Rohit Sharma: ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ನಿವೃತ್ತಿ?
ಟೀಮ್ ಇಂಡಿಯಾ ಸದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ಟೀಮ್ ಇಂಡಿಯಾದ ಆಟಗಾರರು ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆಎಲ್ ರಾಹುಲ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ ಎಲ್ಲರೂ ತಮ್ಮ ಕಾಣಿಕೆ ನೀಡುತ್ತಿದ್ದಾರೆ. ರೋಹಿತ್ ಶರ್ಮಾ ಸಹ ತಮ್ಮ ನೈಜ್ಯ ಆಟವನ್ನು ಆಡುತ್ತಿದ್ದಾರೆ. ಆದರೆ ಇವರು ಇನ್ನು ಆರ್ಭಟ ನಡೆಸಿಲ್ಲ. ಫೈನಲ್‌ನಲ್ಲಿ ಆರ್ಭಟಿಸುವ ಸೂಚನೆಯನ್ನು ನೀಡಿದ್ದಾರೆ.
ರೋಹಿತ್ ಶರ್ಮಾ 37 ವರ್ಷದವರಾಗಿದ್ದಾರೆ. ಇದರಿಂದ ಇವರು ಯಾವಾಗ ನಿವೃತ್ತಿ ಪಡೆಯುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ಬಳಿಕ ಹಿಟ್ ಮ್ಯಾನ್, ವಿರಾಟ್ ಕೊಹ್ಲಿ, ಜಡೇಜಾ ಈ ಫಾರ್ಮೆಟ್‌ಗೆ ವಿದಾಯ ಹೇಳಿದ್ದರು. ಈಗ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಬಳಿಕ ನಿವೃತ್ತಿ ಹೊಂದುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಕೆಲವು ವರದಿಗಳು ಸಹ ಹೌದು ಎಂದು ತಿಳಿಸುತ್ತಿವೆ.

ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಮುನ್ನಡೆಸಿ ಎಲ್ಲ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳುವ ಲೆಕ್ಕಾಚಾರವನ್ನು ರೋಹಿತ್ ಶರ್ಮಾ ಮಾಡಿದ್ದಾರೆ ಎಂಬ ವರದಿಗಳು ಬರುತ್ತಿವೆ. ಸದ್ಯಕ್ಕಂತೂ ಟೀಮ್ ಇಂಡಿಯಾದ ಫಾರ್ಮ್ ನೋಡಿದರೆ ನಿಶ್ಚಿತವಾಗಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಹಾಟ್ ಫೆವರೀಟ್. ಒಂದು ವೇಳೆ ರೋಹಿತ್ ಶರ್ಮಾ ಈ ಟೂರ್ನಿ ಮುಗಿದ ಬಳಿಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದೇ ಆದಲ್ಲಿ ಟೀಮ್ ಇಂಡಿಯಾಕ್ಕೆ ದೊಡ್ಡ ನಷ್ಟವಾಗುತ್ತದೆ. ಸ್ಫೋಟಕ ಬ್ಯಾಟರ್ ಹಾಗೂ ಒಬ್ಬ ಒಳ್ಳೆಯ ನಾಯಕನನ್ನು ತಂಡ ಕಳೆದುಕೊಳ್ಳಲಿದೆ.
ರೋಹಿತ್ ಶರ್ಮಾ ನಿವೃತ್ತಿಯನ್ನು ಹೊಂದಿದ್ದೇ ಆದಲ್ಲಿ ಬರೀ ಏಕದಿನ ಕ್ರಿಕೆಟ್‌ಗೆ ಅಷ್ಟೇ ಅಲ್ಲ. ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದಕ್ಕೆಲ್ಲಾ ರೋಹಿತ್ ಶರ್ಮಾ ಅವರೇ ಪುಷ್ಠಿಯನ್ನು ನೀಡಬೇಕಿದೆ. ಇವರು ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ನಾನು ಇನ್ನು ಕೆಲವು ವರ್ಷ ಕ್ರಿಕೆಟ್ ಆಡಬಹುದು ಎಂದೇ ತಿಳಿಸಿದ್ದರು. ಅಲ್ಲದೆ ತಮ್ಮ ನಿವೃತ್ತಿಯ ಊಹಾಪೋಹಗಳಿಗೆ ತೆರೆ ಏಳೆದಿದ್ದರು.

ಇನ್ನು ಟೀಮ್ ಇಂಡಿಯಾ ತನ್ನ ಮುಂದಿನ ಏಕದಿನ ಪಂದ್ಯವನ್ನು ಅಗಸ್ಟ್‌ನಲ್ಲಿ ಆಡಲಿದೆ. ಹೀಗಾಗಿ ರೋಹಿತ್ ಶರ್ಮಾ ಅವರಿಗೆ ಇದು ಕೊನೆಯ ಏಕದಿನ ಪಂದ್ಯ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications