IPL Auction 2024: ಹರಾಜಿನಲ್ಲಿ ಆರ್‌ಸಿಬಿ ಮಾಡಿದ ಈ ಒಂದು ತಪ್ಪು ದುಬಾರಿಯಾಗಲಿದೆ?
ಐಪಿಎಲ್‌ನ ಮುಂದಿನ ಸೀಸನ್ ಅಂದರೆ ಐಪಿಎಲ್ 2024 ಗಾಗಿ ಆಯೋಜಿಸಲಾದ ಹರಾಜು ಈಗ ಮುಗಿದಿದೆ. ಈ ಹರಾಜಿನಲ್ಲಿ ಒಟ್ಟು 230 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, 72 ಆಟಗಾರರನ್ನು ಮಾಲೀಕರು ಖರೀದಿಸಿದ್ದಾರೆ. ಎಲ್ಲಾ 10 ಐಪಿಎಲ್ ತಂಡಗಳು ಆಟಗಾರರನ್ನು ಖರೀದಿಸಿದ್ದು, ಮುಂಬರುವ ಐಪಿಎಲ್‌ಗೆ ಭರದ ಸಿದ್ಧತೆ ನಡೆಸಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಹರಾಜಿನಲ್ಲಿ ಒಟ್ಟು 6 ಆಟಗಾರರನ್ನು ಖರೀದಿಸಿದೆ. ಇದಕ್ಕಾಗಿ ಆರ್‌ಸಿಬಿ ಒಟ್ಟು 20.40 ಕೋಟಿ ರೂ. ಇಷ್ಟು ಖರ್ಚು ಮಾಡಿದೆ. ಇನ್ನು ಆರ್‌ಸಿಬಿ ಪರ್ಸ್‌ನಲ್ಲಿ 2.85 ಕೋಟಿ ರೂಪಾಯಿ ಪರ್ಸ್‌ನಲ್ಲಿ ಉಳಿದಿದೆ. ಆದಾಗ್ಯೂ, ಅವರ ತಂಡವು ಸಂಪೂರ್ಣವಾಗಿ ತುಂಬಿತ್ತು. RCB ಐಪಿಎಲ್ 2024 ಗಾಗಿ ತನ್ನ ತಂಡದಲ್ಲಿ ಗರಿಷ್ಠ 25 ಆಟಗಾರನ್ನು ಖರೀದಿಸುವ ಅವಕಾಶ ಇತ್ತು. ಆರ್‌ಸಿಬಿ ಕಟ್ಟಿದ ತಂಡದಲ್ಲಿ ಕೆಲವು ನ್ಯೂನತೆಗಳು ತಂಡದಲ್ಲಿ ಗೋಚರಿಸುತ್ತವೆ.

ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆಡುತ್ತಿರುವ ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಒಬ್ಬ ಪ್ರಮುಖ ಸ್ಪಿನ್ ಬೌಲರ್ ಅನ್ನು ಖರೀದಿಸಿಲ್ಲ. ಆರ್‌ಸಿಬಿ ಖರೀದಿಸಿದ ಪ್ಲೇಯರ್‌ಗಳಲ್ಲಿ ನುರಿತ ಸ್ಪಿನ್ ಬೌಲರ್ ಇಲ್ಲ. ಸ್ಪಿನ್ ಬೌಲರ್ ರೂಪದಲ್ಲಿ ಆರ್‌ಸಿಬಿ ಸ್ವಪ್ನಿಲ್ ಸಿಂಗ್ ಅವರಿಗೆ ಸ್ಥಾನ ನೀಡಿದೆ.
