ಕೇನ್ ವಿಲಿಯಮ್ಸನ್ ಬಿಟ್ಟುಕೊಡುತ್ತಾ ಹೈದರಾಬಾದ್? ವಾರ್ನರ್ ಮಾಹಿತಿ

ನವದೆಹಲಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು 2021ರ ಐಪಿಎಲ್ ಆಯೋಜಿಸುವತ್ತ ಮುನ್ನಡೆಯುತ್ತಿದೆ. 20201ರ ಐಪಿಎಲ್ ಏಪ್ರಿಲ್-ಮೇ ಮಧ್ಯೆ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಸುಳಿವು ನೀಡಿದ್ದಾರೆ.
ಮುಂಬರುವ ಐಪಿಎಲ್‌ನಲ್ಲಿ ಒಂದು ಹೆಚ್ಚುವರಿ ತಂಡ ಕಾಣಿಸಿಕೊಳ್ಳಲಿದೆ ಎಂಬ ಮಾತುಗಳೂ ಕೇಳಿ ಬಂದಿದೆ. ವರದಿಗಳ ಪ್ರಕಾರ 14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಆಟಗಾರರ ಹರಾಜು ನಡೆಯಲಿದೆ. ಹರಾಜು ನಡೆಯುವುದೇ ಆದರೆ ಹೆಚ್ಚಿನ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿನ ಆಟಗಾರರನ್ನು ಬದಲಿಸಿಕೊಳ್ಳಲಿವೆ.
ಮಾಜಿ ಚಾಂಪಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಮಹತ್ವದ ಬದಲಾವಣೆಯಾಗುವ ನಿರೀಕ್ಷೆಯಿದೆ. ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ರಶೀದ್ ಖಾನ್ ಸ್ಥಿರ ಪ್ರದರ್ಶನ ನೀಡಿದ್ದರು. ಅವರು ತಂಡದಲ್ಲಿ ಉಳಿದರೆ, ಬಹಳಷ್ಟು ವರ್ಷಗಳಿಂದ ತಂಡದ ಸಂರಕ್ಷಕರಾಗಿರುವ ಕೇನ್ ವಿಲಿಯಮ್ಸನ್ ಅವರನ್ನು ಎಸ್‌ಆರ್‌ಎಚ್ ಬಿಟ್ಟುಕೊಡುವ ಸಾಧ್ಯತೆಯಿದೆ.
ಕಳೆದ ಹರಾಜಿನ ವೇಳೆ ತಂಡಗಳಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರಿಗಷ್ಟೇ ಉಳಿಸಿಕೊಳ್ಳಲು ಅನುಮತಿ ನೀಡಲಾಗಿತ್ತು. ಹಾಗಾದರೆ ವಿಲಿಯಮ್ಸನ್ ಅವರನ್ನು ಎಸ್‌ಆರ್‌ಎಚ್ ಕಳೆದುಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ವಾರ್ನರ್ ಉತ್ತರಿಸಿದ್ದಾರೆ. 'ಅವರನ್ನು ನಾವು ಕಳೆದುಕೊಳ್ಳುವುದಿಲ್ಲ. ನಾವು ಅವರನ್ನು ಉಳಿಸಿಕೊಳ್ಳುತ್ತೇವೆ. ಚಿಂತೆ ಮಾಡಬೇಡಿ. ಅವರು ನಮಗೆ ಬೇಕಿದೆ,' ಎಂದು ವಾರ್ನರ್ ಉತ್ತರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications