For Quick Alerts
ALLOW NOTIFICATIONS  
For Daily Alerts
 

Mohammed Shami: ಚಾಂಪಿಯನ್ಸ್‌ ಟ್ರೋಫಿಗೆ ಫಿಟ್ ಆಗುತ್ತಾರಾ ಮೊಹಮ್ಮದ್‌ ಶಮಿ?

ಪಾಕಿಸ್ತಾನ ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಿದೆ. ಆದರೆ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಪಿಸಿಬಿ ಒಪ್ಪಿಗೆ ನೀಡಿದೆ. ಭಾರತ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ. ಭಾರೀ ಕುತೂಹಲ ಮೂಡಿಸಿರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗಿದೆ. ಇದೇ ವೇಳೆ ಟೀಮ್ ಇಂಡಿಯಾದ ಪರ ಆ ಸ್ಟಾರ್ ಬೌಲರ್‌ ಕಣಕ್ಕೆ ಇಳಿಯುತ್ತಾನಾ ಎಂಬ ಪ್ರಶ್ನೆ ಉದ್ಭವಿಸಿದೆ.

ಟೀಮ್ ಇಂಡಿಯಾದ ಚಾಂಪಿಯನ್‌ ಬೌಲರ್‌ ಕಳೆದ ಒಂದು ವರ್ಷದಿಂದ ಮೈದಾನದಿಂದ ದೂರ ಉಳಿದಿದ್ದಾರೆ. ಈ ಸ್ಟಾರ್ ಬೌಲರ್‌ ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಆದರೆ ಇವರು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್ ಬಳಿಕ ಈ ಸ್ಟಾರ್ ಪ್ಲೇಯರ್ ಮೈದಾನದಿಂದ ಹೊರಗುಳಿದಿದ್ದಾರೆ. ಇದಕ್ಕೆ ಕಾರಣ ಆ ಪ್ಲೇಯರ್‌ ಕಾಡಿದ ಗಾಯ. ಆ ಸ್ಟಾರ್ ಬೌಲರ್‌ ಬೇರೆ ಯಾರು ಅಲ್ಲ ಮೊಹಮ್ಮದ್ ಶಮಿ. ಗಾಯದಿಂದ ಚೇತರಿಸಿಕೊಂಡಿರುವ ಶಮಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.

Will Mohammed Shami Be Fit for ICC Champions Trophy 2025

ಮೊಹಮ್ಮದ್ ಶಮಿ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಗಾಯದ ಕಾರಣದಿಂದ ಇವರು ಹಲವು ದಿನಗಳಿಂದ ಮೈದಾನದಿಂದ ದೂರ ಉಳಿದಿದ್ದಾರೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಶಮಿ ಬಹು ದಿನಗಳ ಬಳಿಕ ಚೇತರಿಸಿಕೊಂಡು, ಎನ್‌ಸಿಎನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು. ಈ ವೇಳೆ ಅವರು ರಾಷ್ಟ್ರೀಯ ತಂಡಕ್ಕೆ ಬರುವ ಮುನ್ನ ದೇಶೀಯ ಟೂರ್ನಿಯಲ್ಲಿ ಆಡುವ ಬಗ್ಗೆ ಇಂಗಿತ ವ್ಯಕ್ತ ಪಡಿಸಿದ್ದರು. ಅದರಂತೆ ರಣಜಿ ಟೂರ್ನಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈ ವೇಳೆ ಫಿಟ್ನೆಸ್‌ ಬಗ್ಗೆ ಪ್ರಶ್ನೆಗಳು ಎದ್ದಿದವು. ಇದೇ ಕಾರಣಕ್ಕೆ ಬಾರ್ಡರ್ ಗವಾಸ್ಕರ್ ಸರಣಿಯಿಂದ ಇವರನ್ನು ದೂರ ಇಡಲಾಯಿತು.

ಶಮಿ ಸಂಪೂರ್ಣವಾಗಿ ಫಿಟ್ ಆಗಿವುದು ಟೀಮ್ ಇಂಡಿಯಾಕ್ಕೆ ಮಹತ್ವದಾಗಿದೆ. ICC ಚಾಂಪಿಯನ್ಸ್ ಟ್ರೋಫಿ 2025 ರ ವೇಳೆಗೆ ಮೊಹಮ್ಮದ್ ಶಮಿ ಸಂಪೂರ್ಣವಾಗಿ ಫಿಟ್ ಆಗುತ್ತಾರಾ ಎಂದು ಭಾರತೀಯ ಅಭಿಮಾನಿಗಳು ಭಾವಿಸಿದ್ದಾರೆ. ಆದರೆ ಭಾರತ ತಂಡಕ್ಕೆ ನಿಜವಾಗಿಯೂ ಮೊಹಮ್ಮದ್ ಶಮಿ ಅವರ ಬೌಲಿಂಗ್‌ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆಗಳು ಎದ್ದಿವೆ.

Will Mohammed Shami Be Fit for ICC Champions Trophy 2025

ಮೊಹಮ್ಮದ್ ಶಮಿ ತಂಡ ಸೇರುತ್ತಾರಾ?

ಮೊಹಮ್ಮದ್ ಶಮಿ ಇಲ್ಲಿಯವರೆಗೆ 101 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 195 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಶಮಿ 5.55 ರ ಏಕನಾಮಿಯಲ್ಲಿ ರನ್‌ ನೀಡಿದ್ದಾರೆ. ಏಕದಿನ ಮಾದರಿಯಲ್ಲಿ ಮೊಹಮ್ಮದ್ ಶಮಿ ಅವರ ದಾಖಲೆ ಅತ್ಯುತ್ತಮವಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಮೊಹಮ್ಮದ್ ಶಮಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾಗವಾದರೆ, ಇವರು ಎದುರಾಳಿ ಬ್ಯಾಟರ್‌ಗಳಿಗೆ ಕಾಡಬಹುದು. ಮೊಹಮ್ಮದ್ ಶಮಿ ಕೊನೆಯ ಬಾರಿಗೆ 2023 ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಕಣಕ್ಕೆ ಇಳಿದಿದ್ದರು.

Story first published: Friday, December 27, 2024, 11:39 [IST]
Other articles published on Dec 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+