ಅವರು ಸ್ಪಿನ್ ಆಲ್ ರೌಂಡರ್ ಮತ್ತು ಅನ್ ಕ್ಯಾಪ್ಡ್ ಆಟಗಾರ. ಅವರನ್ನು ಹೊರತುಪಡಿಸಿ, ಖರೀದಿಸಿದ ಆರು ಆಟಗಾರರಲ್ಲಿ ಯಾವೊಬ್ಬ ಪ್ಲೇಯರ್ ಚೆಂಡನ್ನು ತಿರುಗಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಆರ್‌ಸಿಬಿ ತಂಡವು ಕಳೆದ ಹಲವಾರು ವರ್ಷಗಳಿಂದ ತನ್ನ ತಂಡದಲ್ಲಿ ಕನಿಷ್ಠ ಒಬ್ಬ ಮುಖ್ಯ ಸ್ಪಿನ್ನರ್‌ನನ್ನು ಇರಿಸುತ್ತಿದೆ. ಮೊದಲು ಯುಜುವೇಂದ್ರ ಚಹಾಲ್ ಅವರ ತಂಡದ ಖಾಯಂ ಸದಸ್ಯರಾಗಿದ್ದರು. ಅವರ ನಿರ್ಗಮನದ ನಂತರ, ಶ್ರೀಲಂಕಾದ ವನಿಂದು ಹಸರಂಗಾ ಈ ತಂಡದ ಭಾಗವಾದರು. ಈ ಇಬ್ಬರೂ ಸ್ಪಿನ್ ಬೌಲರ್‌ಗಳು ಆರ್‌ಸಿಬಿ ಪರ ವರ್ಷಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಬಾರಿಯ ಹರಾಜಿಗೂ ಮುನ್ನ ಆರ್‌ಸಿಬಿ ಹಸರಂಗ ತಂಡವನ್ನು ಬಿಡುಗಡೆ ಮಾಡಿತ್ತು. ಚಿನ್ನಸ್ವಾಮಿಯಂತಹ ಸಣ್ಣ ಮತ್ತು ಬ್ಯಾಟಿಂಗ್ ಸ್ನೇಹಿ ಮೈದಾನದಲ್ಲಿ ಹೆಚ್ಚು ಅಗತ್ಯವಿರುವ ಕನಿಷ್ಠ ಒಬ್ಬ ಪ್ರಮುಖ ಸ್ಪಿನ್ನರ್ ಅನ್ನು ಆರ್‌ಸಿಬಿ ತನ್ನ ತಂಡದಲ್ಲಿ ಸೇರಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರ್‌ಸಿಬಿ ಒಬ್ಬ ಮುಖ್ಯ ಸ್ಪಿನ್ ಬೌಲರ್ ಅನ್ನು ಖರೀದಿಸಲಿಲ್ಲ. ಮತ್ತು ಇಲ್ಲಿ ಅವರು ದೊಡ್ಡ ತಪ್ಪು ಮಾಡಿತು. ಬೆಂಗಳೂರು ತಂಡದ ಪರ ಕಾಣಿಸಿಕೊಳ್ಳುವ ಸ್ಪಿನ್ ಬೌಲರ್‌ಗಳೆಂದರೆ ಕರಣ್ ಶರ್ಮಾ, ಮಯಾಂಕ್ ದಾಗರ್, ಹಿಮಾಂಶು ಶರ್ಮಾ, ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸ್ವಪ್ನಿಲ್ ಸಿಂಗ್. ಆರ್‌ಸಿಬಿಯ ಈ ತಪ್ಪು ಐಪಿಎಲ್ 2024ರಲ್ಲಿ ಅವರಿಗೆ ದುಬಾರಿಯಾಗಬಹುದು.
ಈ ಬಾರಿ ವೇಗದ ಬೌಲರ್‌ಗಳ ವಿಷಯದಲ್ಲಿ ಆರ್‌ಸಿಬಿ ಉತ್ತಮ ಕೆಲಸ ಮಾಡಿದೆ. ಅವರು ವೆಸ್ಟ್ ಇಂಡೀಸ್‌ನ ಅಲ್ಜಾರಿ ಜೋಸೆಫ್ ಮತ್ತು ನ್ಯೂಜಿಲೆಂಡ್‌ನ ಲಾಕಿ ಫರ್ಗುಸನ್ ಅವರೊಂದಿಗೆ ಭಾರತದ ಎಡಗೈ ವೇಗದ ಬೌಲರ್ ಯಶ್ ದಯಾಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೊಹಮ್ಮದ್ ಸಿರಾಜ್ ಮತ್ತು ಕ್ಯಾಮರೂನ್ ಗ್ರೀನ್ ಅವರಂತಹ ಬೌಲರ್‌ಗಳ ಆಯ್ಕೆಯೂ ತಂಡಕ್ಕಿದೆ. ಈ ತಂಡದ ಬೌಲಿಂಗ್ ಬಲಿಷ್ಠವಾಗಿರುವಂತಿದೆ.
ಆರ್‌ಸಿಬಿ ಮುಖ್ಯ ಕೋಚ್ ಹರಾಜಿನ ಮುಂಚೆಯೇ ಅವರು ವಿರಾಟ್ ಕೊಹ್ಲಿ, ಫಾಫ್ ಡು-ಪ್ಲೆಸಿಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮೆರಾನ್ ಗ್ರೀನ್ ನಮ್ಮ ತಂಡದ ಬ್ಯಾಟಿಂಗ್ ಬೆನ್ನೆಲೆಬು ಎಂದು ತಿಳಿಸಿದ್ದರು.
ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ವೆಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವಿಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ , ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಮಯಾಂಕ್ ದಾಗರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಲ್, ಟಾಮ್ ಕರ್ರಾನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications