ಗಿಲ್ ಚಿಂತೆ ಹೆಚ್ಚಿಸಿದೆ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್
ಸೆ.9 ರಿಂದ ಯುಎಇನಲ್ಲಿ ಏಷ್ಯಾ ಕಪ್ ಆಯೋಜಿಸಲಾಗುತ್ತಿದೆ. ಈ ಟೂರ್ನಿಗಾಗಿ ಈಗಾಗಲೇ ಎಲ್ಲ 8 ತಂಡಗಳು ಭರದ ಸಿದ್ಧತೆಗಳನ್ನು ನಡೆಸಿವೆ. ಈ ಟೂರ್ನಿಗಾಗಿ ಟೀಮ್ ಇಂಡಿಯಾವನ್ನು ಈಗಾಗಲೇ ಪ್ರಕಟಿಸಲಾಗಿದೆ. ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಇನ್ನು ಶುಭಮನ್ ಗಿಲ್ ಅವರು ಉಪನಾಯಕತ್ವದ ಹೊಣೆಯನ್ನು ನೀಡಲಾಗಿದೆ. ವರ್ಷಗಳ ಬಳಿಕ ಭಾರತ ತಂಡಕ್ಕೆ ಶುಭಮನ್ ಗಿಲ್ ಕಂ ಬ್ಯಾಕ್ ಮಾಡಿದ್ದಾರೆ. ಆದರೆ ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ.
ಟೀಮ್ ಇಂಡಿಯಾದಲ್ಲಿ ಸದ್ಯ ಮೂವರು ಆರಂಭಿಕ ಆಟಗಾರರು ಇದ್ದಾರೆ. ಅಭಿಷೇಕ್ ಶರ್ಮಾ ಅವರನ್ನು ಹೊರಗಿಟ್ಟು ಟೀಮ್ ಮ್ಯಾನೇಜ್ಮೆಂಟ್ ಯಾವುದೇ ಯೋಚನೆ ಮಾಡುವ ಪ್ಲ್ಯಾನ್ ಇಲ್ಲ. ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್. ಇವರನ್ನು ಬಿಟ್ಟು ಶುಭಮನ್ ಗಿಲ್ ಹಾಗೂ ಸಂಜು ಸ್ಯಾಮ್ಸನ್ ಸಹ ಸ್ಥಾನ ಪಡೆದಿದ್ದಾರೆ. ಇರುವ 1 ಸ್ಥಾನಕ್ಕಾಗಿ ಇಬ್ಬರು ಆಟಗಾರರು ಕಣ್ಣು ನೆಟ್ಟಿದ್ದಾರೆ.

ಆರಂಭದಲ್ಲಿ ಶುಭಮನ್ ಗಿಲ್ ಅವರು ತಂಡಕ್ಕೆ ಸೇರಿಕೊಳ್ಳುತ್ತಿದ್ದಂತೆ ಇವರು ಆರಂಭಿಕರಾಗಿ ಕಣಕ್ಕೆ ಇಳಿಯುವುದು ಗ್ಯಾರಂಟಿ ಎಂದು ನಂಬಲಾಗಿತ್ತು. ಶುಭಮನ್ ಗಿಲ್ ಅವರಿಗೆ ಉಪನಾಯಕತ್ವದ ಪಟ್ಟವನ್ನು ನೀಡಲಾಗಿತ್ತು. ಹೀಗಾಗಿ ಗಿಲ್ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಂಕು ಸ್ಯಾಮ್ಸನ್ ಅವರು ದೇಶೀಯ ಟೂರ್ನಿಯಲ್ಲಿ ತೋರಿಸಿದ ಫಾರ್ಮ್, ಶುಭಮನ್ ಗಿಲ್ ಸ್ಥಾನದ ಮೇಲೆ ಅಪಾಯ ಕಾಡುತ್ತಿದೆ.
ಆರಂಭಿಕರಾಗಿ ಕಣಕ್ಕಿಳಿಯುವ ಕನಸು
ಇತ್ತೀಚಿಗೆ ಕೇರಳದಲ್ಲಿ ನಡೆಯುತ್ತಿರುವ ಟಿ20 ಲೀಗ್‌ನಲ್ಲಿ ಭರ್ಜರಿ ಕಂ ಬ್ಯಾಕ್ ಮಾಡಿದ್ದಾರೆ. ಇವರು ಕೊಚ್ಚಿ ಟಸ್ಕರ್ಸ್ ಪರ ಆಡಿರುವ ಸಂಜು ಸ್ಯಾಮ್ಸನ್, ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ಸಂಜ್ಯ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಒಳ್ಳೆಯ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಇವರ ಅಮೋಘ ಫಾರ್ಮ್ ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಸಂಜು ಸ್ಯಾಮ್ಸನ್ ಅವರ ಭರ್ಜರಿ ಫಾರ್ಮ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿದೆ. ಒಂದು ವೇಳೆ ಇವರು ತಂಡದಲ್ಲಿ ಸ್ಥಾನ ಪಡೆದಲ್ಲಿ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕೆ ಇಳಿಯುವುದು ಡೌಟ್ ಆಗಿದೆ. ಅಲ್ಲದೆ ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು ಇಲ್ಲದೇ ಇದ್ದರೆ, ತಂಡದಿಂದ ಹೊರ ನಡೆಯಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications