ಫಲಿಸುತ್ತಾ 2851 ದಿನಗಳ ಪೂಜಾ ಫಲ: ಟೀಮ್ ಇಂಡಿಯಾ ಎಂಟ್ರಿಗೆ ಮುಹೂರ್ತ ಫಿಕ್ಸ್
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಮೊದಲು ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೂರ್ನಿಯಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲು ಅದೆಷ್ಟೋ ಆಟಗಾರರು ಪ್ಲ್ಯಾನ್ ಮಾಡಿದ್ದಾರೆ. ಆದರೆ ಅದರಲ್ಲಿ ಕರ್ನಾಟಕದ ಒಬ್ಬ ಆಟಗಾರನ ಕನಸು ಈಡೇರುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ.
ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ವಿದರ್ಭ ಪರ ಬ್ಯಾಟ್ ಮಾಡುವ ಈ ಪ್ಲೇಯರ್ ತನ್ನ ಆಟವನ್ನು ಅಪ್‌ಡೇಟ್ ಮಾಡಿಕೊಂಡಿದ್ದಾರೆ. ಪ್ರಸಕ್ತ ದೇಶೀಯ ಟೂರ್ನಿಯಲ್ಲಿ ಇವರ ಅಪ್‌ಡೇಟ್ ವರ್ಷನ್ ರಿಲೀಸ್ ಆಗಿದೆ. ಈ ವರ್ಷನ್‌ಗೆ ಯಾವುದೇ ಆಂಟಿ ವಾಯಿರಸ್ ಬಾದೆಗಳು ಕಾಡುವುದಿಲ್ಲ. ಅಷ್ಟು ಸುರಕ್ಷಿತವಾಗಿದೆ. ಕಾರಣ ಇವರು ದೇಶೀಯ ಏಕದಿನ ಸರಣಿಯಲ್ಲಿ ಆಡುತ್ತಿರುವ ಧಾಟಿ ನಿಜಕ್ಕೂ ಬಿಸಿಸಿಐ ಆಯ್ಕೆ ದಾರರ ಗಮನ ಸೆಳೆದಿದೆ. ವಿದರ್ಭ ತಂಡದ ನಾಯಕ ಕರುಣ್ ನಾಯರ್ ಅವರ 1965 ದಿನಗಳ ಪುಜೆಗೆ ಫಲ ಲಭಿಸುವ ಕಾಲ ಸನ್ನಿಹಿತವಾಗಿದೆ.

ಕಂ ಬ್ಯಾಕ್ ಕನಸಿನಲ್ಲಿ ಕರ್ನಾಟಕದ ಆಟಗಾರ
ಚಾಂಪಿಯನ್ಸ್ ಟ್ರೋಫಿಗೆ ವೇದಿಕೆ ಎಂತೆ ಕಂಡು ಬರುತ್ತಿರುವ ಇಂಗ್ಲೆಂಡ್ ವಿರುದ್ದದ ಟೂರ್ನಿಯಲ್ಲಿ ಕರುಣ್ ನಾಯರ್‌ಗೆ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ವರದಿಗಳು ಹೇಳುತ್ತಿವೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ನಾಯರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 33 ವರ್ಷದ ಕರುಣ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಒಮ್ಮೆ ಮಾತ್ರ ಔಟ್ ಆಗಿದ್ದಾರೆ. ಇನ್ನು ಸರಣಿಯಲ್ಲಿ ಐದು ಶತಕ ಬಾರಿಸಿ ಅಬ್ಬರಿಸಿದ್ದಾರೆ.
ದೇಶೀಯ ಟೂರ್ನಿಯಲ್ಲಿ ನೀಡುತ್ತಿರುವ ಅಮೋಘ ಪ್ರದರ್ಶನ ಇವರನ್ನು ಟೀಮ್ ಇಂಡಿಯಾದ ಬಾಗಿಲಿಗೆ ತಂದು ನಿಲ್ಲಿಸಿದೆ. ಈಗಾಗಲೇ 6 ಟೆಸ್ಟ್ ಹಾಗೂ ಎರಡು ಏಕದಿನ ಪಂದ್ಯವನ್ನು ಆಡಿರುವ ಕರುಣ್, ತಮ್ಮ ಪಂದ್ಯಗಳ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ. ಇವರು ಕೊನೆಯ ಬಾರಿಗೆ ಭಾರತದ ಪರ 2017ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

2851 ದಿನಗಳ ಬಳಿಕ ತಂಡಕ್ಕೆ?
ಕರುಣ್ ನಾಯರ್ ಯಾವ ತಂಡದ ವಿರುದ್ಧ ಪದಾರ್ಪಣೆ ಮಾಡಿದ್ದರೋ, ಅದೇ ತಂಡದ ವಿರುದ್ಧ ಕಂ ಬ್ಯಾಕ್ ಮಾಡುವ ಕನಸಿನಲ್ಲಿದ್ದಾರೆ. ಕರುಣ್ 2016 ನವೆಂಬರ್ 26 ರಂದು ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಇವರು ಕಂ ಬ್ಯಾಕ್‌ನ್ನು ಸಹ ಇದೇ ತಂಡದ ವಿರುದ್ಧ ಮಾಡುವ ಇರಾದೆ ಹೊಂದಿದ್ದಾರೆ. ಅಲ್ಲದೆ ದೇಶೀಯ ಟೂರ್ನಿಯಲ್ಲಿನ ತಮ್ಮ ಅಮೋಘ ಫಾರ್ಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮುಂದುವರೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಕರುಣ್ ನಾಯರ್ ಭಾರತದ ಪರ ಮಾರ್ಚ್ 28 ರಂದು ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಈ ವರೆಗೆ ತಂಡಕ್ಕೆ ಕಂ ಬ್ಯಾಕ್ ಮಾಡಲು ಹರಸಾಹಸ ಪಟ್ಟಿದ್ದಾರೆ. ಅವರ ಶ್ರಮಕ್ಕೆ ಈಗ ಪ್ರತಿಫಲ ಸಿಗುವ ಲಕ್ಷಣಗಳು ಕಾಣುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications