Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rishabh Pant: ವಿಕೆಟ್ ಕೀಪಿಂಗ್ ತೊರೆಯುತ್ತಾರಾ ಡೆಲ್ಲಿ ಡ್ಯಾಶರ್?; ವೈರಲ್ ಆಯ್ತು ವಿಡಿಯೋ!

ಆಗಸ್ಟ್ 19 ಸೋಮವಾರ, ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ವಿಶ್ವ ಕ್ರಿಕೆಟ್‌ನಲ್ಲಿ ವಿಭಿನ್ನ ಶೈಲಿಯ ಆಟಕ್ಕೆ ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ತಮ್ಮ ವಿಕೆಟ್‌ ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಂತ್ ಸ್ಟಂಪ್ ಹಿಂದೆ ನಿಂತು ಬ್ಯಾಟರ್‌ಗಳನ್ನು ತಮಾಷೆಗಾಗಿ ರೇಗಿಸುವ ವಿಡಿಯೋಗಳನ್ನು ನೋಡಿರುತ್ತೇವೆ.

ಇದೀಗ ರಿಷಬ್ ಪಂತ್ ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ರಿಷಬ್ ವಿಕೆಟ್ ಕೀಪಿಂಗ್ ತೊರೆಯುತ್ತಿದ್ದಾರಾ? ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Will Rishabh Pant quit wicket keeping

ಡೆಲ್ಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಟಿ20 ಟೂರ್ನಿಯ ಮೊದಲ ಆವೃತ್ತಿ ಆಗಸ್ಟ್ 17 ರಿಂದ ಆರಂಭವಾಗಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ರಿಷಭ್ ಪಂತ್ ಕೂಡ ಕಾಣಿಸಿಕೊಂಡಿದ್ದರು. ರಿಷಬ್ ಪಂತ್ ಓಲ್ಡ್ ಡೆಲ್ಲಿ ತಂಡದ ಪರ ಆಡುತ್ತಿದ್ದಾರೆ. ಆದರೆ, ರಿಷಬ್ ಪಂತ್ ಬಳಗ ದಕ್ಷಿಣ ಡೆಲ್ಲಿ ಸ್ಟಾರ್ಸ್ ಎದುರು ಸೋಲು ಕಂಡಿದೆ. ಈ ಪಂದ್ಯದ ವೇಳೆಯೇ ಪಂತ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸುವ ಕೆಲಸ ಮಾಡಿದ್ದಾರೆ.

ಶನಿವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಿಷಬ್ ಪಂತ್ ಬೌಲಿಂಗ್ ಮಾಡಲು ಬಂದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಇದು ಬಹಳ ಅಪರೂಪದ ಘಟನೆ ಆಗಿತ್ತು. ಈ ಹಿಂದೆ ಎಂದಿಗೂ ಪಂತ್ ಯಾವ ಪಂದ್ಯದಲ್ಲೂ ಬೌಲಿಂಗ್ ಮಾಡಿರಲಿಲ್ಲ. ಕೇವಲ ಅಭ್ಯಾಸ ಮಾಡುವಾಗ ಒಂದೆರೆಡು ಬಾರಿ ಬೌಲಿಂಗ್ ಮಾಡಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಆದರೆ ಡಿಪಿಎಲ್ ಟೂರ್ನಿಯ ಪಂದ್ಯದಲ್ಲಿ ಪಂತ್ ಕೇವಲ ಒಂದು ಬೌಲ್ ಮಾತ್ರ ಮಾಡಿದರು. 198 ರನ್‌ಗಳ ಗುರಿ ಬೆನ್ನತ್ತಿದ ಸೌತ್ ಸೂಪರ್‌ ಸ್ಟಾರ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ ಕೇವಲ 1 ರನ್ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ಮಾಡಲು ಮುಂದಾದ ಪಂತ್ ಫುಲ್-ಟಾಸ್ ಬೌಲ್ ಮಾಡಿದರು. ಇದನ್ನು ಬ್ಯಾಟರ್ ಸುಲಭವಾಗಿ ಲಾಂಗ್ ಆನ್‌ಗೆ ತಳ್ಳಿ ಒಂದು ರನ್ ಗಳಿಸಿದರು. ಇದರೊಂದಿಗೆ ಸೌತ್ ಸೂಪರ್‌ಸ್ಟಾರ್ಸ್ ಪಂದ್ಯವನ್ನು 5 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ರಿಷಬ್ ಪಂತ್ ಬೌಲಿಂಗ್ ಮಾಡುವ ವೀಡಿಯೊವನ್ನು ನೋಡಿದ ನಂತರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅವರು ವಿಕೆಟ್ ಕೀಪಿಂಗ್ ತೊರೆಯುತ್ತಿದ್ದಾರೆಯೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಹೇ ಇದು ಏನು! ರಿಷಬ್ ಪಂತ್ ವಿಕೆಟ್ ಕೀಪಿಂಗ್ ಬಿಟ್ಟು ಬೌಲಿಂಗ್ ಮಾಡ್ತಾರಾ? ಎಂದು ನೆಟ್ಟಿಗನೊಬ್ಬ ಪ್ರಶ್ನೆ ಕೇಳಿದ್ದಾರೆ. 'ಈಗ ವಿಕೆಟ್‌ಕೀಪರ್‌ಗಳೂ ಬೌಲಿಂಗ್‌ ಆರಂಭಿಸಿದ್ದಾರೆ. ಗೌತಮ್‌ ಗಂಭೀರ್‌ ಆಲ್‌ರೌಂಡರ್‌ಗಳ ಯುಗ' ಎಂದು ಮತ್ತೊಬ್ಬ ಬರೆದುಕೊಂಡಿದ್ದಾರೆ.

ರಾಹುಲ್‌ಗೆ ಚಾನ್ಸ್!

ಒಂದು ವೇಳೆ ಪಂತ್ ವಿಕೆಟ್ ಕೀಪಿಂಗ್ ತೊರೆದರೆ, ಈ ಸ್ಥಾನಕ್ಕೆ ಕೆಎಲ್ ರಾಹುಲ್ ನೇಮಕಕೊಳ್ಳಬಹುದು. ಕೆಎಲ್ ರಾಹುಲ್ ಕೂಡ ವಿಕೆಟ್ ಕೀಪಿಂಗ್ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೇ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಪಂತ್ ಅವರನ್ನು ಅಲ್‌ರೌಂಡರ್ ಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಾಗಿದೆ.

Story first published: Monday, August 19, 2024, 8:15 [IST]
Other articles published on Aug 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+