For Quick Alerts
ALLOW NOTIFICATIONS  
For Daily Alerts
 

ಟೀಮ್ ಡೇವಿಡ್‌ಗೆ ಗಾಯ: RCB ಈ ನಾಲ್ಕು ಆಟಗಾರರತ್ತ ಚಿತ್ತ

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಈ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ಬ್ಯಾಟರ್‌ ಹಾಗೂ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡುತ್ತಿದ್ದು ತಂಡ 17 ಅಂಕ ಕಲೆ ಹಾಕುವಂತೆ ಮಾಡಿದೆ. ಆರ್‌ಸಿಬಿ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಲಕ್ನೋನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಯ ಸಾಧಿಸಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಆರ್‌ಸಿಬಿ ತಂಡದ್ದಾಗಿದೆ.

ಆರ್‌ಸಿಬಿ ತಂಡದ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವಿರುದ್ಧ ಸೋಲು ಕಂಡಿತು. ಈ ಸೋಲು ಆರ್‌ಸಿಬಿ ಅಭಿಮಾನಿಗಳಿಗೆ ಹೆಚ್ಚಿನ ಪೆಟ್ಟು ನೀಡಲಿಲ್ಲ. ಆದರೆ ಈ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಟೀಮ್ ಡೇವಿಡ್ ಗಾಯಕ್ಕೆ ತುತ್ತಾಗಿದ್ದಾರೆ. ಇವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇವರು ಸೇವೆ ತಂಡ ಮಿಸ್ ಮಾಡಿಕೊಂಡರೆ ಎಂಬ ಚರ್ಚೆಗಳು ಅರಂಭವಾಗಿವೆ. ಒಂದು ವೇಳೆ ಟೀಮ್ ಡೇವಿಡ್‌ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಬಿಡಿ ಪ್ಲೇ ಆಫ್‌ಗೂ ಲಭ್ಯರಾಗದೇ ಇದ್ದಲ್ಲಿ, ಇವರ ಸ್ಥಾನ ತುಂಬುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ.

Will RCB Find the Right Replacement as Tim David Faces Injury Scare

ಟೀಮ್ ಡೇವಿಡ್‌ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು ಡೆತ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ಆಧಾರವಾಗಿದ್ದಾರೆ. ಇವರು ಆಡಿರುವ 12 ಪಂದ್ಯಗಳಲ್ಲಿ 187 ರನ್‌ ಸಿಡಿಸಿದ್ದಾರೆ. ಇದರಲ್ಲಿ 16 ಬೌಂಡರಿ, 16 ಸಿಕ್ಸರ್‌ಗಳು ಸೇರಿವೆ. ಇವರು ಪ್ಲೇ ಆಫ್‌ ಪಂದ್ಯಗಳಿಗೆ ಅಲಭ್ಯರಾದಲ್ಲಿ ಆರ್‌ಸಿಬಿ ಈ ನಾಲ್ಕು ಆಟಗಾರರನ್ನು ಖರೀದಿಸಬಹುದು.

ನ್ಯೂಜಿಲೆಂಡ್ ಪ್ಲೇಯರ್ಸ್‌ ಟಾರ್ಗೆಟ್‌

ಈಗಾಗಲೇ ಆರ್‌ಸಿಬಿ ಪರ ಆಡಿರುವ ನ್ಯೂಜಿಲೆಂಡ್‌ ತಂಡದ ಮೈಕೆಲ್ ಬ್ರೇಸ್‌ವೆಲ್ ತಂಡವನ್ನು ಸೇರುವ ಕನಸಿನಲ್ಲಿದ್ದಾರೆ. ಇವರು 2023ರ ಆವೃತ್ತಿಯಲ್ಲಿ ತಂಡವನ್ನು ಸೇರಿಕೊಂಡಿದ್ದರು. ಇವರು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಿ, ಆಪ್‌ ಸ್ಪಿನ್ ಬೌಲಿಂಗ್ ಸಹ ಮಾಡಬಲ್ಲರು. ಇನ್ನು ಕಿವೀಸ್‌ ತಂಡದ ಮಾರ್ಕ್ ಚಾಪ್ಮನ್ ಮೇಲೂ ಆರ್‌ಸಿಬಿ ಕಣ್ಣು ನೆಟ್ಟಿದೆ. ಇವರು ಮಿಡ್ಲ್ ಆರ್ಡರ್‌ ಅಥವಾ ಫಿನಿಶರ್ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ಭರವಸೆ ಮೂಡಿಸಿದ್ದಾರೆ.

Will RCB Find the Right Replacement as Tim David Faces Injury Scare

ಜಿಂಬಾಬ್ವೆ ತಂಡದ ಆಲ್‌ರೌಂಡರ್‌ ಸಿಕಂದರ್ ರಾಜ್‌ ಹಾಗೂ ಇಂಗ್ಲೆಂಡ್‌ ತಂಡದ ಸ್ಯಾಮ್‌ ಬಿಲ್ಲಿಂಗ್ಸ್‌ ಮೇಲೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಕಣ್ಣು ನೆಟ್ಟಿದ್ದಾರೆ. ಇವರಿಬ್ಬರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರಿಬ್ಬರೂ ಸಹ ಪಿಎಸ್‌ಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ನಾಲ್ವರಲ್ಲಿ ಒಬ್ಬರನ್ನು ಆರ್‌ಸಿಬಿ ಟೀಮ್ ಡೇವಿಡ್‌ ರಿಪ್ಲೇಸ್ಮೆಂಟ್ ಆಗಿ ನೋಡಿಕೊಳ್ಳಬಹುದು. ಟೀಮ್ ಡೇವಿಡ್‌ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಲಿ ಎಂಬುದೇ ಅಭಿಮಾನಿಗಳ ಆಶಯ.

Story first published: Monday, May 26, 2025, 20:44 [IST]
Other articles published on May 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+