Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs SRH IPL 2025: ವಿಲ್‌ ಜಾಕ್ಸ್‌ ಆಲ್‌ರೌಂಡರ್‌ ಆಟ, ಮುಂಬೈಗೆ ಮೂರನೇ ಜಯ

ಭರವಸೆಯ ಆಲ್‌ರೌಂಡರ್‌ ವಿಲ್‌ ಜಾಕ್ಸ್‌ (36 ರನ್, 14ಕ್ಕೆ 2) ಇವರ ಅಮೋಘ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್‌ 18ನೇ ಆವೃತ್ತಿಯ 33ನೇ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮಣಿಸಿ, ಪ್ರಸಕ್ತ ಲೀಗ್‌ನಲ್ಲಿ ಮೂರನೇ ಗೆಲುವು ದಾಖಲಿಸಿದೆ.

ಮೊದಲ ಬ್ಯಾಟ್ ಮಾಡಿದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ 18.1 ಓವರ್‌ಗಳಲ್ಲಿ 166 ರನ್‌ ಸೇರಿಸಿ ಜಯ ಸಾಧಿಸಿತು. ಮುಂಬೈ ಇಂಡಿಯನ್ಸ್ ಈ ಗೆಲುವಿನ ಮೂಲಕ ಆಡಿರುವ ಏಳು ಪಂದ್ಯಗಳಲ್ಲಿ ಮೂರು ಜಯ, 4 ಸೋಲು ಕಂಡಿದ್ದು ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರಾಳಿ ಅಂಗಳದಲ್ಲಿ ಮೊದಲ ಜಯದ ಕನಸು ಕಮರಿದೆ. ಎಸ್‌ಆರ್‌ಎಚ್‌ ಆಡಿದ 7 ಪಂದ್ಯಗಳಲ್ಲಿ 2 ಜಯ ಸಾಧಿಸಿದ್ದು, 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.

Will Jacks Shines as Mumbai Indians Defeat Sunrisers Hyderabad for Third Win in IPL 2025

ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕರಾದ ರೋಹಿತ್ ಶರ್ಮಾ ಆರ್ಭಟ ನಡೆಸುವ ಸೂಚನೆ ನೀಡಿದರು. ರೋಹಿತ್ ಹಾಗೂ ರಿಯಾನ್ ರಿಕಲ್ಟನ್‌ ಜೋಡಿ ಮೊದಲ ವಿಕೆಟ್‌ಗೆ 32 ರನ್‌ ಸೇರಿಸಿತು. ರೋಹಿತ್ ಶರ್ಮಾ 16 ಎಸೆತಗಳಲ್ಲಿ 3 ಸಿಕ್ಸರ್ ನೆರವಿನಿಂದ 26 ರನ್‌ ಬಾರಿಸಿ ಬಿಗ್‌ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಇವರ ಆಟಕ್ಕೆ ನಾಯಕ ಪ್ಯಾಟ್‌ ಕಮಿನ್ಸ್‌ ಬ್ರೇಕ್ ಹಾಕಿದರು. ಇನ್ನೋರ್ವ ಆರಂಭಿಕ ಆಟಗಾರ ರಿಯಾನ್ ರಿಕಲ್ಟನ್‌ 5 ಬೌಂಡರಿ ನೆರವಿನಿಂದ 31 ರನ್‌ ಬಾರಿಸಿ ಔಟ್ ಆದರು.

ಅರ್ಧಶತಕದ ಜೊತೆಯಾಟ

ಮೂರನೇ ವಿಕೆಟ್‌ಗೆ ವಿಲ್‌ ಜಾಕ್ಸ್‌ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 29 ಎಸೆತಗಳಲ್ಲಿ 52 ರನ್‌ ಸಿಡಿಸಿತು. ಸೂರ್ಯಕುಮಾರ್ ಯಾದವ್ 15 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 26 ರನ್‌ ಸಿಡಿಸಿದರು. ಇನ್ನು ಆಲ್‌ರೌಂಡರ್‌ ವಿಲ್‌ ಜಾಕ್ಸ್‌ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 36 ರನ್‌ ಬಾರಿಸಿ ಮಿಂಚಿದರು.ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 21 ರನ್‌ ಸಿಡಿಸಿದರು. ತಿಲಕ್ ವರ್ಮಾ ಅಜೇಯ 21 ರನ್‌ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಎಸ್‌ಆರ್‌ಎಚ್‌ ತಂಡದ ಪರ ಪ್ಯಾಟ್‌ ಕಮಿನ್ಸ್‌ 3, ಈಶಾನ್‌ ಮಲಿಂಗಾ 2 ವಿಕೆಟ್‌ ಕಬಳಿಸಿದರು.

