IPL 2025: ಐಪಿಎಲ್ ಉಳಿದ ಪಂದ್ಯ ನಡೆಯುವುದು ಯಾವಾಗ? ಎಲ್ಲಿ?
ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ದಾಳಿ ನಡೆದಿದ್ದು, ದೇಶದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುತ್ತಿದ್ದ ಶ್ರೀಮಂತ ಲೀಗ್ ಐಪಿಎಲ್ ಸಹ ರದ್ದಾಗಿದೆ. ಏಕಾಏಕಿ ಐಪಿಎಲ್ ರದ್ದು ಮಾಡಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಸದ್ಯ ಪರಿಸ್ಥಿತಿಗಳು ಕೈ ಮೀರುತ್ತಿರುವುದರಿಂದ ಈ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸಿದೆ. ಗುರುವಾರ ಧರ್ಮಶಾಲಾದಲ್ಲಿ ನಡೆದ ಐಪಿಎಲ್ ಪಂದ್ಯವನ್ನು 10.1 ಓವರ್‌ಗಳಿಗೆ ಸ್ಥಗಿತ ಗೊಳಿಸಲಾಯಿತು. ಈ ವೇಳೆ ಮುಂದಿನ ಪಂದ್ಯಗಳ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಅಪ್ರಯೋಜಕ ದಾಳಿ ನಡೆಸುತ್ತಿದ್ದಂತೆ ಭಾರತ ಅಲರ್ಟ್ ಆಗಿದೆ. ಅಲ್ಲದೆ ಪಾಕ್ ಉಡಾಯಿಸಿದ್ದ ಕ್ಷಿಪಣಿಗಳನ್ನು ಆಗಸದಲ್ಲಿ ಉಡಾಯಿಸಿದೆ. ಪಾಪಿ ಪಾಕಿಸ್ತಾನ ಬರೀ ಜಮ್ಮು ಅಷ್ಟೇ ಅಲ್ಲ, ರಾಜಸ್ಥಾನ, ಪಂಜಾಬ್ ಪ್ರಾಂತ್ಯಗಳಲ್ಲೂ ದಾಳಿ ನಡೆಸಿ ಕೈ ಸುಟ್ಟುಕೊಂಡಿದೆ. ಈ ವೇಳೆ ಭಾರತೀಯ ಸೇನೆ ನೀಡಿದ ಉತ್ತರಕ್ಕೆ ದೇಶವಾಸಿಗಳು ಬೆನ್ನು ತಟ್ಟಿದ್ದಾರೆ. ಪಾಕ್ ಒಂದು ಕಡೆಯಲ್ಲಿ ದಾಳಿ ನಡೆಸುತ್ತಿದ್ದಂತೆ ಬಿಸಿಸಿಐ ಧರ್ಮಶಾಲಾದಲ್ಲಿ ನಡೆದಿದ್ದ ಐಪಿಎಲ್ ಪಂದ್ಯಗಳನ್ನು ಸ್ಥಗಿತಗೊಳಿಸಿ ಆದೇಶವನ್ನು ಹೊರಡಿಸಿತು. ಅಲ್ಲದೆ ಮೈದಾನದ ಲೈಟ್ ಎಲ್ಲ ಆಫ್ ಮಾಡಿ ಅಭಿಮಾನಿಗಳಿಗೆ ಮನೆಗೆ ತೆರಳುವಂತೆ ಸೂಚಿಸಲಾಗಿತ್ತು.

ಶುಕ್ರವಾರ ಬಿಸಿಸಿಐ ಹಾಗೂ ಐಪಿಎಲ್ ಮಂಡಳಿಯ ಸಭೆ ನಡೆದ ಬಳಿಕ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ದೇಶದಲ್ಲಿನ ಸದ್ಯದ ಸ್ಥಿತಿಗಳನ್ನು ಕಂಡು ಬಿಸಿಸಿಐ ಐಪಿಎಲ್ ರದ್ದುಗೊಳಿಸಿ ಆದೇಶವನ್ನು ಹೊರಡಿಸಿದೆ. ಇದರಿಂದ 16 ಪಂದ್ಯಗಳನ್ನು ಮುಂದಿನ ದಿನಾಕ್ಕೆ ಶಿಫ್ಟ್ ಮಾಡುವುದಾಗಿ ಬಿಸಿಸಿಐ ತಿಳಿಸಿತ್ತು. ಆದರೆ ಯಾವಾಗ ನಡೆಯಬಹುದು ಎಂದು ಸ್ಪಷ್ಟ ಪಡಿಸಿರಲಿಲ್ಲ ಆದರೆ ಈಗ ಈ ಎಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮುಂದಿನ ಪಂದ್ಯಗಳು ಯಾವಾಗ?
ಶುಕ್ರವಾರ ಬೆಳಗ್ಗೆ ಬಿಸಿಸಿಐ ಐಪಿಎಲ್ ಪಂದ್ಯಗಳನ್ನು ರದ್ದು ಗೊಳಿಸಿ ಆದೇಶ ಹೊರಡಿಸಿದೆ. ಇನ್ನು ಮುಂದಿನ ಪಂದ್ಯಗಳು ನಡೆಯುವುದು ಯಾವಾಗ ಎಂಬ ಪ್ರಶ್ನೆಗೆ ಮುಂದಿನ ವಾರ ಬಿಸಿಸಿಐ ಪರಿಶೀಲನಾ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಆ ಸ್ಥಿತಿಯ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭಾರತ, ಪಾಕ್ ನಡುವಿನ ಉದ್ವಿಗ್ನತೆ ಒಂದು ವಾರದಲ್ಲಿ ಕಡಿಮೆ ಆದರೆ ಐಪಿಎಲ್ ಪಂದ್ಯಗಳು ಬಳಿಕ ಆರಂಭವಾಗುತ್ತವೆ. ಈ ಬಗ್ಗೆ ಮಾತನಾಡಿರವು ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಐಪಿಎಲ್ ಪಂದ್ಯಗಳನ್ನು ಒಂದು ವಾರ ರದ್ದುಗೊಳಿಸಲಾಗುವುದಾಗಿ ತಿಳಿಸಿದ್ದಾರೆ. ಹೊಸ ದಿನಾಂಕಗಳ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇನ್ನು ಬಿಸಿಸಿಐ ತನ್ನ ಮುಂದೆ ಪ್ಲ್ಯಾನ್ ಬಿ ಸಹ ಇಟ್ಟುಕೊಂಡಿದೆ. ಬಿಸಿಸಿಐ ಸ್ಥಳ ಬದಲಾವಣೆಗೆ ಸಹ ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಆದರೆ ಈ ನಿರ್ಧಾರವನ್ನು ಬಿಸಿಸಿಐ ಕೈ ಬಿಟ್ಟಂತೆ ಕಾಣುತ್ತಿದೆ. ಹೀಗಾಗಿ ಸರ್ಕಾರದ ಜೊತೆಗೆ ಸಮಾಲೋಚನೆ ಮಾಡಿ ತೀರ್ಮಾನ ಪ್ರಕಟಿಸಲಾಗುವುದು ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications