕೋಟಿ ರೂಪಾಯಿಯನ್ನು ನೀಡಬೇಕಾಗುತ್ತದೆ.
ಮಾಲೀಕತ್ವ ಪಡೆಯಲು ಕರ್ನಾಟಕ ಸಂಸ್ಥೆ ಮನಸ್ಸು?
ಈಗಾಗಲೇ ಆರ್‌ಸಿಬಿ ತಂಡದ ಜೊತೆಗೆ ನಿಕಟವಾಗಿ ಕಾರ್ಯವನ್ನು ನಿರ್ವಹಿಸಿದ್ದ ಕರ್ನಾಟಕದ ಹೊಂಬಾಳೆ ಫಿಲ್ಮ್ಸ್ ಸಹ ತಂಡವನ್ನು ಖರೀದಿಸುವ ನಿಟ್ಟಿನಲ್ಲಿ ಕೈ ಹಾಕಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಆರ್‌ಸಿಬಿ ತಂಡದ ಡಿಜಿಟಲ್ ಪಾರ್ಟನ್ ಆಗಿದ್ದ ಹೊಂಬಾಳೆ, ಸಹ ಮಾಲೀಕರಾಗ ಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಭಾರತೀಯ ಚಿತ್ರನಿರ್ಮಾಣದಲ್ಲಿ ತನ್ನದೇ ಗುರುತನ್ನು ಹೊಂದಿರುವ ಹೊಂಬಾಳೆ, ಕೆಜಿಎಫ್, ಕಾಂತಾರ, ಸಲಾರ್ ಚಿತ್ರದಂತ ದೊಡ್ಡ ಚಿತ್ರಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದೆ. ಈಗ ಚಿತ್ರೋದ್ಯಮದಿಂದ, ಕ್ರೀಡಾ ಕ್ಷೇತ್ರದಲ್ಲೂ ತನ್ನ ಹೆಜ್ಜೆಯ ಗುರುತುಗಳನ್ನು ಮೂಡಿಸಲು ಸಂಸ್ಥೆ ಸಜ್ಜಾಗಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಇಷ್ಟಂತೂ ಸತ್ಯ ಆರ್‌ಸಿಬಿ ಮುಂದಿನ ಐಪಿಎಲ್‌ನಲ್ಲಿ ಹೊಸ ಮಾಲೀಕರೊಂದಿಗೆ ಕಣಕ್ಕೆ ಇಳಿಯಲಿದೆ. ಆಗ ತಂಡದ ಹಸರು ಏನಾಗಿರಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications