For Quick Alerts
ALLOW NOTIFICATIONS  
For Daily Alerts
 

IPL 2025: ಕೆಕೆಆರ್‌ಗೆ ಭಾರವಾಗುತ್ತಿದ್ದಾರೆ ದುಬಾರಿ ಆಟಗಾರ: ಯಾರನ್ನು ತಂಡ ಉಳಿಸಿಕೊಳ್ಳಬಹುದು?

ಐಪಿಎಲ್‌ 2024ರ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್‌), ಮುಂದಿನ ಆವೃತ್ತಿಗೆ ಸಿದ್ಧತೆ ನಡೆಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಯಾವೆಲ್ಲಾ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ಸಿಗಲಿದೆ. ಈ ತಂಡಕ್ಕೆ ಆಟಗಾರರನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ.

ಚಾಂಪಿಯನ್‌ ಆಟಗಾರರನ್ನೇ ತನ್ನ ಒಡಲಿನಲ್ಲಿ ಹೊಂದಿರುವ ಕೆಕೆಆರ್‌, ಮೂರು ಬಾರಿ ಪ್ರಶಸ್ತಿಗೆ ಮುತ್ತಿಟಿದೆ. ಈ ನಿಟ್ಟಿನಲ್ಲಿ ಅಳೆದು ತೂಗಿ ತಂಡವನ್ನು ಕಟ್ಟುವ ಜವಾಬ್ದಾರಿ ಮ್ಯಾನೇಜ್ಮೆಂಟ್ ಮೇಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಯಾವೆಲ್ಲಾ ಆಟಗಾರರನ್ನು ಕೆಕೆಆರ್‌ ತಂಡ ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇನ್ನು ತಂಡದಲ್ಲಿರುವ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್‌ ಅವರನ್ನು ತಂಡ ರಿಲೀಸ್ ಮಾಡುತ್ತದೋ ಎಂಬುದು ಕುತೂಹಲ ಮೂಡಿಸಿದೆ.

Will KKR Retain Mitchell Starc for IPL 2025 The Big Question on the Aussie Pacer s Future

ಸ್ಟಾರ್ಕ್‌ ದುಬಾರಿ ಆಟಗಾರ

ಐಪಿಎಲ್‌ 2024 ಹರಾಜು ಪ್ರಕ್ರಿಯೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಿಚೆಲ್‌ ಸ್ಟಾರ್ಕ್‌ ಅವರನ್ನು ಭಾರೀ ಮೊತ್ತ ದಾಖಲಿಸಿ ತಂಡಕ್ಕೆ ಬರಮಾಡಿಕೊಂಡಿತ್ತು. ಈ ವೇಳೆ 24.75 ಕೋಟಿ ರೂಪಾಯಿ ನೀಡಿ ಸ್ಟಾರ್ಕ್‌ ಅವರನ್ನು ಖರೀದಿಸಿತ್ತು. ಆದರೆ ಇವರು ತಂಡಕ್ಕೆ ಭಾರವಾಗುತ್ತಿದ್ದಾರೆ. ಇವರನ್ನು ರಿಲೀಸ್ ಮಾಡಬಹುದು ಎಂಬ ಸಂಶಯ ಆರಂಭವಾಗಿದೆ. ಕಳೆದ ಆವೃತ್ತಿಯಲ್ಲಿ ಮಿಚೆಲ್‌ ಸ್ಟಾರ್ಕ್‌ ಪ್ರದರ್ಶನ ನಿರಾಶಾದಾಯಕವಾಗಿತ್ತು. ಆದರೆ ಮಹತ್ವದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಇವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಾ ಎಂಬ ಸಂಶಯ ಮೂಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಸ್ಟಾರ್ ಆಟಗಾರರನ್ನು ಇಟ್ಟುಕೊಂಡು ಉಳಿದ ಆಟಗಾರರನ್ನು ರಿಲೀಸ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಲೀಸ್ಟ್‌ನಲ್ಲಿ ಹಲವು ಯುವ ಆಟಗಾರರು ಇದ್ದಾರೆ. ಅಲ್ಲದೆ ಅನುಭವಿಗಳು ಇದ್ದಾರೆ.

ಸುನಿಲ್ ನರೈನ್

ಕೆಕೆಆರ್‌ ತಂಡದ ಟ್ರಂಪ್‌ ಕಾರ್ಡ್‌ ಪ್ಲೇಯರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಆಟಗಾರ ಸುನಿಲ್ ನರೈನ್‌. ಇವರು ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡಕ್ಕೆ ನೆರವಾಗಬಲ್ಲ ಆಟಗಾರ. ಅಲ್ಲದೆ ಇವರು ಬಹುದಿನಗಳಿಂದ ತಂಡದ ಭಾಗವಾಗಿದ್ದು, ಇವರನ್ನು ಯಾವುದೇ ಕಾರಣಕ್ಕೂ ಕೆಕೆಆರ್‌ ಬಿಟ್ಟುಕೊಡುವ ಯೋಚನೆ ಮಾಡುವುದಿಲ್ಲ.

ಆಂಡ್ರೆ ರಸೆಲ್

ಐಪಿಎಲ್‌ ಇತಿಹಾಸದ ಸ್ಟಾರ್ ಆಲ್‌ರೌಂಡರ್‌ಗಳ ಪಟ್ಟಿಯನ್ನು ನೋಡಿದಾಗ, ಎದ್ದು ಕಾಣುವ ಹೆಸರು ವೆಸ್ಟ್‌ ಇಂಡೀಸ್‌ನ ದೈತ್ಯ ಆಟಗಾರ ಆಂಡ್ರೆ ರಸೆಲ್‌. ಇವರು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್‌. ಅಲ್ಲದೆ ದೊಡ್ಡ ಇನ್ನಿಂಗ್ಸ್‌ ಕಟ್ಟಲು ಇವರು ಹೆಸರುವಾಸಿ. ಡೆತ್‌ ಓವರ್‌ಗಳಲ್ಲಿ ಇವರು ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆಯನ್ನು ಹೊಂದಿದ್ದರಿಂದ ಕೆಕೆಆರ್‌ ಇವರನ್ನು ರಿಲೀಸ್ ಮಾಡುವ ಯೋಚನೆ ಮಾಡುವುದಿಲ್ಲ.

Will KKR Retain Mitchell Starc for IPL 2025 The Big Question on the Aussie Pacer s Future

ಶ್ರೇಯಸ್ ಅಯ್ಯರ್

ಕೆಕೆಆರ್‌ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿದ ನಾಯಕ ಶ್ರೇಯಸ್ ಅಯ್ಯರ್. ಇವರನ್ನು ಮ್ಯಾನೇಜ್ಮೆಂಟ್‌ ಬಿಟ್ಟುಕೊಡುವ ಲಕ್ಷಣಗಳೇ ಇಲ್ಲ. ಇಷ್ಟೇ ಅಲ್ಲದೆ ತಂಡಕ್ಕೆ ಚಾಂಪಿಯನ್‌ ಪಟ್ಟ ತೊಡಿಸಿದ ಎರಡನೇ ನಾಯಕ. ಇವರು ಬ್ಯಾಟಿಂಗ್‌ನಲ್ಲಿ ತಮ್ಮ ಛಾಪು ಬಿಡುವಲ್ಲಿ ವಿಫಲರಾದರೂ, ನಾಯಕತ್ವದ ಗುಣಗಳಿಂದ ಗಮನ ಸೆಳೆದಿದ್ದಾರೆ.

ವೆಂಕಟೇಶ ಅಯ್ಯರ್

ಕೆಕೆಆರ್‌ ತಂಡದ ಟಾಪ್‌ ಆರ್ಡರ್‌ ಬ್ಯಾಟರ್‌ಗಳನ್ನು ಒಮ್ಮೆ ನೋಡಿದಾಗ ಎದ್ದು ಕಾಣುವ ಪ್ಲೇಯರ್‌ ವೆಂಕಟೇಶ್‌ ಅಯ್ಯರ್‌. ಇವರು ಬ್ಯಾಟಿಂಗ್ ಹೊರತು ಪಡಿಸಿ, ಕೆಲವು ಓವರ್‌ ಬೌಲಿಂಗ್ ಸಹ ಮಾಡಬಲ್ಲರು. ಇವರನ್ನು ತಂಡ ಬಿಟ್ಟುಕೊಡುವ ಸಾಧ್ಯತೆ ತೀರಾ ಕಡಿಮೆ.

ರಿಂಕು ಸಿಂಗ್

ಮಿಡ್ಲ್‌ ಆರ್ಡರ್‌ನಲ್ಲಿ ಫಿನಿಶರ್‌ ರೋಲ್‌ ಪ್ಲೇ ಮಾಡುವ ಇಂಡಿಯನ್ ಪ್ಲೇಯರ್‌ ರಿಂಕು ಸಿಂಗ್‌. ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಇವರು ಹೆಸರುವಾಸಿ. ಕಳೆದ ಆವೃತ್ತಿಯಲ್ಲಿ ಇವರು ಮನಮೋಹಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿಬಹುದು. ಆದರೆ ಹಿಂದಿನ ಪ್ರದರ್ಶನಗಳನ್ನು ಗಮನಿಸಿದರೆ, ಇವರನ್ನು ಕೈ ಬಿಡುವ ಯೋಚನೆಯನ್ನು ತಂಡ ಮಾಡುವುದಿಲ್ಲ. ಮಾಡಿದರೆ ತಂಡಕ್ಕೆ ದೊಡ್ಡ ಪೆಟ್ಟು ಬೀಳಲಿದೆ.

ವರುಣ್ ಚಕ್ರವರ್ತಿ

ತಮ್ಮ ಸ್ಪಿನ್ ಬೌಲಿಂಗ್ ಮೂಲಕವೇ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲ ಸ್ಪಿನ್ ಬೌಲರ್‌ ವರುಣ್‌ ಚಕ್ರವರ್ತಿ. ಇವರು ಮಿಡ್ಲ್‌ ಓವರ್‌ಗಳೇ ಆಗಿರಲಿ, ಪವರ್‌ ಪ್ಲೇ ಆಗಿರಲಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್‌ ಬೇಟೆ ನಡೆಸಬಲ್ಲರು. ಇವರ ಹಲವು ಬಾರಿ ತಂಡದ ಗೆಲುವಿನಲ್ಲಿ ಮಿಂಚಿದ್ದು, ಇವರ ಸ್ಥಾನ ಫಿಕ್ಸ್‌ ಎಂದು ನಂಬಲಾಗಿದೆ.

Story first published: Saturday, August 17, 2024, 21:16 [IST]
Other articles published on Aug 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+