IND vs BAN: ಟೆಸ್ಟ್ ಸರಣಿ ನಂತರ ರವಿಚಂದ್ರನ್ ಅಶ್ವಿನ್ ನಿವೃತ್ತಿಯಾಗಲಿದ್ದಾರಾ?
ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯ ಕಾನ್ಪುರದ ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡು ಪಂದ್ಯ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ನಿವೃತ್ತಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.
ಟೀಮ್ ಇಂಡಿಯಾ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದವರಲ್ಲಿ ಎರಡನೇ ಸ್ಥಾನದಲ್ಲಿರುವ ಅಶ್ವಿನ್ ಅವರು ಯಾವಾಗ ನಿವೃತ್ತಿಯಾಗಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಈಗಾಗಲೇ ಅವರು ವಿಶ್ವ ದಿಗ್ಗಜ ಬೌಲರ್‌ಗಳ ಸಾಲಿನಲ್ಲಿ ಸಾಧನೆ ಮಾಡಿದ್ದಾರೆ.

ಅಶ್ವಿನ್ ನಿವೃತ್ತಿ?
ಅಶ್ವಿನ್ ಭಾರತ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದಾರೆ. ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವಲ್ಲಿ ಅಶ್ವಿನ್ ಮಾತ್ರ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆಗಿಂತ ಹಿಂದಿದ್ದಾರೆ. ನಂ.1 ಸ್ಥಾನಕ್ಕೇರುವ ಗುರಿ ಇನ್ನೂ ಉಳಿದಿದ್ದರೂ, ಅಶ್ವಿನ್ ತಮ್ಮ ಆಟದ ಮೇಲಿನ ಪ್ರೀತಿಗಾಗಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದ್ದಾರೆ. ತಮಿಳುನಾಡು ಮೂಲದ ಈ ಕ್ರಿಕೆಟಿಗ ನಿವೃತ್ತಿಯ ಬಗ್ಗೆ ಕೇಳಿದಾಗ, ಆಟದ ಮೇಲಿನ ಪ್ರೀತಿ ಕೊನೆಗೊಂಡ ದಿನ, ಆ ದಿನ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದಾರೆ.
{document1}
ಸಂದರ್ಶನವೊಂದರಲ್ಲಿ ಅಶ್ವಿನ್ ಅವರಿಗೆ 40 ವರ್ಷಗಳ ಕಾಲ ಕ್ರಿಕೆಟ್ ಆಡಬಹುದೇ ಎಂದು ಕೇಳಿದಾಗ, 'ನನ್ನ ಮನಸ್ಸಿನಲ್ಲಿ ಅಂತಹದ್ದೇನೂ ಇಲ್ಲ. ನಾನು ನಿವೃತ್ತಿಯನ್ನು ಒಂದು ದಿನ ತೆಗೆದುಕೊಳ್ಳುತ್ತೇನೆ. ಏಕೆಂದರೆ ನೀವು ವಯಸ್ಸಾದಾಗ ಉತ್ತಮ ಪ್ರದರ್ಶನ ನೀಡಲು ಪ್ರತಿದಿನ ಹೆಚ್ಚು ಪ್ರಯತ್ನವನ್ನು ಮಾಡಬೇಕಾಗುತ್ತದೆ. ಇದು ಒಂದೇ ಅಲ್ಲ. ಕಳೆದ 3-4 ವರ್ಷಗಳಲ್ಲಿ ನಾನು ಸಾಕಷ್ಟು ಪ್ರಯತ್ನಿಸಿದ್ದೇನೆ. ನಾನು (ನಿವೃತ್ತಿ) ನಿರ್ಧರಿಸಿಲ್ಲ. ಆದರೆ ನನ್ನನ್ನು ಸುಧಾರಿಸಲು ಆಗುವುದಿಲ್ಲ ಎನ್ನುವ ದಿನ ನಾನು ಆಟವನ್ನು ಬಿಡುತ್ತೇನೆ ಎಂದು ಉತ್ತರಿಸಿದ್ದಾರೆ.
ಕುಂಬ್ಳೆ ದಾಖಲೆ ಮುರಿಯುವ ಬಗ್ಗೆ ಹೇಳಿದ್ದೇನು?
ಅನಿಲ್ ಕುಂಬ್ಳೆ ಅವರ ದಾಖಲೆ ಮುರಿದಿರುವ ಬಗ್ಗೆ ಅಶ್ವಿನ್ ಮಾತನಾಡಿದ್ದು, 'ನಾನು ನನಗಾಗಿ ಯಾವುದೇ ಗುರಿ ಇಟ್ಟುಕೊಂಡಿಲ್ಲ. ಅನಿಲ್ ಭಾಯ್ ಅವರ ದಾಖಲೆಯನ್ನು ನಾನು ಮುರಿಯಬೇಕೆಂದು ಅಂದುಕೊಂಡಿದ್ದೇನೆ. ಆದರೆ ನಾನು ದಿನದಿಂದ ದಿನಕ್ಕೆ ಸಂತೋಷವಾಗಿದ್ದೇನೆ. ಗುರಿಗಳನ್ನು ಹೊಂದಿಸುವ ಮೂಲಕ ಆಟದ ಮೇಲಿನ ನನ್ನ ಪ್ರೀತಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.
'ನಾನು ಕ್ರಿಕೆಟ್‌ನ ಖುಷಿಯನ್ನು ಹಿಡಿದಿಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅದನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ನಾನು ಭಾವಿಸಿದಾಗ ದೂರ ಹೋಗುತ್ತೇನೆ. ನಾವೆಲ್ಲರೂ ಆಡುತ್ತಿದ್ದೇವೆ ಮುಂದೆ ನಾವೆಲ್ಲರೂ ಹೊರಡಬೇಕು. ಬೇರೆಯವರು ಬಂದು ಉತ್ತಮವಾದುದ್ದನ್ನು ಮಾಡುತ್ತಾರೆ. ಇದು ಭಾರತೀಯ ಕ್ರಿಕೆಟ್ ಎಂದು ತಮ್ಮ ಸ್ಪಷ್ಟಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications