ಟೀಮ್ ಇಂಡಿಯಾದಲ್ಲಿ ಮಿಂಚಿ ಮರೆಯಾದ ಸ್ಟಾರ್ ಆಟಗಾರರ ಸಂಖ್ಯೆ ಬಹಳಷ್ಟಿದೆ. ಹಲವು ಸ್ಟಾರ್ ಆಟಗಾರರಿಗೆ ಹೋಲುವ ರೀತಿಯಲ್ಲಿ ಆಡುವ ಆಟಗಾರರು ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಒಬ್ಬ ಸ್ಫೋಟಕ ಬ್ಯಾಟರ್ ಸ್ಥಾನ ಯಾರು ತುಂಬಿದಿಲ್ಲ ಎಂಬ ಚಿಂತೆ ಅಭಿಮಾನಿಗಳಿಗೆ ಬಹುವಾಗಿ ಕಾಡಿತ್ತು. ಆದರೆ ಆ ಸ್ಫೋಟಕ ಬ್ಯಾಟರ್ ಸ್ಥಾನವನ್ನು ತುಂಬಲು ಆ ಯುವ ಆಟಗಾರ ರೆಡಿ ಆದರು.
ವೀರೇಂದ್ರ ಸೆಹ್ವಾಗ್, ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಇವರ ಬ್ಯಾಟಿಂಗ್ ಧಾಟಿ ಕಂಡು ಎದುರಾಳಿಗಳು ಕಾಂಗಾಲಾಗಿದ್ದರು. ಇನಿಂಗ್ಸ್‌ನ ಮೊದಲ ಎಸೆತದಿಂದ ಸೆಹ್ವಾಗ್ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕುತ್ತಿದ್ದ ಆಟಗಾರ. ಇವರ ಸ್ಥಾನವನ್ನು ತುಂಬುವುದು ಸುಲಭದ ಮಾತಾಗಿರಲಿಲ್ಲ. ಈ ಸ್ಥಾನ ಟೀಮ್ ಇಂಡಿಯಾದಲ್ಲಿ ಬಹುದಿನಗಳ ಕಾಲ ಖಾಲಿ ಇತ್ತು. ಆದರೆ ಇವರಂತೆ ಬ್ಯಾಟ್ ಮಾಡುವ ಪೃಥ್ವಿ ಶಾ ತಂಡಕ್ಕೆ ಎಂಟ್ರಿ ನೀಡುತ್ತಿದ್ದಂತೆ ಅಭಿಮಾನಿಗಳಿಗೆ ಡಬಲ್ ಖುಷಿ.

ಟೀಮ್ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದ ಪೃಥ್ವಿ ಶಾ, ಬಳಿಕ ಗಾಯ ಹಾಗೂ ಫಾರ್ಮ್ ಸಮಸ್ಯೆಯಿಂದ ಬಳಲಿದರು. ಅಲ್ಲದೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಆದರೆ ಈಗ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವ ಯಂಗ್ ಪ್ಲೇಯರ್ ಅಬ್ಬರ ನಡೆಸಿದ್ದಾರೆ. ಪೃಥ್ವಿ ಶಾ ಮೂರು ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದು, ತಂಡಕ್ಕೆ ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ.
ಪೃಥ್ವಿ ಶಾ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇದುವರೆಗೆ 8 ಪಂದ್ಯಗಳನ್ನು ಆಡುವ ಅವಕಾಶ ಪೃಥ್ವಿಗೆ ಸಿಕ್ಕಿದೆ. ಅವರು 43 ರ ಸರಾಸರಿಯಲ್ಲಿ 291 ರನ್ ಗಳಿಸಿದ್ದಾರೆ. ಈ ಎಂಟು ಇನ್ನಿಂಗ್ಸ್‌ಗಳಲ್ಲಿ ಅವರು ಒಂದೇ ಒಂದು ಶತಕ ಗಳಿಸಿಲ್ಲ. ಈ ವೇಳೆ ಅವರ ಗರಿಷ್ಠ ಸ್ಕೋರ್ 97 ರನ್. ಕಳೆದ ಮೂರು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವ ಪೃಥ್ವಿ ತಮ್ಮ ಸ್ಥಿರ ಪ್ರದರ್ಶನದಿಂದ ಆಯ್ಕೆದಾರರ ಗಮನ ಸೆಳೆಯುತ್ತಿದ್ದಾರೆ.

ಈಗ ಟೀಮ್ ಇಂಡಿಯಾದಲ್ಲಿ ಸಮಿಕರಣ ಬದಲಾಗಿದೆ. ಹಲವು ಬದಲಾವಣೆಗಳು ಆಗಿವೆ. ಟೀಮ್ ಇಂಡಿಯಾದ ನೂತನ ಕೋಚ್ ಸ್ಥಾನವನ್ನು ಗೌತಮ್ ಗಂಭೀರ್ ಅವರು ಅಲಂಕರಿಸಿದ್ದಾರೆ. ಅವರಿಗೆ ಪೃಥ್ವಿ ಅವರ ಬ್ಯಾಟಿಂಗ್ ಧಾಟಿ ತುಂಬ ಇಷ್ಟ. ಇವರ ಆಟವನ್ನು ಗಂಭೀರ್ ಹಲವು ಬಾರಿ ಹೊಗಳಿದ್ದಾರೆ. ಪೃಥ್ವಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಅವರಿಗೆ ಈ ಋತುವಿನಲ್ಲಿ ಅವಕಾಶ ಲಭಿಸಿದರೆ, ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.