Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2025: ಆರ್‌ಸಿಬಿ ಈ ಮೂವರು ಪ್ಲೇಯರ್‌ಗಳನ್ನು ಕೈ ಬಿಡುವ ಸಾಧ್ಯತೆ

ಬೆಂಗಳೂರು: ಬಿಸಿಸಿಐ ಇತ್ತೀಚಿಗೆ ರಿಟೇನ್ಶನ್ ಪಾಲೀಸಿ ಲೀಸ್ಟ್ ರಿಲೀಸ್ ಮಾಡಿದೆ. ಇದರ ಅಡಿಯಲ್ಲಿ, ತಂಡ ಕನಿಷ್ಠ ಆರು ಜರನ್ನು ಉಳಿಸಿಕೊಳ್ಳುವ ಅಕವಾಶವನ್ನು ನೀಡಲಾಗಿದೆ. ಈ ನಿಟ್ಟನಲ್ಲಿ ಎಲ್ಲ ತಂಡಗಳು ಯಾವ ಪ್ಲೇಯರ್‌ನನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂಬ ಲೆಕ್ಕಾಚಾರವನ್ನು ನಡೆಸಿವೆ. ಆರ್‌ಸಿಬಿ ಸಹ ಇದಕ್ಕೆ ಹೊರತಾಗಿಲ್ಲ.

ಅಕ್ಟೋಬರ್‌ 31ರ ಒಳಗೆ ಎಲ್ಲ ತಂಡಗಳು ಉಳಿಸಿಕೊಂಡ ಹಾಗೂ ಕೈ ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕು. ಏಕಂದರೆ ಈ ಬಾರಿ ಐಪಿಎಲ್‌ ಮೆಗಾ ಹರಾಜು ನಡೆಯಲಿದೆ. ಆರ್‌ಸಿಬಿ ಯಾವ ಪ್ಲೇಯರ್‌ನನ್ನು ಕೈ ಬಿಡಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಇದಕ್ಕೆ ಉತ್ತರ ಇಲ್ಲಿದೆ.

Will RCB Release Yash Dayal Maxwell and Du Plessis Ahead of IPL 2025 Auction

ಆರ್‌ಸಿಬಿ ಕಳೆದ ಕೆಲವು ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಕಳೆದ ಆವೃತ್ತಿಯಲ್ಲಂತೂ ಕೊನೆಯಲ್ಲಿ ಸತತ ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ಪ್ರವೇಶ ಪಡೆದಿತ್ತು. ಆದರೆ ಪ್ಲೇ ಆಫ್‌ನಲ್ಲಿ ಬೆಂಗಳೂರು ತಂಡ ರಾಜಸ್ಥಾನ ವಿರುದ್ಧ ಸೋತು ಹೊರನಡೆದಿತ್ತು. ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ, ತನ್ನ ಪ್ರಶಸ್ತಿ ಬರವನ್ನು ಈ ಬಾರಿ ಕೊನೆಗೊಳಿಸಬೇಕು ಎಂಬ ಆಸೆ ಹೊಂದಿದೆ. ಈ ವರ್ಷ ಕೈ ಬಿಡುವ ಆಟಗಾರರ ಪಟ್ಟಿ ಇಲ್ಲಿದೆ.

ಫಾಫ್ ಡುಪ್ಲೇಸಿಸ್

ಆರ್‌ಸಿಬಿ ಈ ಬಾರಿ ಕೈ ಬಿಡುವ ಆಟಗಾರರ ಪಟ್ಟಿಯನ್ನು ನೋಡಿದಾಗ, ಈ ಪಟ್ಟಿಯಲ್ಲಿ ಆರ್‌ಸಿಬಿ ನಾಯಕ ಫಾಫ್‌ ಡುಪ್ಲೇಸಿಸ್‌ಗೆ ಎದ್ದು ಕಾಣುತ್ತಾರೆ.
ಫಾಫ್ ಆರ್‌ಸಿಬಿ ಪರ ಕಳೆದ 3 ಋತುಗಳಲ್ಲಿ ಒಟ್ಟು 1,636 ರನ್ ಗಳಿಸಿದ್ದಾರೆ. ಅವರು ಇತ್ತೀಚೆಗೆ ತಮ್ಮ ನಾಯಕತ್ವದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆದರೆ ಇವರ ವಯಸ್ಸು ಹೆಚ್ಚಿದ್ದು, ಆರ್‌ಸಿಬಿ ಭವಿಷ್ಯದ ತಂಡವನ್ನು ಕಟ್ಟು ನಿಟ್ಟಿನಲ್ಲಿ ಚಿತ್ತ ನೆಟ್ಟಿದೆ.

Will RCB Release Yash Dayal Maxwell and Du Plessis Ahead of IPL 2025 Auction

ಯಶ್ ದಯಾಳ್

ಕಳೆದ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಗುಜರಾತ್‌ ಟೈಟನ್ಸ್‌ನಿಂದ ರಿಲೀಸ್ ಆದ ಯಶ್‌ ದಯಾಳ್‌ಗೆ ಹಣವನ್ನು ಹೂಡಿತ್ತು. ಈ ಪ್ಲೇಯರ್‌ಗೆ ಆರ್‌ಸಿಬಿ 5 ಕೋಟಿ ರೂ. ಹಣವನ್ನು ನೀಡಿತ್ತು. ಯಶ್ ತನ್ನ ಮೊದಲ ಋತುವಿನಲ್ಲಿ ಬೆಂಗಳೂರು ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇವರು ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಮೊನಚಾದ ದಾಳಿ ಸಂಘಟಿಸಬಲ್ಲ ಪ್ಲೇಯರ್‌. ಇನ್ನು ಆರ್‌ಸಿಬಿ ಇವರನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ಮಾಡಿದರೆ, ಇವರಿಗೆ ಕನಿಷ್ಠ 11 ಕೋಟಿ ರೂ. ನೀಡಬೇಕಾಗುತ್ತದೆ. ಹೀಗಾಗಿ ಇವರನ್ನು ಕೈ ಬಿಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆರ್‌ಸಿಬಿ ಪರ ಕೆಲವು ವರ್ಷಗಳಿಂದ ಬ್ಯಾಟ್ ಮಾಡುತ್ತಿರುವ ಆಟಗಾರ. ಇವರು ಆರ್‌ಸಿಬಿ ಪರ 52 ಪಂದ್ಯಗಳಲ್ಲಿ 1,266 ರನ್ ಗಳಿಸಿದ್ದಾರೆ. ಕಳೆದ ಋತುವಿನಲ್ಲಿ, ಇವರ ಕಳಪೆ ಪ್ರದರ್ಶನ ಫ್ರಾಂಚೈಸಿ ಇವರನ್ನು ರಿಲೀಸ್ ಮಾಡುವಂತೆ ಒತ್ತಾಯಿಸಿದಂತಿದೆ. ಇನ್ನು ಇವರ ಆಟಕ್ಕೆ ಹೋಲಿಸಿದರೆ, ಇವರಿಗೆ ಹೆಚ್ಚಿನ ಹಣವನ್ನು ನೀಡಿ ಉಳಿಸಿಕೊಳ್ಳ ಬೇಕಾಗುತ್ತದೆ. ಹೀಗಾಗಿ ಇವರನ್ನು ಆರ್‌ಸಿಬಿ ಕೈ ಬಿಡುವ ಸಾಧ್ಯತೆ ಇದೆ.

Story first published: Saturday, October 12, 2024, 8:50 [IST]
Other articles published on Oct 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+