ವಿಲ್‌ ಜಾಕ್ಸ್ ಹೀರೋ

ಮುಂಬೈ ಇಂಡಿಯನ್ಸ್‌ ತಂಡದ ಮೂರನೇ ಗೆಲುವಿನಲ್ಲಿ ಆರ್‌ಸಿಬಿ ತಂಡದ ಮಾಜಿ ಆಟಗಾರ ವಿಲ್ ಜಾಕ್ಸ್ ಹೀರೋ ಆಗಿ ಮಿಂಚಿದರು. ಇವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಾ ಬೇಡವಾ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ ಜಾಕ್ಸ್‌ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿ ತಂಡಕ್ಕೆ ನೆರವಾದರು. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಜಾಕ್ಸ್‌, ಟೀಕಾಕಾರಿಗೆ ತಕ್ಕ ಉತ್ತರವನ್ನು ನೀಡಿದರು. ಇವರ ಅಮೋಘ ಆಟದ ಫಲವಾಗಿಯೇ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಬಂದಿತು.

ಉತ್ತಮ ಆರಂಭ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆದರೆ ಸನ್‌ ತಂಡದ ಆರಂಭಿಕರಾದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡುದರು. ಈ ಜೋಡಿ ವಿಕೆಟ್‌ ಕಾಯ್ದುಕೊಂಡು ಬ್ಯಾಟ್ ಮಾಡುವ ಭರಾಟೆಯಲ್ಲಿ ರನ್‌ಗಳನ್ನು ಹಿಗ್ಗಿಸುವಲ್ಲಿ ವಿಫಲವಾಯಿತು. ಈ ಬ್ಯಾಟರ್‌ಗಳಿಗೆ ಮುಂಬೈ ಬೌಲರ್‌ಗಳು ಸುಲಭವಾಗಿ ರನ್‌ಗಳನ್ನು ನೀಡಲೇ ಇಲ್ಲ. ಈ ಜೋಡಿ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ 59 ರನ್‌ ಸಿಡಿಸಿತು. ಆರಂಭಿಕರಾದರ ಅಭಿಷೇಕ್‌ ಶರ್ಮಾ 40, ಟ್ರಾವಿಸ್ ಹೆಡ್‌ 28 ರನ್‌ ಸಿಡಿಸಿ ಔಟ್ ಆದರು.

Will Jacks Shines as Mumbai Indians Defeat Sunrisers Hyderabad for Third Win in IPL 2025

ಇದೇ ಮೊದಲ ಬಾರಿಗೆ ಇಶಾನ್‌ ಕಿಶನ್‌ ಮುಂಬೈ ಬಿಟ್ಟು ಬೇರೆ ತಂಡದ ಪರ ಆಡುವಾಗ ಎಲ್ಲರ ಚಿತ್ತ ಕದ್ದಿದ್ದರು ಆದರೆ ಇವರು ವಿಲ್‌ ಜಾಕ್ಸ್‌ ಎಸೆತದಲ್ಲಿ ಬಿಗ್ ಹಿಟ್ ಬಾರಿಸುವಲ್ಲಿ ವಿಫಲರಾಗಿ ಸ್ಟಂಪ್‌ ಔಟ್ ಆದರು. ನಿತೀಶ್‌ ಕುಮಾರ್‌ ರೆಡ್ಡಿ 19, ಹೆನ್ರಿಕ್‌ ಕ್ಲಾಸೇನ್‌ 37 ರನ್‌ ಸಿಡಿಸಿದರು. ಅನಿಕೇತ್ ವರ್ಮಾ ಅಜೇಯ 18, ಪ್ಯಾಟ್ ಕಮಿನ್ಸ್‌ ಅಜೇಯ 8 ರನ್‌ ಸಿಡಿಸಿದರು. ಕೊನೆಯ 3 ಓವರ್‌ಗಳಲ್ಲಿ ಸನ್‌ 47 ರನ್ ಸಿಡಿಸಿತು.

ಮುಂಬೈ ತಂಡದ ಪರ ವಿಲ್‌ ಜಾಕ್ಸ್‌ 2 ವಿಕೆಟ್‌ ಕಿತ್ತರು. ಉಳಿದಂತೆ ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

Story first published: Thursday, April 17, 2025, 23:28 [IST]
Other articles published on Apr 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+